Deepa katte: ಹುಟ್ಟುಹಬ್ಬದ ಸಂಭ್ರಮದಲ್ಲಿ ದೀಪಾ ಕಟ್ಟೆ, ಪತ್ನಿಗೆ ಮುದ್ದಾಗಿ ವಿಶ್ ಮಾಡಿದ ಪತಿ

By Poorva

ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮಿಂಚಿದ ನಟಿ ದೀಪಾ ಕಟ್ಟೆ ಎಲ್ಲರ ಮನಸ್ಸಿದ್ದರೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಿಂಪಲ್ ಆಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಅವರಿಗೆ ಅವರ ಗಂಡ ಹುಟ್ಟುಹಬ್ಬದ ಶುಭಾಶಯಗಳು ಹೇಳಿದ್ದಾರೆ. ದೀಪ ಕಟ್ಟೆಯವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು, ಧಾರಾವಾಹಿಯಲ್ಲಿ ತುಳಸಿಯ ಮಗಳ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

ಇನ್ನು ದೀಪಾ ಅವರು ತನ್ನ ಹುಟ್ಟುಹಬ್ಬದ ಸಲುವಾಗಿ ಫೋಟೋಶೂಟ್ಗಳನ್ನು ಮಾಡಿಸಿಕೊಂಡಿದ್ದಾರೆ. ಕೆಂಪು ಬಟ್ಟೆಯಲ್ಲಿ ಮಿಂಚಿದ ಈಕೆ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಹುಟ್ಟುಹಬ್ಬದ ದಿನದಂದು ದೀಪಾ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಕಮೆಂಟ್‌ಗಳನ್ನು ಮಾಡಿದ್ದಾರೆ. ದೀಪಾ ಕಟ್ಟೆಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ಶುಭಾಶಯಗಳು ಹೇಳಿದ್ದಾರೆ. ಹಾಗೆ ದೀಪಾ ಕಟ್ಟೆ ಅವರ ಗಂಡ ಬಹಳ ಮುದ್ದಾಗಿ ಹುಟ್ಟು ಹಬ್ಬದ ಶುಭಾಶಯಗಳು ಹೇಳಿದ್ದಾರೆ.

Actress Deepa katte birthday special, see social media photos

ಧಾರಾವಾಹಿಗಳಲ್ಲಿ ನಟಿ ದೀಪಾ ಕಟ್ಟೆ ಮಿಂಚು

ನಟಿ ದೀಪಾ ಕಟ್ಟೆಗೆ ಅವರ ಪತಿ ರಕ್ಷಿತ್ ಯಡಿಪಡಿತ್ತಾಯ ಬಹಳ ಮುದ್ದಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ದೀಪಾ ಕಟ್ಟೆ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ ಹ್ಯಾಪಿ ಬರ್ತಡೇ ಹೆಂಡತಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದರೆ ದೀಪಾ ಕಟ್ಟೆ ಬಹಳ ಖುಷಿ ಬಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ದೀಪಾ ಕಟ್ಟೆಗೆ ಆಕೆಯ ಗಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ರೀತಿಯನ್ನು ಕಂಡು ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಹಾಗೆಯೇ ಮುದ್ದಾದ ಜೋಡಿಗೆ ಶುಭ ಹಾರೈಸಿದ್ದಾರೆ. ದೀಪಾ ಕಟ್ಟೆ ಮಲೆನಾಡ ಹುಡುಗಿ ಈಕೆ ಮೇ ತಿಂಗಳಿನಲ್ಲಿ ರಕ್ಷಿತ್ ಅವರನ್ನು ಮದುವೆಯಾಗಿದ್ದಾರೆ. ದೀಪಾ ಕಟ್ಟೆ ವೃತ್ತಿಯಲ್ಲಿ ಎಂಜಿನಿಯರಿಂಗ್ ಮಾಡಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಧಾರಾವಾಹಿಗಳಲ್ಲಿ ಆಫರ್ ಗಳು ಬರತೊಡಗಿದ್ದವು.

Actress Deepa katte birthday special, see social media photos

ಸಂಧ್ಯಾ ಪಾತ್ರದಲ್ಲಿ ಜನರ ಮನಗೆದ್ದ ದೀಪಾ ಕಟ್ಟೆ

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ದೀಪಾ ಕಟ್ಟೆ ಬ್ಯುಸಿಯಾಗಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಉತ್ತಮ ಅಭಿನಯ ಮಾಡುತ್ತಿರುವ ದೀಪಾ ಕಟ್ಟೆ, ಸಂಧ್ಯಾ ಪಾತ್ರದಲ್ಲಿ ಮಿಂಚಿದ್ದಾರೆ. ಸಂಧ್ಯಾ ದುಡ್ಡಿಗಾಗಿ ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ ಹಾಗೆ ತನ್ನ ತಾಯಿಯ ಜೊತೆ ಬಹಳ ನಾಜೂಕಾಗಿ ನಡೆದುಕೊಳ್ಳುತ್ತಾಳೆ. ತನ್ನ ತಾಯಿಯನ್ನು ಅಮ್ಮನಾಗಿ ನೋಡದೆ ದುಡ್ಡಿಗಾಗಿ ಆಕೆಯ ಜೊತೆ ನಯವಾಗಿ ನಾಟಕ ಮಾಡುತ್ತಿರುತ್ತಾಳೆ. ಇದೀಗ ಗರ್ಭಿಣಿ ಎಂದು ಹೇಳಿ ತನ್ನ ತಾಯಿಯ ಮನೆಯಲ್ಲಿ ಇರುತ್ತಾಳೆ. ಆದರೆ ಆಕೆ ಮನೆಯಲ್ಲಿ ಇರುವುದು ಮಾಧವ ಹಾಗೂ ಪೂರ್ಣಿಮನನ್ನು ಬಿಟ್ಟು ಬೇರೆ ಯಾರಿಗೂ ಇಷ್ಟ ಇರುವುದಿಲ್ಲ. ಇದನ್ನು ನೋಡಿದ ಆಕೆ ಅಣ್ಣ ಸಮರ್ಥ್ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ.

More from Filmibeat

English summary
Actress Deepa katte birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X