ದಿಶಾ ಮದನ್ ಅಲಿಯಾಸ್ ಭಾವನಾ ಹುಟ್ಟುಹಬ್ಬ ಆಚರಿಸಿದ ಲಕ್ಷ್ಮೀ ನಿವಾಸ ತಂಡ

By ಪ್ರಿಯಾ ದೊರೆ

ನಟಿ ದಿಶಾ ಮದನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಿಶಾ ಅವರಿಗೆ ಇಂದಿನ ಹುಟ್ಟುಹಬ್ಬ ಸಕತ್ ಸ್ಪೆಷಲ್ ಅಂತೆ. ಈ ಬಗ್ಗೆ ದಿಶಾ ಅವರೇ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ದಿಶಾ ಅವರು ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ನಟನೆಯಲ್ಲಿ ಬ್ಯುಸಿ ಇದ್ದರೂ ನಿತ್ಯ ಏನಾದರೂ ಒಂದು ಫೋಸ್ಟ್ ಅನ್ನು ಮಾಡುತ್ತಲೇ ಇರುತ್ತಾರೆ. ಹತ್ತು ವರ್ಷಗಳ ಕಾಲ ಕಿರುತೆರೆಯಿಂದ ದೂರ ಉಳಿದಿದ್ದರೂ ಕೂಡ ದಿಶಾ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಿಂದಲೇ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್

ಕುಲವಧು ಧಾರಾವಾಹಿಯ ನಂತರ ಮದುವೆ, ಮಕ್ಕಳು ಎಂದು ವ್ಯೆಯಕ್ತಿಕ ಜೀವನಕ್ಕೆ ಸಮಯ ಕೊಟ್ಟವರು ದಿಶಾ. ನಡು ನಡುವಲ್ಲಿ ಕ್ಯಾಮರಾ ಎದುರಿಗೆ ಬಣ್ಣ ಹಚ್ಚುತ್ತಿದ್ದ ದಿಶಾ ಸಿನಿಮಾ, ವೆಬ್ ಸಿರೀಸ್, ಧಾರಾವಾಹಿ, ರಿಯಾಲಿಟಿ ಶೋ ಎಲ್ಲದರಲ್ಲೂ ಕಾಣಿಸಿಕೊಂಡಿದ್ದಾರೆ. ಮ್ಯೂಸಿಕಲಿ, ಡಬ್ ಸ್ಮ್ಯಾಶ್, ರೀಲ್ಸ್, ಡ್ಯಾನ್ಸ್ ಮತ್ತು ಟಿಕ್-ಟಾಕ್ ನಲ್ಲಿ ಲಿಪ್-ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದ ದಿಶಾ ಮದನ್ ಅವರಿಗೆ ಫಾಲೋವರ್ಸ್ ಗಳ ಸಂಖ್ಯೆ ಏನು ಕಡಿಮೆ ಇಲ್ಲ. ವಿಶೇಷ ಹಾಗೂ ವಿಭಿನ್ನವಾದ ಫೋಟೋಶೂಟ್, ಡ್ಯಾನ್ಸ್ ಮಾಡುವ ದಿಶಾ ಅವರು, ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಗೆ ಭಾವನಾ ಆಗಿ ನಟಿಸುತ್ತಿದ್ದಾರೆ.

Actress Disha madan happy birthday

ನಟನೆ ಜೊತೆಗೆ ವೈಯಕ್ತಿಕ ಜೀವನ

ಕುಲವಧು ಧಾರಾವಾಹಿ ಮೂಲಕ ದಿಶಾ ಮದನ್ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ ವೆಬ್ ಸಿರೀಸ್, ರಿಯಾಲಿಟಿ ಶೋ ಹಾಗೂ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಭರತನಾಟ್ಯ ಕಲಾವಿದೆ ಆಗಿರುವ ದಿಶಾ ಅವರು ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ನಲ್ಲಿ ವಿನ್ನರ್ ಆಗಿದ್ದರು. ಶಶಾಂಕ್ ವಾಸುಕಿ ಗೋಪಾಲ್ ಮತ್ತು ದಿಶಾ ಮದನ್ 2016ರಲ್ಲಿ ಭೇಟಿಯಾಗಿ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2019ರಲ್ಲಿ ಪುತ್ರ ವಿಹಾನ್ ನನ್ನು ಮನೆಗೆ ಬರ ಮಾಡಿಕೊಂಡರು. 2020ರಲ್ಲಿ ಹೊಸ ಮನೆಯನ್ನು ಖರೀದಿಸಿ ಗೃಹಪ್ರವೇಶ ನೆರವೇರಿಸಿದರು. 2022ರಲ್ಲಿ ಎರಡನೇ ಮಗು ಅವಿರಾಳನ್ನು ವೆಲ್ಕಮ್ ಮಾಡಿದರು.

ಒಳ್ಳೊಳ್ಳೆ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ

ಮೊದಲ ಬಾರಿಗೆ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನಟಿಸಿದ ದಿಶಾ ಅವರು ಪತ್ರಕರ್ತೆ ಪಾತ್ರವನ್ನು ನಿರ್ವಹಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಹೇಟ್ ಯು ರೋಮಿಯೋ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡರು. ನಂತರ ಹಂಬಲ್ ಪೊಲಿಟೀಶಿಯನ್ ನೋಗರಾಜ್ ಸಿನಿಮಾದಲ್ಲಿ ರಿಪೋರ್ಟರ್ ಆಗಿ ನಟಿಸಿ ಎಲ್ಲರ ಹೊಟ್ಟೆ ಹುಣ್ಣಾಗುವಂತೆ ಮನಗಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಇಸ್ಮಾರ್ಟ್ ಜೋಡಿ ಎಂಬ ರಿಯಾಲಿಟಿ ಶೋನಲ್ಲಿ ಪತಿ ಜೊತೆಗೆ ಭಾಗವಹಿಸಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Actress Disha madan happy birthday

ಹುಟ್ಟುಹಬ್ಬದ ವೀಡಿಯೋ ಹಂಚಿಕೊಂಡ ನಟಿ

ದಿಶಾ ಅವರು ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿರುವುದಕ್ಕೆ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ. ಇನ್ನು ದಿಶಾ ಅವರಿಗೂ ಮತ್ತೆ ಬಣ್ಣ ಹಚ್ಚಿರುವುದಕ್ಕೆ ಖುಷಿ ಇದೆ. ಇನ್ನು ಇಂದು ದಿಶಾ ಅವರು ಹುಟ್ಟುಹಬ್ಬವಾಗಿದ್ದು, ಲಕ್ಷ್ಮೀ ನಿವಾಸ ಧಾರಾವಾಹಿ ತಂಡ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದೆ. ಇದರ ವೀಡಿಯೋವನ್ನು ಹಂಚಿಕೊಂಡಿರುವ ದಿಶಾ ಅವರು, ತಮ್ಮ ಕಳೆದ ಒಂದು ವರ್ಷದ ಸಂತಸವನ್ನು ಶೇರ್ ಮಾಡಿಕೊಂಡಿದ್ದಾರೆ. ಸಾವಿರಾರು ಅಭಿಮಾನಿಗಳು ಸೇರಿದಂತೆ, ಗೆಳೆಯರು, ಸಂಬಂದಿಕರು, ಸಹ ಕಲಾವಿದರು ದಿಶಾ ಅವರಿಗೆ ಶುಭ ಕೋರಿದ್ದಾರೆ

More from Filmibeat

English summary
Lakshmi nivasa serial team celebrated Actress Disha madan birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X