'ಬ್ರಹ್ಮಗಂಟು' ಧಾರಾವಾಹಿಗಾಗಿ ಲುಕ್ ಬದಲಿಸಿಕೊಂಡ ದಿಯಾ ಏನಂತಾರೆ?

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ದೀಪಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ದಿಯಾ ಪಾಲಕ್ಕಲ್ ಕನ್ನಡ ಕಿರುತೆರೆಗೆ ಹೊಸಬರೇನೂ ಅಲ್ಲ. ಆದರೂ ಕೂಡ ನಾಯಕಿ ಪಾತ್ರದಿಂದ ಮೊದಲ ಬಾರಿಗೆ ಗುರುತಿಸಿಕೊಂಡಿದ್ದಾರೆ. ನಟಿ ದಿಯಾ ಪಾಲಕ್ಕಲ್ ತಮ್ಮ ಚಿಕ್ಕ ವಯಸ್ಸಿನಿಂದಲೂ ಕನ್ನಡ ಕಿರುತೆರೆಯಲ್ಲಿ ಬಾಲ ನಟಿಯಾಗಿ ಮಿಂಚಿದ್ದವರು, ಕನ್ನಡ, ತಮಿಳು ಕಿರುತೆರೆಯಲ್ಲಿ ನಟಿಸಿರುವ ದಿಯಾ ಅವರು ಸಿನಿಮಾಗಳಳ್ಲೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ದೀಪಾ ಪಾತ್ರದ ಮೂಲಕ ನಟಿಸುತ್ತಿದ್ದು, ದಿಯಾ ಅವರ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

Actress Diya palakkal opens up About Brahmagantu serial Deepa role

ನಟಿ ದಿಯಾ ಪಾಲಕ್ಕಲ್ ಈ ಮೊದಲು ಕಲರ್ಸ್ ಕನ್ನಡದಲ್ಲಿ ಮೂಡಿ ಬಂದ 'ಕಿನ್ನರಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. 2015 ರಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಐಶ್ವರ್ಯ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ದಿಯಾ ಸೀರಿಯಲ್ ಜರ್ನಿ

ತಮಿಳು ಕಿರುತೆರೆಯಲ್ಲಿ ನಟಿ ಖುಷ್ಬೂ ಅವರು ನಟಿಸುತ್ತಿದ್ದ 'ಲಕ್ಷ್ಮೀ ಸ್ಟೋರ್ಸ್' ಎಂಬ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಸನ್ ಟಿವಿಯಲ್ಲಿ ಪ್ರಸಾರ ಕಂಡಿದ್ದ ಈ ಧಾರಾವಾಹಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಕಿರುತೆರೆಗಳಷ್ಟೇ ಅಲ್ಲದೇ ದಿಯಾ ಕಿರುಚಿತ್ರ, ಸಿನಿಮಾಗಳಳ್ಲೂ ನಟಿಸಿದ್ದಾರೆ. 2018ರಲ್ಲಿ ರಾಜ್ಬಿ ಶೆಟ್ಟಿ ಹಾಗೂ ವೈಜಯಂತಿ ಅಡಿಗ ಅವರು ನಟಿಸಿದ್ದ ಸಿನಿಮಾದಲ್ಲೂ ನಟಿಸಿದ್ದಾರೆ. 'ಅಮ್ಮಚ್ಚಿಯೆಂಬ ನೆನಪು' ಅನ್ನೋ ಈ ಸಿನಿಮಾದಲ್ಲಿ ದಿಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರಶಸ್ತಿ ಕೂಡ ಪಡೆದುಕೊಂಡಿದೆ. ಇನ್ನು 'ಜಾನ್ ಜಾನಿ ಜನಾರ್ಧನ್', 'ಭರ್ಜರಿ', '50', 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾಗಳಲ್ಲೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. '50' ಎಂಬುದು ಕಿರುಚಿತ್ರವಾಗಿದೆ.

ಲುಕ್ ಬದಲಿಸಿಕೊಂಡ ನಟಿ

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಬ್ರಹ್ಮಗಂಟು' 'ಧಾರಾವಾಹಿಯಲ್ಲಿ ದೀಪಾ ಎಂಬ ಪಾತ್ರಕ್ಕೆ ದಿಯಾಬಣ್ಣ ಹಚ್ಚಿದ್ದಾರೆ. ರಿಯಲ್ ಲೈಫ್‌ನಲ್ಲಿ ಸುಂದರವಾಗಿ ಕಾಣುವ ದಿಯಾ ಅವರು ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ಕೃಷ್ಣ ಸುಂದರಿಯಾಗಿದ್ದಾರೆ. ಕ್ಲಿಪ್ ಹಾಕಿರುವ ಹಲ್ಲುಗಳು, ಕಪ್ಪು ಬಣ್ಣ ಬಳಿದುಕೊಂಡು ತಮ್ಮ ನಿಜವಾದ ಸೌಂದರ್ಯವನ್ನು ಬಚ್ಚಿಟ್ಟು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೀಗೆ ಧಾರಾವಾಹಿಯಲ್ಲಿ ನಟಿಸಲು ಏನು ಕಾರಣ ಈ ಪಾತ್ರವನ್ನು ಒಪ್ಪಿಕೊಂಡಿದ್ದು ಏಕೆ ಎಂದು ಕೇಳಿದ್ದಕ್ಕೆ ನಟಿ ದಿಯಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಚಾಲೆಂಜಿಂಗ್ ಪಾತ್ರ ಬೇಕು

ನಾನು ಇರುವ ಹಾಗೆಯೇ ಕ್ಯಾಮಾರಾ ಮುಂದೆ ಪಾತ್ರವನ್ನಷ್ಟೇ ಮಾಡುವುದು ಬೇರೆ. ಅದೇ ನನ್ನ ಕಂಪ್ಲೀಟ್ ಲುಕ್ ಅನ್ನು ಕೂಡ ಬದಲಿಸಿಕೊಂಡು ನಟಿಸುವುದು ವಿಶೇಷ ಅನ್ನಿಸಿತು. ಇಂತಹ ಅವಕಾಶಗಳು ಸಿಗುವುದು ಕೂಡ ಕಷ್ಟವೇ ಹಾಗಾಗಿ ನಾನು ಈ ಪಾತ್ರವನ್ನು ಮಾಡಲು ಒಪ್ಪಿಕೊಂಡೆ. ಮೇಕಪ್ ಮಾಡಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಅದರ ಜೊತೆಗೆ ಹಲ್ಲುಗಳಿಗೆ ಕ್ಲಿಪ್ ಧರಿಸಿಕೊಂಡು ಮಾತನಾಡಬೇಕು. ಇದೆಲ್ಲಾ ಒಂದು ರೀತಿಯಲ್ಲಿ ಚಾಲೆಂಜಿಂಗ್ ಕೂಡ ಹೌದು. ಅಲ್ಲದೇ, ವೀಕ್ಷಕರು ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಅದು ನನಗೆ ಇನ್ನಷ್ಟು ಹುಮ್ಮಸ್ಸನ್ನು ನೀಡಿದೆ ಎಂದು ಹೇಳಿದ್ದಾರೆ. ಸದ್ಯ 'ಬ್ರಹ್ಮಗಂಟು' ಧಾರಾವಾಹಿಯನ್ನು ವೀಕ್ಷಕರು ಇಷ್ಟಪಟ್ಟು ನೋಡುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ನಟಿ ಪ್ರೀತಿ ಶ್ರೀನಿವಾಸ್, ನಟಿ ಕಾವ್ಯಾ ರಮೇಶ್, ನಟ ಭುವನ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

More from Filmibeat

English summary
Brahmagantu serial heroine Diya palakkal on her character as Deepa;
Read more about: serial actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X