"ಫೇಕ್ ಫಾಲೋವರ್ಸ್ ಎನ್ನುತ್ತಿದ್ದೀರಿ.. ಅದು ನನಗೆ ಬೇಸರ ತರಿಸಿದೆ" ಎಂದು ಬಿಗ್‌ಬಾಸ್ ಧನುಶ್ರೀ

By ಅನಿತಾ ಬನಾರಿ

ಬಿಗ್ ಬಾಸ್ ಖ್ಯಾತಿಯ ಧನುಶ್ರೀ ಅವರಿಗೆ ಇತ್ತೀಚೆಗೆ ಲಕ್ಷಗಟ್ಟಲೆ ಫಾಲೋವರ್ಸ್ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ ಇರಿಸಿಕೊಂಡಿರುವ ಧನುಶ್ರೀ, ರೀಲ್ಸ್ ಮೂಲಕವೇ ಫೇಮಸ್ಸು.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಬಂದಿರುವ ಈಕೆ ಸ್ಯಾಮ್ ಸಮೀರ್ ಎನ್ನುವ ಇನ್ನೊಬ್ಬ ಕಂಟೆಂಟ್ ಕ್ರಿಯೇಟರ್‌ನೊಂದಿಗೆ ಬಹಳಷ್ಟು ರೀಲ್ಸ್ ಹಾಗೂ ವೀಡಿಯೋಸ್ ಮಾಡಿದ್ದಾರೆ. ಆದರೆ, ಈಗ ಧನುಶ್ರೀ, ಸ್ಯಾಮ್ ಸಮೀರ್ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

Actress Dhanushree getting millions of followers

ಇದರ ಬೆನ್ನಲ್ಲೇ ಧನುಶ್ರೀ ಅವರ ಇನ್‌ಸ್ಟಾಗ್ರಾಂ ಅಕೌಂಟ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಫಾಲೋವರ್ ಸಂಖ್ಯೆ ಹೆಚ್ಚಾಗಿರುತ್ತಿರುವುದರ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಫೇಕ್ ಫಾಲೋವರ್ಸ್ ಅನ್ನು ಹಾಕಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಹೆಚ್ಚಿದ್ದಾರೆ. ಆದರೆ, ಯೂಟ್ಯೂಬ್‌ನಲ್ಲಿ ಚಂದಾದಾರರೇ ಇಲ್ಲವೇ ಇಲ್ಲ ಎಂಬ ಮಾತುಗಳೆಲ್ಲ ಬರುತ್ತಿದೆ. ಇದಕ್ಕೆ ಸರಿಯಾಗಿ ಧನುಶ್ರೀ ಅವರು ಫೇಕ್ ಚಂದಾದಾರರ ಬಗ್ಗೆ ಮಾತನಾಡಿದ ಹಳೆ ವಿಡಿಯೋ ಒಂದು ಅಷ್ಟೇ ವೈರಲ್ ಆಗುತ್ತಿದೆ.

ಇದೆಲ್ಲದಕ್ಕೂ ಸ್ಪಷ್ಟನೆ ನೀಡುವಂತೆ ಧನುಶ್ರೀ ಅವರು ಇತ್ತೀಚೆಗೆ ನ್ಯೂಸ್ ವೆಬ್ ಸೈಟ್‌ವೊಂದರಲ್ಲಿ ಮಾತನಾಡಿದ್ದಾರೆ. "ಇತ್ತೀಚೆಗೆ ನನ್ನ ವಿಡಿಯೋಗಳಿಗೆ ಲಕ್ಷಗಟ್ಟಲೆ ಕೋಟಿಗಟ್ಟಲೆ ಲೈಕ್ಸ್ ಬರ್ತಾ ಇದೆ. ಈ ಬಗ್ಗೆ ನನಗೆ ಸಂತೋಷವಿದೆ. ಆದರೆ ಎಷ್ಟೋ ಜನ ಇದನ್ನು ಫೇಕ್ ಎಂದು ಹೇಳುತ್ತಿದ್ದೀರಿ. ಶ್ರಮ ಹಾಕದೆ ಫೇಕ್ ಅಕೌಂಟ್ ಮೂಲಕ ಈ ರೀತಿ ಲೈಕ್ ಗಳು ಬರುತ್ತಿದೆ ಎಂಬ ಕಾಮೆಂಟ್‌ಗಳು ನನಗೆ ತುಂಬಾ ಬೇಸರ ತಂದಿದೆ. ಶ್ರಮ ಹಾಕದೆ ಯಾವ ವಿಚಾರವೂ ಮಾಡಲು ಸಾಧ್ಯವಿಲ್ಲ. ಪ್ರತಿ ವಿಡಿಯೋ ಅದಕ್ಕೆ ಸರಿಯಾದ ಶ್ರಮವನ್ನು ಹಾಕಿದ್ದೇನೆ. ಹಾಕುತ್ತಾ ಇದ್ದೇನೆ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನಮ್ಮ ದಿನನಿತ್ಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಸಂದರ್ಭಗಳು ಬರುತ್ತವೆ. ಆಗ ಕೆಲ ವೈಯಕ್ತಿಕ ವಿಚಾರಗಳಾದರೂ ನಿಮಗೆ ತಿಳಿದೇ ಬಿಡುತ್ತದೆ. ಎಷ್ಟೋ ಬಾರಿ ನಮಗೆ ಮಾನಸಿಕವಾಗಿ ತೊಂದರೆ ಕೊಡುತ್ತೆ. ಈ ರೀತಿಯ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ನಾವು ಪ್ರತಿ ವಿಡಿಯೋಗೂ ಶ್ರಮಪಟ್ಟು ಪ್ರತಿಫಲ ಅಪೇಕ್ಷೆ ಮಾಡುತ್ತೇವೆ. ಕೆಲ ವಿಡಿಯೋಗಳಿಗೆ ಅಂದುಕೊಂಡಷ್ಟು ಒಳ್ಳೆಯ ವ್ಯೂಸ್ ಬರದೇ ಇರುವಾಗ, ಕೆಲ ವಿಡಿಯೋಗಳು ಅಪ್ಲೋಡ್ ಮಾಡಲಾಗದೆ ಇರುವಾಗ ನಮಗೂ ಬಹಳ ಬೇಸರವಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ ಧನುಶ್ರೀ.

Actress Dhanushree getting millions of followers

"ಯೂಟ್ಯೂಬ್ ನಲ್ಲಿ ಚಂದಾದಾರರು ಇನ್ನು ಹೆಚ್ಚಾಗಿಲ್ಲ. ಆದರೂ ನನ್ನ ಯೂಟ್ಯೂಬ್ ವಿಡಿಯೋಸ್ ಹಾಗು ರೀಲ್ಸ್‌ಗೆ ವ್ಯೂಸ್ ಬರುತ್ತಿವೆ. ಸೋಶಿಯಲ್ ಮೀಡಿಯಾ ಹಾಗೂ ಕಂಟೆಂಟ್‌ನಲ್ಲಿ ಇವೆಲ್ಲವೂ ಸಹಜ. ಅದನ್ನು ಅಷ್ಟೇ ಸಹಜವಾಗಿ ತೆಗೆದುಕೊಳ್ಳಿ " ಎಂದು ಸಂದರ್ಶನದಲ್ಲಿ ಮಾತನಾಡುವಾಗ ಧನುಶ್ರೀ ಹೇಳಿದ್ದಾರೆ.

ಇನ್ನು ಧನುಶ್ರೀ ಹಾಗೂ ಸ್ಯಾಮ್ ಸಮೀರ್ ಬ್ರೇಕ್ ಅಪ್ ಬಗ್ಗೆ ಜನರು ಕುತೂಹಲ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಸರಿಯಾದ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.

More from Filmibeat

English summary
Dhanushree said that without hard work nothing will happen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X