ಅಮ್ಮನ ಕನಸು ನನಸಾಗಲು ನಟನೆಗೆ ಕಾಲಿಟ್ಟ ನಟಿ ಇಶಿಕಾ ಶೆಟ್ಟಿಗಾರ್; ಹೇಗಿದೆ ಇವರ ಜರ್ನಿ?

By ಅನಿತಾ ಬನಾರಿ

ಅಮ್ಮನಿಗೆ ಮಗಳು ನಟಿಯಾಗಬೇಕು ಎಂಬ ಬಯಕೆ. ಮಗಳಿಗೆ ಅಮ್ಮನ ಬಯಕೆ ಈಡೇರಿಸುವ ಹಂಬಲ. ಅಂತೆಯೇ ನಟನೆಗೆ ಕಾಲಿಟ್ಟ ಈಕೆ ಇಂದು ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಶ್ರಾವಣಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅವನು ಮತ್ತು ಶ್ರಾವಣಿ'ಯಲ್ಲಿ ನಾಯಕಿ ಶ್ರಾವಣಿಯಾಗಿ ನಟಿಸುತ್ತಿದ್ದಾರೆ ಇಶಿಕಾ ಶೆಟ್ಟಿಗಾರ್. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಇಶಿಕಾ ಅವರು ಅಮ್ಮನ ಕನಸು ನನಸು ಮಾಡುವುದಕ್ಕಾಗಿ ನಟನೆಗೆ ಕಾಲಿಟ್ಟಿದ್ದಾರೆ.

ಹೌದು, ಅಮ್ಮನ ಸ್ನೇಹಿತರ ಮೂಲಕ ನಟನಾ ಲೋಕಕ್ಕೆ ಪರಿಚಿತರಾದ ಇಶಿಕಾ ಬಾಲನಟಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ ಹುಡುಗಿ. 'ಮನದ ಮರೆಯಲ್ಲಿ' ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಇಶಿಕಾ ಶೆಟ್ಟಿಗಾರ್ ಮುಂದೆ 'ಉರ್ವಿ', 'ಡಾ. 56', 'ಗರುಡ' ಸಿನಿಮಾಗಳಲ್ಲಿ ಅಭಿನಯಿಸಿದ್ದರು.

Actress Eeshika Shettigar took to acting to fulfill her mother dream

ಅಂದ ಹಾಗೇ ಇಶಿಕಾ ಅವರಿಗೆ ನಟನೆಯ ಮೇಲೆ ವ್ಯಾಮೋಹ ಮೂಡಿದ ಸಂಗತಿ ನಿಜವಾಗಿಯೂ ಅಚ್ಚರಿಯನ್ನುಂಟು ಮಾಡುತ್ತದೆ. ಹೌದು, ಮೊದಲಿನಿಂದಲೂ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದ ಈಕೆ ಯಾವಾಗ ಕಾಲೇಜಿಗೆ ಕಾಲಿಟ್ಟರೋ, ಆಗ ನಟಿಯಾಗುವ ಬಯಕೆ ಮನದಲ್ಲಿ ಮೂಡಿತ್ತು. ಅದಕ್ಕೆ ಅಮ್ಮನ ಕನಸು ಕೂಡಾ ಪ್ರೇರಣೆಯಾಗಿತ್ತು. ಹಿರಿತೆರೆಯಲ್ಲಿ ಮೋಡಿ ಮಾಡಿದ ಈಕೆ ಕಿರುತೆರೆಗೂ ಕಾಲಿಡುವ ನಿರ್ಧಾರ ಮಾಡಿದರು. ಲುಕ್ ಟೆಸ್ಟ್‌ನಲ್ಲಿ ಪಾಸ್ ಆದ ಆಕೆ ಶ್ರಾವಣಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ನಟನೆ ಎಂಬುದು ಸುಲಭದ ಮಾತಲ್ಲ. ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಮಾಡಿದರೆ ಮಾತ್ರವಷ್ಟೇ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯ ಎನ್ನುವುದು ಇಶಿಕಾ ಅವರ ಅಭಿಪ್ರಾಯ. ಇದೀಗ ಶ್ರಾವಣಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಇಶಿಕಾ ಅವರಿಗೆ ಆರಂಭದಲ್ಲಿ ಆ ಪಾತ್ರ ಸಿಕ್ಕಾಗ ಖುಷಿಗಿಂತಲೂ ಭಯವಾಗಿದ್ದೇ ಹೆಚ್ಚು. ಅದೇ ಕಾರಣದಿಂದ ಎರಡು ಸಾರಿ ಬೇಡ ಎಂದು ಹೇಳಿದ ಆಕೆ ಮೂರನೇ ಬಾರಿ ಆ ಪಾತ್ರದಲ್ಲಿ ನಟಿಸಲು ಒಪ್ಪಿದ್ದು.

Actress Eeshika Shettigar took to acting to fulfill her mother dream

ಶ್ರಾವಣಿಯಾಗಿ ನಟಿಸಿದ್ದ ಅನುಷಾ ರಮೇಶ್ ಅವರು ಇದ್ದಕ್ಕಿದ್ದಂತೆ ಕಾರಣಾಂತರಗಳಿಂದ ಧಾರಾವಾಹಿಯ ಪಾತ್ರದಿಂದ ಹೊರ ಬಂದರು. ಆಗ ಆ ಪಾತ್ರದಲ್ಲಿ ನಟಿಸುವ ಅವಕಾಶ ಇಶಿಕಾ ಅವರಿಗೆ ದೊರಕಿತು. ಈಗಾಗಲೇ ಅನುಷಾ ಅವರು ನಿರ್ವಹಿಸುತ್ತಿದ್ದ ಪಾತ್ರ. ವೀಕ್ಷಕರು ಅನುಷಾ ಅವರನ್ನು ಶ್ರಾವಣಿಯಾಗಿ ಒಪ್ಪಿಕೊಂಡು ಆಗಿತ್ತು. ತಾನು ಶ್ರಾವಣಿಯಾಗಿ ನಟಿಸಿದರೆ ಜನ ಸ್ವೀಕರಿಸುತ್ತಾರಾ ಎಂಬ ಭಯ ಆಕೆಗಿತ್ತು. ಇದೀಗ ವೀಕ್ಷಕರು ಹೊಸ ಶ್ರಾವಣಿಯ ಜೊತೆಗೆ ಇಶಿಕಾ ಅವರನ್ನು ಕೂಡಾ ಮೆಚ್ಚಿಕೊಂಡಿದ್ದಾರೆ.

ಇನ್ನು ಶ್ರಾವಣಿಯ ಪಾತ್ರದ ಬಗ್ಗೆ ಹೇಳಬೇಕೆಂದರೆ ಅದು ನಿಜವಾಗಿಯೂ ತುಂಬಾ ಜವಾಬ್ದಾರಿಯುತವಾಗಿರುವಂತಹ ಪಾತ್ರ. ತನ್ನ ಸುತ್ತಮುತ್ತಲು ಇರುವವರಿಗೆ ಪ್ರೀತಿಯನ್ನು ನೀಡುವ ಶ್ರಾವಣಿ ಗುಣವಂತೆಯೂ ಹೌದು. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ಶ್ರಾವಣಿ ಪಾತ್ರಕ್ಕೂ, ಇಶಿಕಾ ಶೆಟ್ಟಿಗಾರ್ ಅವರಿಗೆ ಸಾಕಷ್ಟು ಸಾಮ್ಯತೆ ಇರುವುದರಿಂದ ಇದೀಗ ಖುಷಿ ಖುಷಿಯಿಂದಲೇ ಶ್ರಾವಣಿ ಪಾತ್ರಕ್ಕೆ ಈಕೆ ಜೀವ ತುಂಬುತ್ತಿದ್ದಾರೆ.

ಆರಂಭದಲ್ಲಿ ಅಮ್ಮನ ಕನಸು ನನಸು ಮಾಡುವ ಸಲುವಾಗಿ ಇಶಿಕಾ ಅವರು ನಟನೆಗೆ ಕಾಲಿಟ್ಟಿದ್ದರೂ ಇದೀಗ ನಟನೆಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಹೊಸ ಹೊಸ ಪಾತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂದು ಬಯಸುವ ಈಕೆ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು ಮತ್ತ್ಯಾವಾಗ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸದ್ಯದ ಪ್ರಶ್ನೆ.

More from Filmibeat

English summary
Actress Eeshika Shettigar took to acting to fulfill her mother dream
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X