Gouthami Jadav ; ಟಾಮ್ ಬಾಯ್ ಲುಕ್‌ಗೆ ಗುಡ್ ಬೈ ಹೇಳಿ ರಾಜಕುಮಾರಿಯಂತೆ ಕಂಗೊಳಿಸಿದ ಗೌತಮಿ ಜಾಧವ್..!

By ಪ್ರಿಯಾ ದೊರೆ

ಕಳೆದ ವರ್ಷದವರೆಗೂ ರಗಡ್ ಲುಕ್ ನಲ್ಲಿ ಕಿರುತೆರೆ ಮೇಲೆ ಕಮಾಲ್ ಮಾಡಿದ್ ರಾಣಿ ಈಗ ಅಪ್ಸರೆಯಂತೆ ಸೋಶಿಯಲ್ ಮೀಡಿಯಾದಲ್ಲಿ ಕಂಗೊಳಿಸುತ್ತಿದ್ದಾರೆ. ಹೌದು,ನಟಿ ಗೌತಮಿ ಜಾಧವ್ ಹಲವು ಸಮಯದಿಂದ ಕಿರುತೆರೆಯಲ್ಲಿ ಇದ್ದರೂ ಕೂಡ,ಹೆಸರು ತಂದುಕೊಟ್ಟಿದ್ದು,ರಗಡ್ ಲುಕ್ ನಲ್ಲಿ ಕಾಣಿಸಿಕೊಂಡ ಸತ್ಯ ಪಾತ್ರದ ಮೂಲಕ.ಸತ್ಯ ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮ ನಿಜ ರೂಪವನ್ನು ಅನಾವರಣಗೊಳಿಸಿದ್ದರು. ಈಗಂತೂ ಅಪ್ಸರೆಯೇ ಆಗಿದ್ದಾರೆ.

ರಗಡ್ ಲುಕ್‌ನ ಅಪ್ಸರೆ ಈ ನಟಿ

ಸತ್ಯ ಧಾರಾವಾಹಿಯ ಸತ್ಯ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಪಕ್ಕಾ ಟಾಮ್ ಬಾಯ್ ವೇಷದಲ್ಲಿ ಮನೆ ಮಾತಾಗಿದ್ದ ನಟಿ ಗೌತಮಿ ಜಾಧವ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅಂದವನ್ನು ರಿವೀಲ್ ಮಾಡಿದ್ದರು. ತೆರೆ ಮೇಲೆ ಗೌತಮಿ ಅವರನ್ನು ನೋಡೋದಕ್ಕೂ, ತೆರೆ ಹಿಂದೆ ನೋಡೋದಕ್ಕೂ ತುಂಬಾನೇ ವ್ಯತ್ಯಾಸವಿದ್ದರೂ ಎರಡೂ ಲುಕ್ ಅನ್ನು ಮೆಚ್ಚಿಕೊಂಡಿದ್ದರು. ಸತ್ಯ ಪಾತ್ರದ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದ ನಟಿ ಗೌತಮಿ ಜಾಧವ್ ನಾಗಪಂಚಮಿ ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದರ್ಪಣೆ ಮಾಡಿದವರು. ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಗೌತಮಿ ಅವರು ಸತ್ಯ ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು.

actress-gouthami-jadav-stunning-new-look

ಬಣ್ಣದ ಲೋಕದಲ್ಲಿ ಜಂಟಿಯಾದ ನಟಿ

ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪ್ರೀತಿಸಿ ಜಂಟಿಯಾದ ನಟಿ ಗೌತಮಿ ಜಾಧವ್ ಅವರ ಪತಿ ಸಿನಿಮಾಟೋಗ್ರಫರ್ ಅಭಿಷೇಕ್ ಕಾಸರಗೂಡು. ಗೌತಮಿ ಹಾಗೂ ಅಭಿಷೇಕ್ ಇಬ್ಬರು ಕಿನಾರೆ ಸಿನಿಮಾದಲ್ಲಿ ಭೇಟಿಯಾಗಿ ಅಲ್ಲಿಂ ಅವರ ಪರಿಚಯ ಲವ್ ಆಗಿ ಪರಿವರ್ತನೆಯನ್ನು ಪಡೆದುಕೊಳ್ತು. ಇಬ್ಬರು ಲವ್ ಪ್ರಪೋಸ್ ಮಾಡುವ ಮುನ್ನವೇ ಮನೆಯಲ್ಲಿ ವಿಷಯ ತಿಳಿಸಿ ಒಪ್ಪಿ ಮದುವೆಯಾದರು. ಸದ್ಯ ಈ ಜೋಡಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಇವರಿಬ್ಬರೂ ಮೊದಲಿನಿಂದಲೂ ಪ್ರಾಣಿ ಪ್ರೇಮವನ್ನು ಸಾರಿಕೊಂಡು ಬಂದವರು. ಮನೆಯಲ್ಲಿ ಶ್ವಾನಗಳನ್ನು ಸಾಕಿರುವ ಗೋಲ್ಡನ್ ರಿಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಕುಟುಂಬದ ಸದಸ್ಯರಂತೆ ಇವುಗಳನ್ನು ನೋಡಿಕೊಳ್ಳುವ ಇವರು ಕ್ವೀನ್, ಹ್ಯಾಪಿ ಮತ್ತು ಕಾಫಿ ಎಂದು ಹೆಸರಿಟ್ಟಿದ್ದಾರೆ.


ನಟನೆ ಜೊತೆಗೆ ಉದ್ಯಮಿಯೂ ಹೌದು

ಇನ್ನು ಅಭಿಷೇಕ್ ಅವರು ಮಾಯಾ ಬಜಾರ್, ಅನಂತು ವರ್ಸಸ್ ನುಸ್ರತ್, ಆಪರೇಷನ್ ಅಲಮೇಲಮ್ಮ ಸೇರಿದಂತೆ ಹಲವು ಸಿನಿಮಾಗಳಿಗೆ ಸಿನಿಮಾಟೋಗ್ರಫರ್ ಮಾಡಿದ್ದಾರೆ. ನಟಿ ಗೌತಮಿ ಜಾಧವ್ ಅವರು ನಟನೆಯ ಜೊತೆಗೆ ತಮ್ಮದೇ ಬಿಸಿನೆಸ್ ಅನ್ನು ಕೂಡ ಹೊಂದಿದ್ದಾರೆ. ವನ ತೈಲಂ ಎಂಬ ಬ್ರ್ಯಾಂಡ್ ಹೆಸರಿನ ಎಣ್ಣೆಯ ಬಿಸಿನೆಸ್ ಅನ್ನು ನಟಿ ಗೌತಮಿ ಜಾಧವ್ ಅವರು ಹೊಂದಿದ್ದಾರೆ. ಈ ತೈಲವನ್ನು ಬಳಸಿದರೆ, ತಲೆ ಕೂಲು ಉದುರುವಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗಿದೆ.


ಸೌಂದರ್ಯಕ್ಕೆ ಸೆಡ್ಡು ಹೊಡೆಯುವ ಅಂದ

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಶೂಟಿಂಗ್ ನಿಂದ ರೆಸ್ಟ್ ಮಾಡುತ್ತಿರುವ ನಟಿ ಗೌತಮಿ ಜಾಧವ್ ಅವರು ಕನ್ನಡ ಮಾತ್ರವಲ್ಲದೇ, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. . ಆಪರೇಷನ್ ಅಲಮೇಲಮ್ಮ, ಕಿನಾರೆ, ಲೂಟಿ, ಆದ್ಯ ಮುಂತಾದ ಸಿನಿಮಾಗಳಲ್ಲಿ ಗೌತಮಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸಂತೋಸತ್ತಿಲ್ ಕಲವರಂ ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ನಟಿ ಗೌತಮಿ ಜಾಧವ್ ಅವರು ಇದೀಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೆಂಪು ಸೀರೆಯಲ್ಲಿ ಮಿಂಚಿರುವ ಗೌತಮಿ ಅವರು ನೋಡಲು ಥೇಟ್ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ತನ್ನ ಹೊಸ ಫೋಟೋ ಮತ್ತು ವೀಡಿಯೋಗಳನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X