Chitkala Biradar: ಕಿರುತೆರೆಯಲ್ಲಿ ಅಮ್ಮಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು.. ಸುಧಾಮೂರ್ತಿ ಪಾತ್ರದಲ್ಲಿ ಚಿತ್ಕಲಾ ಬಿರಾದರ್

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಕನ್ನಡತಿ'ಯೂ ಒಂದು. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷನ ತಾಯಿ ರತ್ನಮಾಲಾ ಆಲಿಯಾಸ್ ಅಮ್ಮಮ್ಮ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಚಿತ್ಕಲಾ ಬಿರಾದಾರ್ ಇದೀಗ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಹೌದು, 'ಕನ್ನಡತಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಚಿತ್ಕಲಾ ಬಿರಾದಾರ್ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಬೃಂದಾವನ'ದಲ್ಲಿ ನಾಯಕನ ಅಜ್ಜಿ ಸುಧಾ ಮೂರ್ತಿಯಾಗಿ ನಟಿಸಲಿದ್ದಾರೆ ಚಿತ್ಕಲಾ ಬಿರಾದಾರ್. ರತ್ನಮಾಲಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿರುವ ಚಿತ್ಕಲಾ ಬಿರಾದಾರ್ ಇದೀಗ ಸುಧಾಮೂರ್ತಿಯಾಗಿ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದ್ದಾರೆ.

Actress Chitkala Biradar will be seen as Sudhamurthy in the Brundavana serial

ಕಿರುತೆರೆಯ ಜೊತೆಯಲ್ಲಿ ಹಿರಿತೆರೆಯಲ್ಲಿಯೂ ಸಕ್ರಿಯರಾಗಿರುವ ಚಿತ್ಕಲಾ ಬಿರಾದಾರ್ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೂರದ ಜರ್ಮನಿ ದೇಶದಲ್ಲಿಯೂ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಇವರು 'ಬಂದೇ ಬರುತಾವ ಕಾಲ' ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ಅಮ್ಮ ಸುಮತಿ ಪಾತ್ರಕ್ಕೆ ಚಿತ್ಕಲಾ ಜೀವ ತುಂಬಿದ್ದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ಅಮ್ಮ, ಅಯ್ಯಂಗಾರ್ ಮಹಿಳೆ ಪುಷ್ಪವಲ್ಲಿಯಾಗಿ ಕಾಣಿಸಿಕೊಂಡ ಚಿತ್ಕಲಾ ಅವರಿಗೆ ಆ ಪಾತ್ರ ನೀಡಿದ ಜನಪ್ರಿಯತೆ ಅಷ್ಟಿಷ್ಟಲ್ಲ. 'ಅವನು ಮತ್ತು ಶ್ರಾವಣಿ' ಧಾರಾವಾಹಿಯ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿಯೂ ಇವರು ಬಣ್ಣ ಹಚ್ಚಿದ್ದರು.

ಉದಯ ವಾಹಿನಿಯ 'ಮನಸಾರೆ' ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡ ಚಿತ್ಕಲಾ ಅವರು ಇದೀಗ ಕನ್ನಡ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಅಮ್ಮಮ್ಮ ಹೌದು. ಕೇವಲ ಎರಡು ವರ್ಷಗಳ ಕಾಲ ಮಾತ್ರವಷ್ಟೇ ಅಮ್ಮಮ್ಮ ಪಾತ್ರ ಪ್ರಸಾರ ಕಂಡಿದ್ದರೂ ಇಂದಿಗೂ ಚಿತ್ಕಲಾ ಹೆಸರು ಕೇಳಿದ ಕೂಡಲೇ ವೀಕ್ಷಕರಿಗೆ ನೆನಪಾಗುವುದು ಅಮ್ಮಮ್ಮ ಪಾತ್ರ.

Actress Chitkala Biradar will be seen as Sudhamurthy in the Brundavana serial

ಇದೀಗ ಸುಧಾಮೂರ್ತಿ ಆಗಿ ಕಿರುತೆರೆಗೆ ಮರಳಲಿರುವ ಚಿತ್ಕಲಾ ಬಿರಾದಾರ್ ಅವರು ಹಿರಿತೆರೆ ಪಯಣ ಶುರುವಾಗಿದ್ದು 'ಧರ್ಮ ದೇವತೆ' ಸಿನಿಮಾ ಮೂಲಕ. ತದ ನಂತರ 9 ವರ್ಷ ಹಿರಿತೆರೆಯಿಂದ ದೂರವಿದ್ದ ಇವರು 'ಮದುವೆ ಮನೆ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದರು. ತದ ನಂತರ 'ಏನೆಂದು ಹೆಸರಿಡಲಿ', 'ಹಗಲು ಕನಸು', 'ಬಜಾರ್', 'ಯುವರತ್ನ', 'ಸ್ಟೀಲ್ ಪಾತ್ರೆ ಸಾಮಾನು', 'ನಿನ್ನ ಸನಿಹಕೆ', 'ಪ್ರೇಮಂ ಪೂಜ್ಯಂ', 'ವಿಕ್ರಾಂತ್ ರೋಣ', 'ರಾಘವೇಂದ್ರ ಸ್ಟೋರ್ಸ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actress Chitkala Biradar will be seen as Sudhamurthy in the Brundavana serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X