10 ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಮರಳಿದ ದಿಶಾ ಮದನ್: ಆ ಧಾರಾವಾಹಿ ಯಾವುದು?

By ಅನಿತಾ ಬನಾರಿ

ಹೌದು, ಹತ್ತು ವರ್ಷಗಳ ಹಿಂದೆ 'ಕುಲವಧು' ಧಾರಾವಾಹಿಯ ಮೂಲಕ ಕನ್ನಡ ಕಿರುತರಿಗೆ ಪರಿಚಯವಾಗಿದ್ದರು ನಟಿ ದಿಶಾ ಮದನ್. 'ಕುಲವಧು' ಧಾರಾವಾಹಿಯಲ್ಲಿ ನೆಗೆಟಿವ್ ಛಾಯೆಯಿರುವ ಪಾತ್ರವನ್ನು ಈಕೆ ಅಚ್ಚುಕಟ್ಟಾಗಿ ಮಾಡಿದ್ದರು. ಅದಾದ ಮೇಲೆ ನಟನೆಯಿಂದ ಕೊಂಚ ದೂರ ಇದ್ದ ದಿಶಾ ಮದನ್ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ಸು.

ಒಂದೆರಡು ವೆಬ್ ಸೀರೀಸ್ ಹಾಗೂ ಸಿನಿಮಾಗಳಲ್ಲಿ ನಟಿಸಿದ ಈ ನಟಿ ಹತ್ತು ವರ್ಷಗಳ ಕಾಲ ಕಿರುತೆರೆಯಿಂದ ದೂರವೇ ಉಳಿದರು. ಈ ನಡುವೆ ಮದುವೆ ಮಕ್ಕಳು ಇತ್ಯಾದಿ ವೈಯಕ್ತಿಕ ಜೀವನದ ಕಡೆಗೂ ಗಮನ ಕೊಟ್ಟ ದಿಶಾ ಮದನ್ ಇದೀಗ ಮತ್ತೆ ಕಿರುತೆರೆಗೆ ವಾಪಸ್ ಆಗುವ ಮನಸ್ಸು ಮಾಡಿದ್ದಾರೆ.

Actress Disha Madan entered television through Lakshmi Nivas serial

ಅಂದ ಹಾಗೆ ನಟಿ ದಿಶಾ ಮದನ್ ಅವರು ತಮ್ಮ ಪತಿ ಶಶಾಂಕ್ ಜೊತೆಗೆ ಇತ್ತೀಚೆಗೆ ರಿಯಾಲಿಟಿ ಶೋವಿನಲ್ಲೂ ಕಾಣಿಸಿಕೊಂಡಿದ್ದರು. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಸ್ಮಾರ್ಟ್ ಜೋಡಿ' ಶೋವಿನಲ್ಲಿ ಪತಿ ಶಶಾಂಕ್ ವಾಸುಕಿ ಜೊತೆಗೆ ದಿಶಾ ಭಾಗವಹಿಸಿದ್ದರು. ಹೊಸದೊಂದು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಈಗಾಗಲೇ ಇವರು ಶೂಟಿಂಗ್ ಆಗಲೇ ಆರಂಭಿಸಿದ್ದಾರೆ.

ಇಂದು ಟೆಕ್ನಾಲಜಿ ತುಂಬಾ ಮುಂದುವರೆದಿದೆ. ಸಿನಿಮಾವನ್ನು ಥಿಯೇಟರ್‌ಗೆ ಹೋಗಿ ನೋಡಬೇಕೆಂದಿಲ್ಲ. ಓಟಿಟಿಯಲ್ಲೇ ಬರುತ್ತಿದೆ. ಆದರೂ ಸಹ ಎಷ್ಟೋ ಮನೆಗಳಲ್ಲಿ ಸಂಜೆ ಆರು ಗಂಟೆಯಿಂದ ರಾತ್ರಿ 11:00ವರೆಗೂ ಟಿವಿ ಮುಂದೆ ಕೂತು ಶ್ರದ್ಧೆಯಿಂದ ಧಾರಾವಾಹಿಗಳನ್ನು ನೋಡುವ ಜನರಿದ್ದಾರೆ. ದಿಶಾ ಮದನ್‌ಗೂ ಕೂಡಾ ಆ ರೀತಿಯ ಜನರನ್ನು ತಲುಪುವ ಆಸೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ದಿಶಾಗೆ ಬಹಳಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಸಿಕ್ಕಷ್ಟು ಪ್ರೀತಿ ವಿಶ್ವಾಸ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಎಂಬುದು ಆಕೆಯ ಅಭಿಪ್ರಾಯ. ಹಾಗಾಗಿ ಮತ್ತೆ ಧಾರಾವಾಹಿ ಕಡೆಗೆ ಮುಖ ಮಾಡಿದ್ದಾರೆ ದಿಶಾ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ದಿಶಾ ಮದನ್ ಕಾಣಿಸಿಕೊಂಡಿದ್ದಾರೆ. ಇನ್ನು ಧಾರಾವಾಹಿಯ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಬೆಳಿಗ್ಗೆ ಎಂಟರಿಂದ ರಾತ್ರಿ ಹನ್ನೊಂದರವರೆಗೆ ದಿಶಾ ಮದನ್ ಮನೆಯಿಂದ ಹೊರಗಿರುತ್ತಾರೆ. ಮನೆಯಲ್ಲಿ ಆಕೆಯ ಪತಿ ಹಾಗೂ ಆಕೆಯ ತಂದೆ ತಾಯಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅದೆಷ್ಟೋ ಬಾರಿ ಎರಡು ಪುಟಾಣಿ ಮಕ್ಕಳ ತಾಯಿಯಾಗಿ ದಿಶಾ ಈ ರೀತಿ ಹೊರಗಿರುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆಯಂತೆ. ಆದರೆ, ಅದ್ಭುತವಾದ ಸಪೋರ್ಟ್ ಸಿಸ್ಟಮ್ ಆಕೆಯ ಮನೆಯಲ್ಲಿ ಇರುವುದರಿಂದ ಇವೆಲ್ಲವೂ ಸುಲಭವಾಗಿದೆಯಂತೆ.

Actress Disha Madan entered television through Lakshmi Nivas serial

ಇಂದು ಕಿರುತೆರೆಯಲ್ಲಿಯೂ ಬಹಳಷ್ಟು ಬದಲಾವಣೆಗಳಾಗಿದೆ. ಪ್ರತಿ ಪಾತ್ರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆ ಪಾತ್ರಕ್ಕೆ ಸರಿಯಾದಂತಹ ಬಟ್ಟೆ ಬರೆಯನ್ನು, ಹಾವ ಭಾವ ಡೈಲಾಗ್‌ಗಳನ್ನು ಬರೆಯುವುದಕ್ಕೆ ಹೊಸ ತಂಡವನ್ನು ಇಡುತ್ತಾರೆ. ಪ್ರತಿ ಪಾತ್ರವೂ ಜನರನ್ನು ತಲುಪಬೇಕೆಂಬ ಉದ್ದೇಶಕ್ಕೆ ಬಹಳಷ್ಟು ಹೋಂವರ್ಕ್ ಹಾಗೂ ಶ್ರಮ ಹಾಕುತ್ತಾರೆ. ಹತ್ತು ವರ್ಷದ ಹಿಂದೆ ಹೀಗಿರಲಿಲ್ಲವಂತೆ. ಬದಲಾದ ಕಿರುತೆರೆ ರಂಗವನ್ನು ಮತ್ತೆ ಹೊಕ್ಕು ಅದರೊಳಗೆ ಒಂದಾಗುವ ಆಸೆ ಈಕೆಯದು.

More from Filmibeat

English summary
Disha Madan returned to television after a decade through Lakshmi Nivas serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X