ಪಾತ್ರ ಬೇಕೆಂದರೆ ಮಂಚ ಏರಬೇಕು ಎಂದಿದ್ದನಂತೆ ಆ ನಿರ್ದೇಶಕ

ಮೀ ಟೂ ಅಭಿಯಾನ ಚಿತ್ರರಂಗದ ಕರಾಳ ಮುಖವನ್ನು ತೆರೆದಿಟ್ಟಿತು. ಆದರೆ ಆ ಕರಾಳ ಕತೆಗಳು ಚಿತ್ರರಂಗದಲ್ಲಿ ಇನ್ನೂ ಸಾಕಷ್ಟಿವೆ. ಕಾಲ-ಕಾಲಕ್ಕೆ ಹೊರಗೆ ಬರುತ್ತಿವೆ.

ಇದೀಗ ಟಿವಿ ನಟಿಯೊಬ್ಬರು ತಮಗಾದ ಕೆಟ್ಟ ಅನುಭವವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬ ಪಾತ್ರ ನೀಡಲು ಮುಂದಿಟ್ಟಿದ್ದ ಕೆಟ್ಟ ಷರತ್ತಿನ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.

ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ದೋನಲ್ ಬಿಶ್ಟ್ ತಮಗಾದ ಕೆಟ್ಟ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

Actress Donal Bisht Opened Up About Bad Experience In Her Career

ಪತ್ರಕರ್ತೆಯಾಗುವ ಕನಸಿಟ್ಟುಕೊಂಡು ಶಿಕ್ಷಣ ಮುಗಿಸಿದ್ದ ದೋನಲ್, ಉದ್ಯೋಗಕ್ಕೆ ಹೊದಾಗ ತೀವ್ರ ನಿರಾಸೆ ಅನುಭವಿಸಿದ್ದರಂತೆ. ಈ ರೀತಿಯ ಪತ್ರಕರ್ತೆ ಆಗಲು ತಾವು ಶಿಕ್ಷಣ ಮಾಡಿರಲಿಲ್ಲ ಎಂದು ನಿಶ್ಚಯಿಸಿ, ಸಿನಿಮಾದಲ್ಲಿ ನಟಿಸುವ ನಿರ್ಧಾರ ಮಾಡಿದರಂತೆ.

'ಆರಂಭದಲ್ಲಿ ಒಂದು ಶೋ ನಲ್ಲಿ ಅವಕಾಶ ಸಿಕ್ಕು, ಹಣದ ಮಾತು-ಕತೆ ಮುಗಿದು, ಡೇಟ್ಸ್ ನೀಡಿದ್ದು ಸಹ ಆಗಿತ್ತು, ಆದರೆ ಕೊನೆ ಕ್ಷಣದಲ್ಲಿ ನನ್ನನ್ನು ತೆಗೆದು ಬೇರೆ ನಟಿಯನ್ನು ಆಯ್ಕೆ ಮಾಡಲಾಯಿತು. ಆಗ ನಾನು ಮತ್ತು ನನ್ನ ಕುಟುಂಬದ ಅನುಭವಿಸಿದ ಶಾಕ್ ಅಷ್ಟಿಷ್ಟಲ್ಲ, ಸಿನಿಮಾ ರಂಗದಲ್ಲಿರುವವರೆಲ್ಲಾ ಮೋಸಗಾರರು, ಮುಂಬೈ ನ ಜನರೆಲ್ಲಾ ಪೊಳ್ಳು ಜನರು' ಎಂದು ಕೊಂಡಿದ್ದರಂತೆ ನಟಿ.

'ಆದರೆ ನಿಜವಾಗಿ ಶಾಕ್ ಆಗಿದ್ದು, ದಕ್ಷಿಣ ಭಾರತದ ನಿರ್ದೇಶಕನೊಬ್ಬ, ಸಿನಿಮಾದಲ್ಲಿ ಪಾತ್ರ ನೀಡಲು ತನ್ನೊಂದಿಗೆ ಮಂಚ ಹಂಚಿಕೊಳ್ಳಲು ಕೇಳಿದಾಗ' ಎಂದು ಹೇಳಿದ್ದಾರೆ ನಟಿ ದೋನಲ್. ಕೂಡಲೇ ನಾನು ಆ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.

More from Filmibeat

English summary
Hindi TV actress Donal Bisht opened up about bad experience in her career. She said a south director asked for sexual favor to give chance in his movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X