For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಗೆ ಬಿಂದಾಸ್ ಬೆಡಗಿ ಹಂಸಿಕಾ

  By Rajendra
  |

  ಈ ಬಾರಿಯ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಆದರೆ ಬಿಗ್ ಬಾಸ್ ಗೆ ಎಂಟ್ರಿಕೊಡುತ್ತಿರುವ ಒಂದಷ್ಟು ಮಂದಿ ಸ್ಪರ್ಧಿಗಳ ಹೆಸರುಗಳು ಲೀಕ್ ಆಗಿವೆ. ನೀಲಿ ಚಿತ್ರಗಳ ತಾರೆ ಪ್ರಿಯಾ ರೈ ಅವರು ಈ ಬಾರಿ ಸ್ಪರ್ಧೆಯಲ್ಲಿರುತ್ತಾರೆ ಎಂಬ ಸುದ್ದಿಯೂ ಇದೆ.

  ಇದರ ಜೊತೆಗೆ ಇದೀಗ ಹೊಸ ಸೇರ್ಪಡೆ ಬಿಂದಾಸ್ ಬೆಡಗಿ ಹಂಸಿಕಾ ಮೋತ್ವಾನಿ. ಪವರ್ ಸ್ಟಾರ್ ಪುನೀತ್ ಕುಮಾರ್ ಜೊತೆ ಬಿಂದಾಸ್ ಚಿತ್ರದಲ್ಲಿ ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ ಎಂದು ಹೆಜ್ಜೆ ಹಾಕಿದ ತಾರೆ ಹಂಸಿಕಾ. ಈಗ ಬಿಗ್ ಬಾಸ್ ಮನೆಗೆ ಅಡಿಯಿಡುತ್ತಿದ್ದಾರೆ ಎಂಬ ಸುದ್ದಿ ಇದೆ. [ಬಿಗ್ ಬಾಸ್ ನಲ್ಲಿ ಪೂನಂ, ಶ್ರೀಶಾಂತ್?]

  ಸದ್ಯಕ್ಕೆ ತಮಿಳು, ತೆಲುಗು ಚಿತ್ರಮಂದಿರದಲ್ಲಿ ಸಖತ್ ಬಿಜಿಯಾಗಿರುವ ಹಂಸಿಕಾ ಬಾಲಿವುಡ್ ಅಂಗಳಕ್ಕೂ ಅಡಿಯಿಡಲು ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ಏತನ್ಮಧ್ಯೆಯೇ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಪ್ರವೇಶಪಡೆಯಲು ಸಿದ್ಧವಾಗಿದ್ದಾರೆ.

  ಕಲರ್ಸ್ ವಾಹಿನಿಯ ಬಿಗ್ ಬಾಸ್ ಸೀಸನ್ 7 ಸೆಪ್ಟೆಂಬರ್ 15, 2013ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಕಿರುತೆರೆ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ, ನಿರೀಕ್ಷೆ ಹಾಗೂ ಗಾಸಿಪ್ ಗಳು ಹರಿದಾಡುತ್ತಿವೆ. ಕಾರ್ಯಕ್ರಮವನ್ನು 47ರ ಹರೆಯದ ನಟ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ. (ಏಜೆನ್ಸೀಸ್)

  English summary
  Bigg Boss 7 latest - Hansika Motwani is the latest name that has been making rounds who apparently has signed to contest in the upcoming Colors reality show Bigg Boss Saath 7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X