ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಇವರು ಪ್ರವೃತ್ತಿಯಲ್ಲಿ ನಟಿ: ಯಾರಿವರು ಗೊತ್ತೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ ಅಲಿಯಾಸ್ ಓಡೋದೋಳು ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರ ಮಗಳಾದ ಸಂಧ್ಯಾ ಪಾತ್ರವನ್ನು ಮಾಡುತ್ತಿರುವ ನಟಿ ದೀಪಾ ಕಟ್ಟೆಯ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ ಬನ್ನಿ.

ಸಂಧ್ಯಾ ಅಲಿಯಾಸ್ ಓಡೋದವಳು ಅಥವಾ ಆಸೆ ಬುರುಕಿ ಎಂದೇ ಕರೆಸಿಕೊಳ್ಳುವ ಈ ಪಾತ್ರ ಜನರಿಗೆ ಒಳ್ಳೆಯ ವೈಬನ್ನೇ ಕೊಡೋದಿಲ್ಲ. ಸದಾ ಕೆಟ್ಟ ಕೆಟ್ಟ ಸಂಚುಗಳನ್ನು ಮಾಡಿಕೊಂಡು ತನ್ನ ಆಸೆ ತೋರಿಸಿಕೊಂಡಿರುವ ಈ ಪಾತ್ರವನ್ನು ಮಾಡುತ್ತಿರುವುದು ನಟಿ ದೀಪಾ ಕಟ್ಟೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತಾತನ ಬಳಿ ಓಡೋದೋಳು ಎಂದು ಕರೆಸಿಕೊಳ್ಳುವ ಈಕೆ, ತನ್ನ ಬಸುರನ್ನೆ ಸುಳ್ಳು ಹೇಳಿಕೊಂಡು ಸೀಮಂತದ ದಿನ ಎಲ್ಲರ ಮುಂದೆ ಸಿಕ್ಕಿಹಾಕಿಕೊಂಡಳು.

Actress Deepa Katte who is an engineer by profession now actress

ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ದೀಪಾ ಕಟ್ಟೆ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಪಕ್ಕ ಮಲೆನಾಡ ಹುಡುಗಿಯಾದ ಇವರು ನೆಲೆಸಿರುವುದು ಬೆಂಗಳೂರಿನಲ್ಲಿ. ವಿಶೇಷವೆಂದರೆ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ಇವರು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಈ ಕೆಲಸ ಮಾಡುತ್ತಲೇ ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಧಾರಾವಾಹಿ ಅಷ್ಟೇ ಅಲ್ಲದೆ ರಂಗಭೂಮಿಯಲ್ಲಿ ಬಹಳ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ದೀಪಾ ಕಟ್ಟೆ ಅವರು ಹಲವಾರು ನಾಟಕಗಳಲ್ಲಿಯೂ ನಟಿಸಿದ್ದಾರೆ. ನಟನೆಯನ್ನಷ್ಟೇ ವೃತ್ತಿಯನ್ನಾಗಿಸದೆ, ಇಂಜಿನಿಯರ್ ಕೆಲಸದಲ್ಲಿ ಬ್ಯುಸಿಯಾಗಿರುವ ಇವರು ಆಗಾಗ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲಿ ತಮ್ಮ ಹೆಸರನ್ನು ಅಚ್ಚು ಒತ್ತಿದ್ದಾರೆ ಎಂದರೆ ತಪ್ಪಾಗಲ್ಲ.

Actress Deepa Katte who is an engineer by profession now actress

ವಾದ್ಯರಾಜ ಹಾಗೂ ಸುರಭಿ ದಂಪತಿಯ ಒಬ್ಬಳೇ ಮಗಳಾದ ನಟಿ ದೀಪಾ ಕಟ್ಟೆಗೆ ಈಗಾಗಲೇ ಮದುವೆಯಾಗಿದ್ದು, ಇವರ ಪತಿ ಹೆಸರು ರಕ್ಷಿತ್. ಅಂದ ಹಾಗೆ ದೀಪಾ ಕಟ್ಟೆ ಪತಿ ರಕ್ಷಿತ್ ಕೂಡ ಸಾಫ್ಟ್‌ವೇರ್ ಇಂಜಿನಿಯರ್. ಇಬ್ಬರೂ ಒಂದೇ ಕಂಪನಿಯಲ್ಲಿ ಪ್ಲೇಸ್ಮೆಂಟ್ ಆದ ನಂತರ ಐದು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿ ಬಳಿಕ ಉಜಿರೆಯಲ್ಲಿ ಮದುವೆಯಾದರಂತೆ.

ನಟಿ ದೀಪಾ ಕಟ್ಟೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೂ ಮೊದಲು 'ಜೀವ ಹೂವಾಗಿದೆ', 'ಮಿಥುನ ರಾಶಿ' ಇತ್ಯಾದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿನ ಸಂಧ್ಯಾ ಎಂಬ ರೋಲ್‌ನಿಂದ ಬೇಸತ್ತ ಜನರು ಸಿಕ್ಕ ಸಿಕ್ಕಲ್ಲಿ ಛೀಮಾರಿ ಹಾಕುವುದು ಉಂಟಂತೆ. ಇದು ನಟಿ ದೀಪಾ ಕಟ್ಟೆ ಅವರ ನಟನ ನೈಪುಣ್ಯತೆಯನ್ನು ತೋರಿಸುತ್ತದೆ ಎಂದರೆ ತಪ್ಪಾಗಲ್ಲ.

More from Filmibeat

English summary
Actress Deepa Katte who is charming on television is also a theater artist
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X