ಬ್ಯಾಂಕಾಕ್ ಗೆ ಹಾರಿದ ನಾಗಿಣಿ : ಸದಾ ಸಂಚರಿಸಲು ಬಯಸುವ ದೀಪಿಕಾ ದಾಸ್

By ಪ್ರಿಯಾ ದೊರೆ

ಕನಸಿನ ರಾಣಿಯಾಗಿ ಅಭಿಮಾನಿಗಳನ್ನು ಸದಾ ಕಾಡುವ ನಟಿ ದೀಪಿಕಾ ದಾಸ್. ದೀಪಿಕಾ ದಾಸ್ ಅವರು ಸದ್ಯ ಇದೀಗ ಬ್ಯಾಂಕಾಕ್ ಪ್ರವಾಸದಲ್ಲಿದ್ದಾರೆ.ಟ್ರಾವೆಲ್ ಮಾಡಲು ಹೆಚ್ಚು ಬಯಸುವ ನಟಿ ದೀಪಿಕಾ ದಾಸ್ ಅವರು ಎಲ್ಲಾ ದೇಶವನ್ನು ಸುತ್ತುವ ಕನಸು ಹೊಂದಿದ್ದಾರೆ. ತಮ್ಮ ಆಸೆಯಂತೆಯೇ ಆಗಾಗ ಟ್ರಾವೆಲ್ ಮಾಡುತ್ತಿರುತ್ತಾರೆ. ಈಗಾಗಲೇ ಸಾಕಷ್ಟು ದೇಶಗಳು ಹಾಗೂ ಭಾರತ ದೇಶದ ಹಲವು ಜಾಗಗಳಿಗೆ ಭೇಟಿ ನೀಡಿದ್ದಾರೆ, ಮುಂಬೈ, ಗೋವಾ, ಉತ್ತರ ಭಾರತ, ಟರ್ಕಿ, ದುಬೈ ಸೇರಿದಂತೆ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ.

ಹೊಸ ಸಿನಿಮಾದಲ್ಲಿ ನಟನೆ

ಕನ್ನಡದ ಬಿಗ್ ಬಾಸ್ ಸೀಸನ್ 7 ಮತ್ತು 9 ಎರಡರಲ್ಲೂ ಕೂಡ ಭಾಗವಹಿಸಿ ಅಭಿಮಾನಿಗಳ ಬಳಗವನ್ನು ಹೆಚ್ಚಸಿಕೊಂಡಿರುವ ನಟಿ ದೀಪಿಕಾ ದಾಸ್ ಅವರು ಇತ್ತೀಚೆಗಷ್ಟೇ ತಮ್ಮ ಫ್ಯಾನ್ಸ್ ಗೆ ಹೊಸ ಸುದ್ದಿ ನೀಡಿದ್ದರು. ಪಾರು ಪಾರ್ವತಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅಡ್ವೆಂಚರಸ್ ಕುರಿತಾದ ಪಾರು ಪಾರ್ವರಿ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸುವ ಸಲುವಾಗಿ ನಟಿ ದೀಪಿಕಾ ದಾಸ್ ಅವರು 10ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರಂತೆ. ದೀಪಿಕಾ ದಾಸ್ ಅವರು ಮತ್ತೆ ನಟನೆಯತ್ತ ಮುಖ ಮಾಡಿರುವುದಕ್ಕೆ ಅಭಿಮಾನಿಗಳು ಸಂತಸಗೊಂಡಿದ್ದಾರೆ.

actress deepika das in bangkok


ಟ್ರಾವೆಲ್ ಮಾಡುವ ನಟಿ ದೀಪಿಕಾ

ನಾಗಿಣಿ ಸೀರಿಯಲ್ ಮೂಲಕ ಸಿಕ್ಕಾಪಟ್ಟೆ ಹಿಟ್ ಆಗಿ, ಬಿಗ್ ಬಾಸ್ ಮೂಲಕ ವೀಕ್ಷಕರ ಮನ ಗೆದ್ದ ನಟಿ ದೀಪಿಕಾ ದಾಸ್ ಅವರು ಸದಾ ಟ್ರಾವೆಲ್ ಮಾಡುತ್ತಿರುತ್ತಾರೆ. ನಟ-ನಟಿಯರು ಸಮಯ ಸಿಕ್ಕಾಗೆಲ್ಲಾ ಪ್ರವಾಸ ಕೈಗೊಂಡರೆ, ನಟಿ ದೀಪಿಕಾ ದಾಸ್ ಅವರು ಉಲ್ಟಾ. ಸದಾ ಯಾವುದಾದರೂ ಒಂದು ಜಾಗಕ್ಕೆ ಪ್ರಯಾಣ ಬೆಳೆಸುತ್ತಿರುತ್ತಾರೆ. ಆಗಾಗ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಸ್ಟೈಲಿಶ್ ಲುಕ್ ಗಳಲ್ಲೂ ಕಾಣಿಸಿಕೊಳ್ಳುವ ದೀಪಿಕಾ ದಾಸ್ ಅವರನ್ನು ಎಲ್ಲರೂ ನಾಗಿಣಿ ಎಂದೇ ಗುರುತಿಸುತ್ತಾರೆ. ಇದೇ ವರ್ಷ ಮಾರ್ಚ್ ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ದುಬೈನಲ್ಲಿರುವ ನಟ ದೀಪಕ್ ಎಂಬುವರ ಜೊತೆಗೆ ಗೋವಾದಲ್ಲಿ ಸಪ್ತಪದಿ ತುಳಿದಿದ್ದರು. ಬಳಿಕ ಟರ್ಕಿಯಲ್ಲಿ ಹನಿಮೂನ್ ಮಾಡಿಕೊಂಡಿದ್ದರು.


ಬ್ಯಾಂಕಾಕ್ ನಲ್ಲಿ ನಟಿ ದೀಪಿಕಾ ದಾಸ್

ಟ್ರೆಡಿಷನಲ್ ಹಾಗೂ ಮಾಡ್ರನ್ ಲುಕ್ ಎರಡರಲ್ಲೂ ಸಖತ್ ಆಗಿ ಕಾಣುತ್ತಿರುತ್ತಾರೆ. ದೀಪಿಕಾ ಅವರಿಗೆ ಟ್ರಾವೆಲ್ ಮಾಡುವುದೆಂದರೆ ಬಹಳ ಇಷ್ಟವಂತೆ. ಸದ್ಯ ಬ್ಯಾಂಕಾಕ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಸಂಪ್ರದಾಯದಂತೆ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಕನಸಿನಂತೆ ಆಗಾಗ ಬೇರೆ ಬೇರೆ ಜಾಗಗಳಿಗೆ ಪ್ರವಾಸ ಮಾಡುತ್ತಿರುತ್ತಾರೆ. ಸದಾ ಸೋಲೋ ಟ್ರೀಪ್ ಅನ್ನು ಎಂಜಾಯ್ ಮಾಡುತ್ತಾರೆ.


ದೀಪಿಕಾ ದಾಸ್ ಸಿನಿ ಪಯಣ

2014 ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ ದೂದ್ ಸಾಗರ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತೆಲುಗಿನ ಈ ಮನಸೇ ಚಿತ್ರದಲ್ಲಿ ನಟಿಸಿ, 2017 ರಲ್ಲಿ ತೆರೆಕಂಡ ಡ್ರೀಮ್ ಗರ್ಲ್ ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದರು. 2016 ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು. ಈ ಧಾರಾವಾಹಿಯಲ್ಲಿ ಅಮೃತಾ ಮತ್ತು ನಾಗಿಣಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಪಾಯಲ್ ಚಿತ್ರದಲ್ಲಿ ನಟಿಸಿರುವ ಅವರು, ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

More from Filmibeat

Read more about: filmibeat original priya dore tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X