Zee Kutumba Award;'ಬ್ರಹ್ಮಗಂಟು'ವಿನ ದೀಪಾ ಬೆಸ್ಟ್ ಮಗಳು; ಪ್ರಶಸ್ತಿ ಪಡೆದ ಸಂತಸದಲ್ಲಿ ದಿಯಾ ಪಾಲಕ್ಕಲ್
ವಿನೂತನ ಧಾರಾವಾಹಿಗಳ ಜೊತೆಗೆ ವಿಭಿನ್ನ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡವೂ ಒಂದು. ಇದೀಗ ಈ ವರ್ಷದ ಜೀ ಕುಟುಂಬ ಅವಾರ್ಡ್ಸ್ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಅನೇಕ ನಟ ನಟಿಯರು ವಿವಿಧ ಕ್ಯಾಟಗರಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಬ್ರಹ್ಮಗಂಟು' ವಿನಲ್ಲಿ ನಾಯಕಿ ದೀಪಾಳಾಗಿ ಅಭಿನಯಿಸುತ್ತಿರುವ ದಿಯಾ ಪಾಲಕ್ಕಲ್ ಅವರಿಗೆ ಬೆಸ್ಟ್ ಮಗಳು ಪ್ರಶಸ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದ ಹಾಗೇ ದಿಯಾ ಅವರು ನಾಯಕಿಯಾಗಿ ನಟಿಸುತ್ತಿರುವ ಮೊದಲ ಧಾರಾವಾಹಿ ಇದು ಎಂದು ಹೇಳಿದರೆ ತಪ್ಪಾಗಲಾರದು. ಈ ಧಾರಾವಾಹಿಯು ಇತ್ತೀಚೆಗಷ್ಟೇ ಶುರುವಾಗಿದ್ದು, ಕೇವಲ ಕಡಿಮೆ ಅವಧಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿದೆ ಎಂಬುದಕ್ಕೆ ದಿಯಾ ಪಾಲಕ್ಕಲ್ ಪಡೆದ ಪ್ರಶಸ್ತಿಯೇ ಕಾರಣ.

ಪ್ರಶಸ್ತಿ ಪಡೆದಿರುವ ದಿಯಾ "ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಪ್ರೀತಿಯ ದೀಪಾ. ಇವತ್ತು ನಂಗೆ ಈ ಅವಾರ್ಡ್ ಸಿಕ್ಕಿದಕ್ಕೆ ತುಂಬಾನೇ ಖುಷಿಯಾಗುತ್ತಿದೆ. ಇಡೀ ಕರ್ನಾಟಕದ ಜನತೆಗೆ ಥ್ಯಾಂಕ್ಯೂ ಹೇಳುವುದಕ್ಕೆ ಇಷ್ಟಪಡುತ್ತೇನೆ. ಜೊತೆಗೆ ನನ್ನ ಬ್ರಹ್ಮಗಂಟು ತಂಡಕ್ಕೂ ಥ್ಯಾಂಕ್ಯೂ ಹೇಳುವುದಕ್ಕೆ ಇಷ್ಟಪಡುತ್ತೇನೆ. ಕುಟುಂಬಕ್ಕೂ ತುಂಬಾ.. ತುಂಬಾ ಥ್ಯಾಂಕ್ಯೂ. ನಿಮ್ಮೆಲ್ಲರ ಸಪೋರ್ಟ್ ಇಂದಾನೇ ನನಗೆ ಇವತ್ತು ಬೆಸ್ಟ್ ಮಗಳು ಕ್ಯಾಟಗರಿಯಲ್ಲಿ ಅವಾರ್ಡ್ ಸಿಕ್ಕಿದೆ. ತುಂಬಾ ಧನ್ಯವಾದಗಳು" ಎಂದು ಹೇಳಿಕೊಂಡಿದ್ದಾರೆ.
ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿದ್ದರು ದಿಯಾ ಪಾಲಕ್ಕಲ್. 'ಕಿನ್ನರಿ' ಧಾರಾವಾಹಿಯಲ್ಲಿ ಐಶ್ವರ್ಯಾ ಎನ್ನುವ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ದಿಯಾ ನೆಗೆಟಿವ್ ರೋಲ್‌ನಲ್ಲಿ ಮೋಡಿ ಮಾಡಿದ್ದರು. ತದ ನಂತರ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಆಕೆ ಸಿನಿಮಾದಲ್ಲಿ ಅಭಿನಯಿಸಿದ್ದರು.
'ಅಮ್ಮಚ್ಚಿಯ ನೆನಪು' ಸಿನಿಮಾದಲ್ಲಿ ವೈದೇಹಿಯಾಗಿ ಅಭಿನಯಿಸಿದ ಈಕೆ ತದ ನಂತರ ತಮಿಳು ಕಿರುತೆರೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ
ಜಾನ್ ಜಾನಿ ಜನಾರ್ಧನ್', 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ದಿಯಾ '50' ಎಂಬ ಕಿರು ಚಿತ್ರದಲ್ಲಿಯೂ ನಟಿಸಿದ್ದಾರೆ.

ಇದೀಗ 'ಬ್ರಹ್ಮಗಂಟು' ಧಾರಾವಾಹಿಯ ದೀಪಾಳಾಗಿ ಕಿರುತೆರೆಗೆ ಮರಳಿರುವ ವಿಭಿನ್ನ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ದಿಯಾ ಪಾಲಕ್ಕಲ್ ಇತ್ತೀಚೆಗಷ್ಟೇ ಪಿಯುಸಿ ಮುಗಿಸಿದ್ದಾರೆ. ನಟನೆಯ ಹೊರತಾಗಿ ಭರತನಾಟ್ಯದಲ್ಲಿ ಆಸಕ್ತಿ ಹೊಂದಿರುವ ಈಕೆ ಅದನ್ನು ಕಲಿತಿದ್ದಾರೆ. ಇನ್ನು ದಿಯಾ ಅವರ ತಾಯಿ ಭರತನಾಟ್ಯ ಗುರುವಾಗಿದ್ದು ಅವರಿಂದಲೇ ಈಕೆ ಭರತನಾಟ್ಯವನ್ನು ಕಲಿತಿದ್ದಾರೆ. ಇದರ ಜೊತೆಗೆ ದಿಯಾ ಅವರ ಅಮ್ಮ ನಟಿಯಾಗಿದ್ದು ಈಕೆ ಬಣ್ಣದ ಲೋಕದಲ್ಲಿ ಕಾಲಿಡಲು ಕೂಡಾ ಅಮ್ಮನೇ ಕಾರಣ.


Click it and Unblock the Notifications











