'ಗೌರಿ ಶಂಕರ'ದಿಂದ ಹೊರಬಿದ್ದಿದ್ದ ಕೌಸ್ತುಭಮಣಿ; ಗೌರಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ದಿವ್ಯಾ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಗೌರಿಶಂಕರ'. ವಿಭಿನ್ನ ಕತೆ ಹಾಗೂ ಪಾತ್ರವರ್ಗದ ಮೂಲಕ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಕಳೆದ ವಾರವಷ್ಟೇ ನಾಯಕ ನಾಯಕಿಯ ಅದ್ಧೂರಿಯಾಗಿ ನಡೆದಿದ್ದು ಇಷ್ಟರಲ್ಲಿಯೇ ನಾಯಕಿಯ ಬದಲಾವಣೆ ಆಗಿದೆ. ಗೌರಿಯಾಗಿ ಅಭಿನಯಿಸುತ್ತಿದ್ದ ಕೌಸ್ತುಭಮಣಿ ಅವರು ಇದ್ದಕ್ಕಿದ್ದಂತೆ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.
ಕಾರಣಾಂತರಗಳಿಂದ ಗೌರಿಯ ಪಾತ್ರದಿಂದ ಕೌಸ್ತುಭಮಣಿ ಅವರು ಹೊರಬಂದಿದ್ದು ಆ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ. ಇನ್ನು ಮುಂದೆ ದಿವ್ಯಾ ವಾಗೂಕರ್ ಅವರು ಗೌರಿಯಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಕಳೆದ ವರ್ಷ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಾಯಕಿ ಸ್ಪಂದನಾ ಆಗಿ ದಿವ್ಯಾ ವಾಗೂಕರ್ ನಟಿಸಿದ್ದರು.

'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ದಿವ್ಯಾ ವಾಗೂಕರ್ ತದ ನಂತರ ನಟಿಸಿದ್ದು, 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ. 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಪಾರ್ವತಿ ದೇವಿಯ ಪಾತ್ರದಲ್ಲಿ ನಟಿಸಿದ್ದ ದಿವ್ಯಾ ವಾಗೂಕರ್ ಅತಿಥಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು.
'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಮೂರು ನಾಲ್ಕು ಸಂಚಿಕೆಗಳಲ್ಲಿ ಅತಿಥಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ದಿವ್ಯಾ ವಾಗೂಕರ್ ಇದೀಗ ಮತ್ತೊಮ್ಮೆ ಪೂರ್ಣ ಪ್ರಮಾಣದ ನಾಯಕಿಯಾಗಿ ಗಮನ ಸೆಳೆಯಲಿದ್ದಾರೆ. 'ಗೌರಿಶಂಕರ' ಧಾರಾವಾಹಿಗೆ ಈಗಾಗಲೇ ದಿವ್ಯಾ ವಾಗೂಕರ್ ಆಗಮನವಾಗಿದ್ದು, ಇಂದಿನಿಂದ ಆಕೆಯಿರುವ ಸಂಚಿಕೆಯ ಪ್ರಸಾರ ಶುರುವಾಗಿದೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯಾಗಿ ನಟಿಸುವ ಮೂಲಕ ಕಿರುತೆರೆಗೆ ದಿವ್ಯಾ ವಾಗೂಕರ್ ಕಾಲಿಟ್ಟಿದ್ದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ದಾಸ್ವಾಳ ಎನ್ನುವ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದರು.

ನಂತರ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿರದ ದಿವ್ಯಾ ವಾಗೂಕರ್ ಮುಂದೆ ಕಿರುತೆರೆಗೆ ಸ್ಪಂದನಾಳಾಗಿ ಮರಳಿದ್ದಾರೆ. 'ಮರಳಿ ಮನಸಾಗಿದೆ' ಧಾರಾವಾಹಿ ಕಳೆದ ವರ್ಷವಷ್ಟೇ ಮುಕ್ತಾಯಗೊಂಡಿದ್ದು, ಇದೀಗ ವಾಹಿನಿಯಲ್ಲಿ ನಾಯಕಿಯಾಗಿ ದಿವ್ಯಾ ವಾಗೂಕರ್ ಮೋಡಿ ಮಾಡಲಿದ್ದಾರೆ. ಒಟ್ಟಿನಲ್ಲಿ ಸಣ್ಣ ಗ್ಯಾಪ್‌ನ ನಂತರ ದಿವ್ಯಾ ಅವರು ಕಿರುತೆರೆಗೆ ಮರಳಿದ್ದು, ಮತ್ತೊಮ್ಮೆ ತಮ್ಮ ಅಭಿನಯದ ಮೂಲಕ ದಿವ್ಯಾ ವಾಗೂಕರ್ ಕಿರುತೆರೆ ವೀಕ್ಷಕರ ಮನ ಸೆಳೆಯಲಿದ್ದಾರೆ.


Click it and Unblock the Notifications











