Deepika Das: ಗರುಡ ಪಕ್ಷಿಗೆ ಮುತ್ತಿಟ್ಟ ನಾಗಿಣಿ : ಮರಳುಗಾಡಿನಲ್ಲಿ ಒಂದಾದ ಬದ್ಧವೈರಿಗಳು!

By ಪ್ರಿಯಾ ದೊರೆ

ಕನ್ನಡದ ಬಿಗ್ ಬಾಸ್ ಸೀಸನ್- 7 ಮತ್ತು 9ರಲ್ಲಿ ಭಾಗವಹಿಸಿ ಅಭಿಮಾನಿಗಳ ಬಳಗ ಹೆಚ್ಚಿಸಿಕೊಂಡಿದ್ದ ನಟಿ ದೀಪಿಕಾ ದಾಸ್ ಸದ್ಯ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಹೊಸ ಹೊಸ ಜಾಗಗಳಿಗೆ ಭೇಟಿ ಕೊಟ್ಟು ದೀಪಿಕಾ ಖುಷಿ ಪಡುತ್ತಿರುತ್ತಾರೆ. ಸ್ಟೈಲಿಶ್ ಲುಕ್‌ಗಳಲ್ಲೂ ಕಾಣಿಸಿಕೊಳ್ಳುವ ದೀಪಿಕಾ ದಾಸ್ ಅವರನ್ನು ಎಲ್ಲರೂ ನಾಗಿಣಿ ಎಂದೇ ಗುರುತಿಸುತ್ತಾರೆ.

ದೀಪಿಕಾ ದಾಸ್ ಅವರು 'ನಾಗಿಣಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಿದ್ದರು. ಆ ಧಾರಾವಾಹಿಯ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗಿಯಾಗಿದ್ದ ದೀಪಿಕಾ ದಾಸ್, ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಸೋದರ ಸಂಬಂಧಿ.

Deepika-das-dubai-trip

ರಾಕಿಂಗ್ ಸ್ಟಾರ್ ಯಶ್ ಚಿಕ್ಕಮ್ಮನ ಮಗಳು ದೀಪಿಕಾ ದಾಸ್. ರಿಯಾಲಿಟಿ ಶೋಗಳಲ್ಲಿ ದೀಪಿಕಾ ದಾಸ್ ಭಾಗವಹಿಸಿದ್ದಾರೆ. ಇನ್ನು 'ಸೂಪರ್ ಟಾಕ್ ಟೈಮ್' ಎಂಬ ಕಾರ್ಯಕ್ರಮದಲ್ಲೂ ದೀಪಿಕಾ ದಾಸ್ ಅವರು ಕಾಣಿಸಿಕೊಂಡಿದ್ದರು. 2014ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ 'ದೂದ್ ಸಾಗರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತೆಲುಗಿನ 'ಈ ಮನಸೇ' ಚಿತ್ರದಲ್ಲಿ ನಟಿಸಿ, 2017 ರಲ್ಲಿ ತೆರೆಕಂಡ 'ಡ್ರೀಮ್ ಗರ್ಲ್' ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದರು.

2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ 'ನಾಗಿಣಿ' ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು. ಆ ಧಾರಾವಾಹಿಯಲ್ಲಿ ಅಮೃತಾ ಮತ್ತು ನಾಗಿಣಿ ಪಾತ್ರದಲ್ಲಿ ನಟಿಸಿದ್ದರು. ಇನ್ನು 'ಪಾಯಲ್' ಎನ್ನುವ ಚಿತ್ರದಲ್ಲಿ ನಟಿಸಿರುವ ಆಕೆ 'ಅಂತರಪಟ' ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.

Deepika-das-dubai-trip

ದುಬೈನಲ್ಲಿ ದೀಪಿಕಾ ದಾಸ್

ದೀಪಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಮನಗೆಲ್ಲುತ್ತಾರೆ. ಆಗಾಗ್ಗೆ ಆಕೆ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಟ್ರೆಡಿಷನಲ್ ಹಾಗೂ ಮಾಡ್ರನ್ ಲುಕ್ ಎರಡರಲ್ಲೂ ಸಖತ್ ಆಗಿ ಕಾಣಿಸಿಕೊಳ್ಳುತ್ತಾರೆ. ದೀಪಿಕಾಗೆ ಪ್ರವಾಸಕ್ಕೆ ಹೋಗುವುದು ಎಂದರೆ ಬಹಳ ಇಷ್ಟವಂತೆ. ಸದ್ಯ ದುಬೈನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.

ಗರುಡ ಪಕ್ಷಿಗೆ ಮುತ್ತಿಟ್ಟ ನಾಗಿಣಿ

ದುಬೈನ ಹೂದೋಟದಲ್ಲಿ ತಾವೂ ಸುಂದರವಾದ ಹೂವಿನಂತೆ ಕಂಗೊಳಿಸಿದ್ದಾರೆ. ದುಬೈ ಮಿರಾಕಲ್ ಗಾರ್ಡನ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದಾ ಸೋಲೋ ಟ್ರಿಪ್ ಎಂಜಾಯ್ ಮಾಡುವ ದೀಪಿಕಾ ದುಬೈ ಮರುಭೂಮಿಯಲ್ಲಿ ಸಫಾರಿಯನ್ನೂ ಮಾಡಿದ್ದಾರೆ. ಜೀಪ್ ಓಡಿಸಿ ಖುಷಿ ಪಟ್ಟಿರುವ ಚೆಲುವೆ ಗರುಡ ಪಕ್ಷಿಗೆ ಮುತ್ತಿಟ್ಟಿದ್ದಾರೆ. ಇದರ ವೀಡಿಯೋ ಕೂಡ ಅಪ್ ಲೋಡ್ ಮಾಡಿದ್ದಾರೆ.

ಅಭಿಮಾನಿಗಳ ಪ್ರೀತಿಯ ಸಲಹೆ

ನಾಗಲೋಕದ ಸುಂದರಿ ಮರಳುಗಾಡಿನಲ್ಲಿ ಹದ್ದಿನೊಂದಿಗೆ ಇರುವ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಭಿಮಾನಿಗಳು ಹದ್ದಿನಿಂದ ನಾಗಿಣಿ ದೂರ ಇರಬೇಕು ಎಂದು ಕಾಳಜಿಯಿಂದ ಕಮೆಂಟ್ ಕೂಡ ಮಾಡಿದ್ದಾರೆ. ಸದ್ಯ ಆಕೆಯ ಸೋಲೊ ಟ್ರಿಪ್ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗ್ತಿದೆ.

More from Filmibeat

English summary
Bigg Boss Fame Deepika Das Solo trip to Dubai. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X