Gautami Jadhav: 'ಸತ್ಯ' ಧಾರಾವಾಹಿ ನಟಿ ಗೌತಮಿ ಜಾಧವ್ ಕುಟುಂಬಕ್ಕೆ 'ಹ್ಯಾಪಿ' ಸೇರ್ಪಡೆ!

By ಅನಿತಾ ಬನಾರಿ

'ಸತ್ಯ' ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾಧವ್ ಅವರು ತಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಒಬ್ಬರನ್ನು ಬರಮಾಡಿಕೊಂಡಿದ್ದಾರೆ. ವರ್ಷಗಳ ಹಿಂದೆಯಿಂದ ಕಿರುತೆರೆಯಲ್ಲಿ 'ಸತ್ಯ' ಧಾರಾವಾಹಿ ಈಗಾಗಲೇ ವರ್ಷಗಳಿಂದ ಬರುತ್ತಿದ್ದು, ಕಿರುತರೆ ಪ್ರಿಯರ ಮೆಚ್ಚಿನ ನೆಚ್ಚಿನ ಧಾರಾವಾಹಿಯಾಗಿದೆ.

ಈ ಧಾರಾವಾಹಿಯಲ್ಲಿ ನಾಯಕಿ 'ಸತ್ಯ' ಪಾತ್ರಕ್ಕೆ ಜೀವ ತುಂಬುತ್ತಿರುವ ಗೌತಮಿ ಜಾಧವ್ ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಮೂಲಕ ಹೊಸ ವಿಚಾರವೊಂದನ್ನು ಘೋಷಿಸಿದ್ದು, ಅವರ ಕುಟುಂಬಕ್ಕೆ ಈಗ ಒಂದು ಹೊಸ ಜೀವ ಆಗಮಿಸಿದೆ.

Actress Gautami Jadhav Brings a Golden Retriever Dog as a New Guest to the Home

ದಂಪತಿ ಗೌತಮಿ ಜಾಧವ್ ಹಾಗೂ ಅಭಿಷೇಕ್ ಕಾಸರಗೋಡು ಅವರು ಮೊದಲಿನಿಂದಲೂ ಪ್ರಾಣಿ ಪ್ರೇಮವನ್ನು ಸಾರಿಕೊಂಡು ಬಂದವರು. ಹೀಗಿರುವಾಗ ಅವರ ಮನೆಯಲ್ಲಿ ಕ್ವೀನ್ ಎಂಬ ಒಂದು ಗೋಲ್ಡನ್ ರಿಟ್ರೀವರ್ ನಾಯಿಯನ್ನು ಸಾಕಿದ್ದಾರೆ. ಕುಟುಂಬದ ಸದಸ್ಯರಂತೆ ನಾಯಿಯನ್ನು ನೋಡಿಕೊಳ್ಳುವ ಇವರು ಇದೀಗ ಹೊಸ ಪುಟಾಣಿ ಗೋಲ್ಡನ್ ರಿಟ್ರಿವರ್ ಮರಿ ಒಂದನ್ನು ಕುಟುಂಬಕ್ಕೆ ಸೇರಿಸಿಕೊಂಡಿದ್ದಾರೆ.

ಈಗ ನಾಲ್ವರಿದ್ದೇವೆ ಎಂದ ಗೌತಮಿ ಜಾಧವ್

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿದ ಅವರು "ಈಗ ನಮ್ಮ ಕುಟುಂಬದಲ್ಲಿ ನಾಲ್ವರಿದ್ದೀವೆ" ಎಂದು ಖುಷಿಯಿಂದ ಘೋಷಿಸಿದ್ದಾರೆ. ನಾಯಿ ಹಾಗೂ ನಾಯಿ ಮರಿಯೊಂದಿಗೆ ಮುದ್ದು ಮುದ್ದಾದ ಫೋಟೋಗಳನ್ನು ಶೇರ್ ಮಾಡಿರುವ ಅವರು ಹೊಸ ಮರಿಗೆ 'ಹ್ಯಾಪಿ' ಎಂದು ಹೆಸರಿಟ್ಟಿದ್ದಾರೆ.

ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಹಾಗೂ ನಟಿ ಗೌತಮಿ ಜಾಧವ್ ಈ ಸಂಭ್ರಮವನ್ನು ತಮ್ಮ ನೆಟ್ಟಿಗರು ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು 'ಹ್ಯಾಪಿ' ಹಾಗೂ 'ಕ್ವೀನ್'ನೊಂದಿಗಿನ ಫೋಟೋಗಳು ಈಗ ಬಹಳಷ್ಟು ವೈರಲಾಗಿದೆ.

Actress Gautami Jadhav Brings a Golden Retriever Dog as a New Guest to the Home

'ಹ್ಯಾಪಿ'ಯಾಗಿದ್ದಾರೆ ಗೌತಮಿ - ಅಭಿಷೇಕ್

ಈ ಮೂಲಕ ತಮ್ಮ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸಿರುವ ಈ ದಂಪತಿಗೆ ಸೋಶಿಯಲ್ ಮೀಡಿಯಾ ಮೂಲಕ ಬಹಳಷ್ಟು ಶುಭ ಹಾರೈಕೆಗಳ ಸುರಿಮಳೆಯೇ ಸುರಿದಿದೆ.
ಅವರ ಮನೆಯ ನಾಯಿ 'ಕ್ವೀನ್' ಈ ಮೊದಲು ಏಳು ಮರಿಗಳನ್ನು ಇಟ್ಟಿತ್ತಂತೆ. ಈಗಿನ ಹೊಸ ನಾಯಿ ಮರಿ 'ಹ್ಯಾಪಿ' ಆ ಮರಿಗಳಲ್ಲಿ ಒಂದಾಗಿದ್ದು, ಅವರ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿದೆ.

ಅಂದಹಾಗೆ, 'ಸತ್ಯ' ಧಾರಾವಾಹಿ ಮೂಲಕ ಬಹಳಷ್ಟು ಪಾಪ್ಯುಲಾರಿಟಿ ಪಡೆದುಕೊಂಡಿರುವ ನಟಿ ಗೌತಮಿ ಜಾಧವ್ ಕನ್ನಡ ಕಿರುತೆರೆಯ ಟಾಮ್ ಬಾಯ್ ಎಂದೇ ಫೇಮಸ್. ಕನ್ನಡದಲ್ಲಿ 'ಲೇಡಿ ರಾಮಾಚಾರಿ' ಎಂದೆನಿಸಿಕೊಂಡಿರುವ ಇವರು ತಮ್ಮ ಖಡಕ್ ಅಭಿನಯದ ಮೂಲಕ ವಿಶೇಷ ಫ್ಯಾನ್ ಬೇಸ್ ಅನ್ನು ಹೊಂದಿದ್ದಾರೆ.

More from Filmibeat

English summary
Actress Gautami Jadhav brings a golden retriever dog as a new guest to the home, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X