'ಲಕ್ಷ್ಮಿ ನಿವಾಸ'ದ ನಟಿ ದಿಶಾ ಮದನ್‌ಗೆ 'ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್'

By ಅನಿತಾ ಬನಾರಿ

ಕನ್ನಡ ಕಿರುತೆರೆಯಲ್ಲಿ ಕಳೆದ ಒಂದು ದಶಕದಿಂದಲೂ ನಟಿ ದಿಶಾ ಮದನ್ ಬಹಳ ಆ್ಯಕ್ಟೀವ್ ಇದ್ದಾರೆ. ಪ್ರಸ್ತುತ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ ಎಂಬ ಪಾತ್ರದ ಮೂಲಕ ಜನಮನ ಗೆದ್ದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಂತೂ ಬಹಳಷ್ಟು ಆ್ಯಕ್ಟಿವ್ ಇದ್ದಾರೆ.

ಸೋಶಿಯಲ್ ಮೀಡಿಯಾಗಳ ಪೈಕಿ ಒಂದಾಗಿರುವ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ ದಿಶಾ ಮದನ್. ಫೋಟೋಗಳ ಜೊತೆಗೆ ಕೆಲವೊಂದು ರೀಲ್ಸ್ ಅನ್ನು ಈಕೆ ಹಾಕುತ್ತಿರುತ್ತಾರೆ. 'ಕುಲವಧು' ಧಾರಾವಾಹಿಯ ವಚನಾ ಆಗಿ ಕಿರುತೆರೆಗೆ ಕಾಲಿಟ್ಟ ದಿಶಾ ಮದನ್ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು. ಆದರೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ದಿಶಾ ಮದನ್ ಹೊರಬಂದಿದ್ದರು.

Actress Disha Madan who received the Karnataka Women Achievers Award

ಪ್ರಸ್ತುತ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ದಿಶಾ ಮದನ್. ಈ ಮೊದಲು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಇಸ್ಮಾರ್ಟ್ ಸೂಪರ್ ಜೋಡಿ, ಮುಂತಾದ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

ಶಶಾಂಕ್ ವಾಸುಕಿ ಎಂಬುವವರನ್ನು ಮದುವೆಯಾಗಿರುವ ನಟಿ ದಿಶಾ ಮದನ್ ಈಗ ಎರಡು ಮುದ್ದಾದ ಮಕ್ಕಳ ತಾಯಿ. ಮದುವೆಯಾದ ನಂತರ ವೈಯಕ್ತಿಕ ಜೀವನಕ್ಕೆಂದು ಸಣ್ಣ ಬ್ರೇಕ್ ತೆಗೆದುಕೊಂಡ ನಟಿ ದಿಶಾ ಇದೀಗ 'ಲಕ್ಷ್ಮಿ ನಿವಾಸ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಿರುತೆರೆ ಧಾರಾವಾಹಿಗಳಷ್ಟೇ ಅಲ್ಲದೆ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಈಕೆ ನಟಿಸಿದ್ದಾರೆ. ಇದರ ಜೊತೆಗೆ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ವೆಬ್ ಸೀರೀಸ್‌ನಲ್ಲಿ ಈಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ವಿಶೇಷತೆ ಏನೆಂದರೆ, ನಟಿ ದಿಶಾ ಮದನ್ 2024 ಸಾಲಿನ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಹೌದು, ನಟಿ ದಿಶಾ ಮದನ್ ಅವರ ಸುದೀರ್ಘ ನಟನಾ ಪಯಣವನ್ನು ಗಮನಿಸಿ, ಆಕೆಗೆ ಈ ಅವಾರ್ಡ್ ನೀಡಲಾಗಿದೆಯಂತೆ. ಕಿರುತರೆ ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ತಮ್ಮದೇ ವಿಭಿನ್ನ ಸ್ಟೈಲ್ ಹಾಗೂ ಪ್ರತಿಭೆಯನ್ನು ತೋರಿಸುತ್ತಿರುವ ಈ ಕಲಾವಿದೆಯ ಪರಿಶ್ರಮಕ್ಕೆ ಈ ಅವಾರ್ಡ್ ನೀಡಲಾಗಿದೆಯಂತೆ. ಇಂದಿನ ಡಿಜಿಟಲ್ ಯುಗದಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ದೈನಂದಿನ ಚಟುವಟಿಕೆ, ಅಭಿನಯ, ಡಾನ್ಸ್ ಹೀಗೆ ನಾನಾ ವಿಚಾರಗಳಲ್ಲಿ ಸತತ ಪರಿಶ್ರಮದಿಂದ ಮನೋರಂಜಿಸುತ್ತ, ಈ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇರುವ ಯುವ ಜನರಿಗೆ ಸ್ಪೂರ್ತಿಯಾಗಿದ್ದಾರೆ ನಟಿ ದಿಶಾ ಮದನ್.

Actress Disha Madan who received the Karnataka Women Achievers Award

ಈ ಎಲ್ಲ ಕಾರಣಗಳಿಗೆ ಇವರನ್ನು ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಯೂಯೆನ್ಸರ್ ಎಂಬ ವಿಭಾಗದಡಿಯಲ್ಲಿ ಅವಾರ್ಡ್ ಮೂಲಕ ಗುರುತಿಸಲಾಗಿದೆ.
ಡಿಸೆಂಬರ್ 15ರಂದು ಬೆಂಗಳೂರಿನ ಯಶವಂತಪುರದ ತಾಜ್ ಐಷಾರಾಮಿ ಹೋಟೆಲ್‌ನಲ್ಲಿ ಈ ಅವಾರ್ಡ್ ಫಂಕ್ಷನ್ ನಡೆದಿದ್ದು ಅದರಲ್ಲಿ ನಟಿ ದಿಶಾ ಮದನ್ ಅವರು ಕೈಗೆತ್ತಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಹಂಚಿಕೊಂಡಿರುವ ನಟಿ ದಿಶಾ ಮದನ್, ಬಹಳ ಭಾವನಾತ್ಮಕವಾಗಿ ಈ ಸಿಹಿ ಸುದ್ದಿಯನ್ನು ತಮ್ಮ ಫಾಲೋವರ್ಸ್ ನೊಂದಿಗೆ ಹೇಳಿಕೊಂಡಿದ್ದಾರೆ. ಹಾಗೆಯೇ ತಮ್ಮ ಬಂಧು ಬಾಂಧವರ ಒಂದಷ್ಟು ಹೆಸರುಗಳನ್ನು ಮೆನ್ಷನ್ ಮಾಡಿ ಅವರೆಲ್ಲರಿಗೂ ವಂದನೆಗಳನ್ನು ತಿಳಿಸಿದ್ದಾರೆ.

ಸದ್ಯಕ್ಕಂತೂ ಭಾವನಾ ಪಾತ್ರದ ಮೂಲಕ, ಲಕ್ಷ್ಮಿ ನಿವಾಸ ಹಾಗೂ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ನಟಿ ದಿಶಾ ಮದನ್ ಈಗ ಈ ಅವಾರ್ಡ್ ಮೂಲಕ ಇನ್ನಷ್ಟು ಬೆಳಕಿಗೆ ಬಂದಿದ್ದಾರೆ.

More from Filmibeat

English summary
Lakshmi Nivasa actress Disha Madan who received the Karnataka Women Achievers Award
Read more about: actress anitha banari award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X