"ನನಗೆ ನೆಗೆಟಿವ್ ರೋಲ್‌ ಅಂದರೇ ಇಷ್ಟ" ಕಿರುತೆರೆ ನಟಿ ದಿವ್ಯಶ್ರೀ ನಾಯಕ್

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ನಾತಿಚರಾಮಿ'ಯೂ ಒಂದು. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ 'ನಾತಿಚರಾಮಿ'ಯು ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ. ಈ ಧಾರಾವಾಹಿಯಲ್ಲಿ ನಾಯಕಿ ಭಕ್ತಿಯ ಅಣ್ಣನ ಹೆಂಡತಿ ರಾಗಿಣಿಯಾಗಿ ಅಭಿನಯಿಸುತ್ತಿರುವ ಬೆಡಗಿ ಹೆಸರು ದಿವ್ಯಶ್ರೀ ನಾಯಕ್.

"ನಾತಿಚರಾಮಿ ಧಾರಾವಾಹಿಯಲ್ಲಿ ನನ್ನದು ಸಂಪೂರ್ಣ ನೆಗೆಟಿವ್ ಪಾತ್ರ. ನಾಯಕಿ ಭಕ್ತಿಯ ಅಣ್ಣನ ಹೆಸರು ಶ್ರೀಕಾಂತ್. ಶ್ರೀಕಾಂತನ ಹೆಂಡತಿ ರಾಗಿಣಿಯಾಗಿ ನಾನು ನಟಿಸುತ್ತಿದ್ದೇನೆ. ನನ್ನದು ನೆಗೆಟಿವ್ ರೋಲ್ ಯಾಕೆ ಅಂದ್ರೆ, ನಂಗೆ ಶ್ರೀಕಾಂತನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ನನಗೆ ಒಬ್ಬ ಶ್ರೀಮಂತನನ್ನು ನೋಡಿ ಮದುವೆಯಾಗಬೇಕು ಅನ್ನೋ ಆಸೆ ಇರುತ್ತೆ. ನಾನು ಶ್ರೀಮಂತ ಫ್ಯಾಮಿಲಿಯಿಂದ ಬಂದವಳಾಗಿರ್ತಿನಿ. ಶ್ರೀಕಾಂತನ ಫ್ಯಾಮಿಲಿ, ಬಡ ಬ್ರಾಹ್ಮಣ, ಪುರೋಹಿತರ ಕುಟುಂಬ. ನನ್ನ ಮತ್ತು ಶ್ರೀಕಾಂತ್ ಮಧ್ಯ ಜಸ್ಟ್ ಟೈಮ್ ಪಾಸ್ ಲವ್ ಇರುತ್ತೆ‌. ಈ ವಿಷಯ ಭಕ್ತಿಗೆ ಗೊತ್ತಾಗಿ, ಅವಳು ಎಲ್ಲರಿಗೂ ಸುದ್ದಿ ಹಬ್ಬಿಸಿ, ಆಕೆ ನನ್ನ ಮತ್ತು ಶ್ರೀಕಾಂತನ ಮದುವೆ ಮಾಡಿಸ್ತಾಳೆ‌. ಹಾಗಾಗಿ ನಂಗೆ ಭಕ್ತಿ ಮೇಲೆ ಕೋಪ ಶುರು ಆಗುತ್ತೆ‌. ಯಾಕೆಂದ್ರೆ ಶ್ರೀಮಂತ ಮನೆತನದ ಹುಡುಗನನ್ನು ಮದುವೆಯಾಗಿ ಸೆಟಲ್ ಆಗಬೇಕು ಎಂದಿದ್ದ ನನಗೆ ಭಕ್ತಿಯಿಂದಾಗಿ ಶ್ರೀಕಾಂತನನ್ನು ಮದುವೆಯಾಗುವ ಪರಿಸ್ಥಿತಿ ಬರುತ್ತದೆ. ಅದೇ ಕಾರಣದಿಂದ ನಾನು ಆಕೆಯನ್ನು ದ್ವೇಷಿಸುತ್ತೇನೆ" ಎಂದು ರಾಗಿಣಿ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ದಿವ್ಯಶ್ರೀ ನಾಯಕ್ ಹೇಳಿಕೊಂಡಿದ್ದಾರೆ.

Actress Divyashree Nayak said that she likes to act in a negative role

"ಕಿರುತೆರೆಯಲ್ಲಿ ಇದು ನನ್ನ ಎರಡನೇ ನೆಗೆಟಿವ್ ರೋಲ್. ಇಲ್ಲಿಯ ತನಕ ನಾನು ನಾಲ್ಕು ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ಎರಡು ಸೀರಿಯಲ್‌ಗಳು ಈಗಾಗಲೇ ಮುಕ್ತಾಯಗೊಂಡಿದೆ. ಆರಂಭದಲ್ಲಿ ನನಗೆ ನೆಗೆಟಿವ್ ರೋಲ್‌ನಲ್ಲಿ ಮಾಡುವುದಕ್ಕೆ ಇಷ್ಟವೇ ಇರಲಿಲ್ಲ. ಗೃಹಪ್ರವೇಶ ಧಾರಾವಾಹಿಯಲ್ಲಿ ಖಳನಾಯಕಿ ಶಾಂಭವಿ ಪಾತ್ರ ಸಿಕ್ಕಾಗ ಅನಿವಾರ್ಯವಾಗಿ ನಾನು ನಟಿಸಬೇಕಾಯಿತು. ಆಮೇಲೆ ಅದನ್ನೇ ಇಷ್ಟಪಡೋದಕ್ಕೆ ಶುರುವಾದೆ" ಎಂದು ನೆಗೆಟಿವ್ ರೋಲ್ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ದಿವ್ಯಶ್ರೀ ನಾಯಕ್ ಹೇಳಿಕೊಂಡಿದ್ದಾರೆ.

"ಗೃಹಪ್ರವೇಶ ಧಾರಾವಾಹಿಯಲ್ಲಿ ಒಂದಷ್ಟು ಫ್ಯಾನ್ ಬೇಸ್ ನನಗೆ ಸಿಕ್ತು. ಶಾಂಭವಿ ಪಾತ್ರವೂ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಈಗ ರಾಗಿಣಿಯಾಗಿ ನಟಿಸುತ್ತಿದ್ದೇನೆ. ಅಂದ ಹಾಗೇ ಇದು ಸಂಪೂರ್ಣ ಖಳನಾಯಕಿಯ ಪಾತ್ರವೇನಲ್ಲ. ಪೆದ್ದು ಪೆದ್ದು ಆಗಿರುವ ಖಳನಾಯಕಿ ಎನ್ನಬಹುದು. ಬರೀ ಮಾತಿನಲ್ಲೇ ಚುಚ್ಚುತ್ತೇನೆ ಹೊರತು ಬೇರೇನೂ ಮಾಡುವ ಯೋಚನೆಯಿಲ್ಲ. ಶಾಂಭವಿಗೂ, ರಾಗಿಣಿ ಎರಡೂ ಪಾತ್ರಗಳು ನೆಗೆಟಿವ್ ಆಗಿದ್ದರು, ಎರಡು ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ" ಎನ್ನುತ್ತಾರೆ ದಿವ್ಯಶ್ರೀ ಹಂಚಿಕೊಂಡಿದ್ದಾರೆ.

Actress Divyashree Nayak said that she likes to act in a negative role

"ನೆಗೆಟಿವ್ ರೋಲ್ ನನಗೆ ತುಂಬಾ ಇಷ್ಟ. ಆ್ಯಕ್ಟಿಂಗ್ ಸ್ಪೇಸ್ ತುಂಬಾ ಸಿಗುತ್ತೆ. ಕಿಯೇಟಿವಿಟಿಗೆ ಜಾಸ್ತಿ ಸ್ಪೇಸ್ ಸಿಗುತ್ತೆ. ನಮ್ಮದೆ ಒಂದು ನೆಗೆಟಿವ್ ಸ್ಟೈಲ್‌ನ ಕ್ರಿಯೇಟ್ ಮಾಡ್ಕೊಳ್ಬಹುದು. ಪಾಸಿಟಿವ್ ಅಂದ್ರೆ ಸಾಫ್ಟ್ ಆಗಿ ಮಾತಾಡ್ಬೇಕು, ಈ ಥರ ಎಕ್ಸ್ ಪ್ರೆಶನ್ ಕೊಡ್ಬೇಕು, ಹೀಗೆ ಎಲ್ಲಾ ಸೇಮ್. ಆದರೆ ನೆಗೆಟಿವ್ ರೋಲ್‌ನಲ್ಲಿ ನಮ್ಮದೇ ಆದಂತಹ ಸ್ಟೈಲ್, ನಮ್ಮದೇ ಆದಂತಹ ಎಕ್ಸ್ ಪ್ರೆಶನ್ ಅಂತ ಟ್ರೇಡ್ ಮಾಡ್ಕೊಳ್ಬಹುದು" ಎಂದು ಹೇಳಿಕೊಂಡಿದ್ದಾರೆ ದಿವ್ಯಶ್ರೀ ನಾಯಕ್.

"ಅಂದ ಹಾಗೇ ನಂಗೆ ನೆಗೆಟಿವ್ ರೋಲ್ ಇಷ್ಟ ಆದ್ರೂ, ನೆಗೆಟಿವ್ ರೋಲ್‌ಗೆ ನಾನು ಫಿಕ್ಸ್ ಆಗ್ತಿದ್ದೀನಿ ಅಂಥ ಏನೂ ಅನ್ನಿಸ್ತಿಲ್ಲ‌. ಯಾಕೆಂದ್ರೆ ನಾನು ನೀನಾದೆ ನಾ ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದಲ್ಲಿ ನಟಿಸ್ತಿದ್ದು ಅದು ಕಂಪ್ಲೀಟ್ ಪಾಸಿಟಿವ್ ರೋಲ್. ಸಾಫ್ಟ್ ನೇಚರ್ ರೋಲ್ ನಂದು. ಏಕಕಾಲಕ್ಕೆ ಒಂದು ಪಾಸಿಟಿವ್, ಒಂದು ನೆಗೆಟಿವ್ ರೋಲ್ ಮಾಡ್ತಿರೋದು ಸಿಕ್ಕಾಪಟ್ಟೆ ಖುಷಿಯಿದೆ ನಂಗೆ" ಎನ್ನುತ್ತಾರೆ. ಕಿರುತೆರೆ ನಟಿ ದಿವ್ಯಶ್ರೀ ನಾಯಕ್.

"ನಾತಿಚರಾಮಿ ಧಾರಾವಾಹಿ ಟೀಂ ನನ್ನ ಮನೆ ಅಂಥ ಹೇಳ್ಬಹುದು. ಸಿಕ್ಕಾಪಟ್ಟೆ ಚೆಂದದ ಟೀಂ. ನಾತಿಚರಾಮಿ ಸೆಟ್‌ನಲ್ಲಿ ಎಲ್ಲವೂ ಕಾಮ್ ಮತ್ತು ಪೀಸ್ ಆಗಿ ಇರುತ್ತೆ. ಮ್ಯಾನೇಜರ್, ಅಸೋಸಿಯೇಟ್ ಇಂದ ಹಿಡಿದು ಸೂಪರ್ ಟೀಂ. ಎಲ್ಲಾ ಕಲಾವಿದರುಗಳು ಸೇರಿ ಸಾಕಷ್ಟು ಎಂಜಾಯ್ ಮಾಡುತ್ತೇವೆ. ಇನ್ನು ಧಾರಾವಾಹಿ ಡೈರೆಕ್ಟರ್ ರಾಮ್ ವೈದ್ಯ. ನನಗೆ ತುಂಬಾ ಹಳೆ ಪರಿಚಯ. ತುಂಬಾ ಕೂಲ್ ಡೈರೆಕ್ಟರ್ ಅವರು. ಕೋಪ, ಗಡಿಬಿಡಿ ಯಾವುದೂ ಇಲ್ಲ. ಎಲ್ಲವನ್ನು ಅಂದುಕೊಂಡ ಹಾಗೇ, ಅಂದುಕೊಂಡ ಸಮಯಕ್ಕೆ ಮುಗಿಸ್ತಾರೆ. ಬೆಸ್ಟ್ ಡೈರೆಕ್ಟರ್ ಅಂತ ಹೇಳ್ಬಹುದು. ಧಾರಾವಾಹಿ ಪ್ರೊಡ್ಯೂಸರ್ ಗಣಪತಿ ಭಟ್ ಕೂಡಾ ಅಷ್ಟೇ, ಬೆಸ್ಟ್ ಪ್ರೊಡ್ಯೂಸರ್. ಆರ್ಟಿಸ್ಟ್‌ಗಳು ಡಿಮ್ಯಾಂಡ್ ಮಾಡುವ ಮೊದಲೇ ಆರ್ಟಿಸ್ಟ್‌ಗಳ ರಿಕ್ವೈರಿಮೆಂಟ್ ಏನು ಅನ್ನುವುದನ್ನು ನೋಡಿ ನಮಗೆ ನೀಡ್ತಾರೆ. ಡಿಓಪಿ ಕಾಂತರಾಜು ಕೂಡಾ ಅಷ್ಟೇ, ಅಲ್ಟಿಮೇಟ್ ಕ್ಯಾಮೆರಾ ವರ್ಕ್ ಮಾಡ್ತಾರೆ. ಈಗ ಅನಿವಾರ್ಯ ಕಾರಣದಿಂದ ಡೈರೆಕ್ಟರ್ ಮತ್ತು ಕ್ಯಾಮೆರಾಮ್ಯಾನ್ ಚೇಂಜ್ ಆಗಿದ್ದಾರೆ. ಆದರೂ ಟೀಂನಲ್ಲಿ ಏನೂ ವ್ಯತ್ಯಾಸ ಅನಿಸ್ತಿಲ್ಲ. ಟೀಂ ಅದೇ ತರಹ ಚೆನ್ನಾಗಿ ನಡಿತೀದೆ. ಒಟ್ಟಿನಲ್ಲಿ ಶೂಟಿಂಗ್ ಸೆಟ್‌ಗೆ ಹೋಗೋದೇ ಖುಷಿ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಹೇಳಿಕೊಂಡಿದ್ದಾರೆ ದಿವ್ಯಶ್ರೀ ನಾಯಕ್.

More from Filmibeat

English summary
Actress Divyashree Nayak said that she likes to act in a negative role;
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X