For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿ ಎಂಜಾಯ್ ಮಾಡುತ್ತಿರುವ ದಿಶಾ ಮದನ್-ಶಂಶಾಕ್ ಜೋಡಿ

  By ಪ್ರಿಯಾ ದೊರೆ
  |

  ದಿಶಾ ಮದನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮ್ಯೂಸಿಕಲಿ, ಡಬ್ ಸ್ಮ್ಯಾಶ್, ರೀಲ್ಸ್, ಡ್ಯಾನ್ಸ್ ಮತ್ತು ಟಿಕ್- ಟಾಕ್‌ನಲ್ಲಿ ಲಿಪ್-ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಟಿಕ್- ಟಾಕ್‌ನಲ್ಲಿ ಸುಮಾರು ಮೂರು ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

  ಅಲ್ಲದೇ, ವಿಶೇಷ ಹಾಗೂ ವಿಭಿನ್ನವಾದ ಫೋಟೋಶೂಟ್ ಮೂಲಕವೂ ಸುದ್ದಿಯಲ್ಲಿದ್ದವರು. ಸದ್ಯ ದಿಶಾ ಮದನ್ ಅವರು ಸ್ಟಾರ್‌ ಸುವರ್ಣದಲ್ಲಿ ಮೂಡಿ ಬರುತ್ತಿರುವ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

  ದಿಶಾ ಪಠಾನಿ- ಟೈಗರ್‌ ಶ್ರಾಫ್ ಬ್ರೇಕಪ್‌ಗೆ ಮದುವೆ ಕಾರಣ! ದಿಶಾ ಪಠಾನಿ- ಟೈಗರ್‌ ಶ್ರಾಫ್ ಬ್ರೇಕಪ್‌ಗೆ ಮದುವೆ ಕಾರಣ!

  ಇನ್ನು ಕುಲವಧು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ದಿಶಾ ನಂತರ ಬಹಳ ದೊಡ್ಡ ಬ್ರೇಕ್‌ ಪಡೆದಿದ್ದರು. ಇದೀಗ ಮತ್ತೆ ನಟನೆಯತ್ತ ಮುಖ ಮಾಡುವ ಮನಸ್ಸು ಮಾಡಿದ್ದಾರೆ. ಆದರೆ ದೊಡ್ಡ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.

  ದಿಶಾ ಮದನ್ ಭರತನಾಟ್ಯ ಡ್ಯಾನ್ಸರ್!

  ದಿಶಾ ಮದನ್ ಭರತನಾಟ್ಯ ಡ್ಯಾನ್ಸರ್!

  ದಿಶಾ ಮದನ್ 1992, ಮಾರ್ಚ್ 9 ರಂದು ಜನಿಸಿದರು. ಇವರ ತಂದೆ ಮದನ್ ಮತ್ತು ತಾಯಿ ಅಶ್ವಿನಿ. ದಿಶಾ ಮದನ್ ಅವರು ಭರತನಾಟ್ಯ ಡ್ಯಾನ್ಸರ್ ಆಗಿದ್ದಾರೆ. ಕುಲವಧು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ರಿಯಾಲಿಟಿ ಶೋ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ನಲ್ಲಿ ಡ್ಯಾನ್ಸ್‌ ಮಾಡಿ ವಿನ್ನರ್ ಕೂಡ ಆಗಿದ್ದರು. ಇನ್ನು ನಟಿ ದಿಶಾ ಮದನ್ ಅವರು ಬೋಲ್ಡ್‌ ಆಗಿ ಫೋಟೋಶೂಟ್ ಗಳನ್ನು ಮಾಡಿಸಿದ್ದರು. ಅಲ್ಲದೇ ತಾವು ತುಂಬು ಗರ್ಭಿಣಿ ಆಗಿದ್ದಾಗ, ಹೆರಿಗೆ ನೋವಿನಲ್ಲೇ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಈ ವೇಳೆ ಸ್ವತಃ ದಿಶಾ ಅವರೇ ಕಾರನ್ನು ಡ್ರೈವ್‌ ಮಾಡಿಕೊಂಡು ಹೋಗಿದ್ದರು.

  ಮುದ್ದು ಮಕ್ಕಳ ತಾಯಿ ದಿಶಾ!

  ಮುದ್ದು ಮಕ್ಕಳ ತಾಯಿ ದಿಶಾ!

  ಬಳಿಕ ಯಾವುದೇ ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳ ದಿಶಾ ಮದನ್ ಅವರು ಶಶಾಂಕ್ ವಾಸುಕಿ ಗೋಪಾಲ್ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಶಶಾಂಕ್ ಹಾಗೂ ದಿಶಾ 2016ರಲ್ಲಿ ಭೇಟಿಯಾದರು. 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ 2018ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ವೇಳೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಸುದ್ದಿಯಾಗಿದ್ದರು. 2019ರಲ್ಲಿ ಪುತ್ರ ವಿಹಾನ್ ನನ್ನು ಮನೆಗೆ ಬರ ಮಾಡಿಕೊಂಡರು. 2020ರಲ್ಲಿ ಹೊಸ ಮನೆಯನ್ನು ಖರೀದಿಸಿ ಗೃಹಪ್ರವೇಶ ನೆರವೇರಿಸಿದರು. 2021ರಲ್ಲಿ ಕೊರೋನಾದಿಂದ ನರಳಾಡಿದರು. 2022ರಲ್ಲಿ ಎರಡನೇ ಮಗುವಿಗೆ ತಾಯಿಯಾಗಿದ್ದು, ಅವಿರಾ ಎಂದು ನಾಮಕರಣ ಮಾಡಿದರು.

  ದಿಶಾ ನಟಿಸಿದ ಸಿನಿಮಾಗಳು!

  ದಿಶಾ ನಟಿಸಿದ ಸಿನಿಮಾಗಳು!

  ಮನೆ ಸಂಸಾರ ಎಂದು ಬ್ಯುಸಿಯಾಗಿದ್ದ ನಡುವಲ್ಲೂ ದಿಶಾ ಅವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ಮೊದಲ ಗರ್ಭಾವಸ್ಥೆಯಲ್ಲಿದ್ದಾಗ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನಟಿಸಿದರು. ಇದರಲ್ಲಿ ಪತ್ರಕರ್ತೆ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಣದ ಹೇಟ್ ಯು ರೋಮಿಯೋ ವೆಬ್ ಸೀರಿಸ್ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಹಂಬಲ್ ಪೊಲಿಟೀಶಿಯನ್ ನೋಗರಾಜ್ ಸಿನಿಮಾದಲ್ಲಿ ರಿಪೋರ್ಟರ್ ಆಗಿ ನಟಿಸಿದ್ದರು. ಈಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

  ದುಬೈ ಟ್ರಿಪ್‌ನಲ್ಲಿರುವ ಫ್ಯಾಮಿಲಿ!

  ದುಬೈ ಟ್ರಿಪ್‌ನಲ್ಲಿರುವ ಫ್ಯಾಮಿಲಿ!

  ಸದ್ಯ ದಿಶಾ ಮದನ್- ಶಶಾಂಕ್ ಹಾಗೂ ಅವರ ತಂದೆ ತಾಯಿ ದುಬೈ ಟ್ರಿಪ್‌ನಲ್ಲಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಿಶಾ ಮದನ್ ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ಲಿ ಶಾಪಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಬುರ್ಜ್ ಖಲೀಫಾ ಕಟ್ಟಡದಿಂದ ಅಲ್ಲಿನ ವ್ಯೂವ್ ತುಂಬಾ ಚೆನ್ನಾಗಿತ್ತು, ವಿಹಾನ್ ಹಾಗೂ ನಾನು ತುಂಬಾನೇ ಎಂಜಾಯ್ ಮಾಡಿದೆವು ಎಂದು ಹೇಳಿಕೊಂಡಿದ್ದಾರೆ.

  English summary
  Actress Disha Madan Biography And Life Style Biography And Life Style, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X