ಸದಾಶಿವನಗರದಲ್ಲಿ ನಮ್ಮ ಮನೆಯೇ ಇಲ್ಲ: ಎಲ್ಲಾ ಸುಳ್ಳು

ಇನ್ನು ಐಷಾರಾಮಿ ಎನ್ನುವುದಕ್ಕೆ ಏನಿದೆ? ನಾನು ಓಡಾಡುವ ಕಾರು ಸ್ವಿಫ್ಟ್ ಡಿಸೈರ್. ಅದಕ್ಕೆ ಎಷ್ಟು ಬೆಲೆ ಎಂಬುದು ಎಲ್ಲರಿಗೂ ಗೊತ್ತು. ಅದ್ಯಾಕೆ ರಾಜಕೀಯ ವ್ಯಕ್ತಿಗಳ ಮಕ್ಕಳ ಜೊತೆ ನಮ್ಮಂತ ನಟಿಯರ ಹೆಸರು ಸೇರಿಸುತ್ತಾರೋ ತಿಳಿಯದಾಗಿದೆ. ಅಷ್ಟಕ್ಕೂ ನಾನು ಯಡಿಯೂರಪ್ಪ ಅವರ ಮಕ್ಕಳಲ್ಲಿ ಒಬ್ಬರನ್ನೂ ಇನ್ನೂ ಭೇಟಿಯೇ ಆಗಿಲ್ಲದಿರುವಾಗ..!" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳಿಂದ, ನನ್ನ ಕನ್ನಡ ಸಿನಿಮಾ ಬಿಡುಗಡೆ ವೇಳೆ ಈ ರೀತಿ ಈ ಸುದ್ದಿ ಹಬ್ಬುವುದು ಮಾಮೂಲಿಯಾಗಿದೆ. ಚಿತ್ರಕ್ಕೆ ಪ್ರಚಾರವನ್ನು ಬೇರೆ ಒಳ್ಳೆಯ ರೀತಿಯಲ್ಲಿ ಮಾಡಬಹುದು. ಅಷ್ಟಕ್ಕೂ ಮಾಡಿದ ಚಿತ್ರ ಚೆನ್ನಾಗಿದ್ದರೆ ಮಾತ್ರ ಜನ ಬಂದು ನೋಡುತ್ತಾರೆ. ಮನಸುಗಳ ಮಾತು ಮಧುರ, ಕಳ್ಳರ ಸಂತೆ ಬಿಡುಗಡೆ ವೇಳೆಯಲ್ಲೂ ಹೀಗೇ ಆಗಿತ್ತು. ನಾಡಿದ್ದು, ಮೇ 18ಕ್ಕೆ ಕಿಲಾಡಿ ಕಿಟ್ಟಿ ಬಿಡುಗಡೆಯಾಗುತ್ತಿದೆ.
ಅದಕ್ಕೆ ಯಾರೋ ಬೇಕಂತಲೇ ನನ್ನ ಹೆಸರು ಕೆಡಿಸಲು, ನನ್ನ ವೃತ್ತಿಜೀವನ ಹಾಳುಮಾಡಲು ಈ ರೀತಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಕನ್ನಡದ ಹುಡುಗಿಯಾಗಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸುತ್ತಿರುವ ನಾನು ಕೊನೇಪಕ್ಷ ಇಲ್ಲಿ ಬೆಳೆಯಬಾರದೆಂದು ಈ ರೀತಿ ಸುದ್ದಿ ಹಬ್ಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ" ಎಂದು ಸುವರ್ಣ ವಾಹಿನಿಯ ಸಂದರ್ಶನದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ನಟಿ ಹರಿಪ್ರಿಯಾ. (ಒನ್ ಇಂಡಿಯಾ ಕನ್ನಡ)


Click it and Unblock the Notifications