For Quick Alerts
  ALLOW NOTIFICATIONS  
  For Daily Alerts

  ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದಾರೆ ನಟಿ ಹರಿಪ್ರಿಯಾ

  By ಫಿಲ್ಮಿಬೀಟ್ ಡೆಸ್ಕ್
  |

  ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಹರಿಪ್ರಿಯಾ ಅಚಾನಕ್ಕಾಗಿ ಕಿರುತೆರೆ ಕಡೆಗೆ ಹೆಜ್ಜೆ ಇಟ್ಟಿದ್ದಾರೆ.

  ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟ, ನಟಿಯರೇ ಕಿರುತೆರೆಗೆ ಕಾಲಿಟ್ಟು ಒಂದು ಕೈ ನೋಡಿದ್ದಾರೆ. ಈಗ ನಟಿ ಹರಿಪ್ರಿಯಾ ಸಹ ಇದೇ ಸಾಹಸಕ್ಕೆ ಕೈ ಹಾಕಿದ್ದಾರೆ.

  ಹರಿಪ್ರಿಯಾ ಕಿರುತೆರೆಗೆ ಬರುತ್ತಿದ್ದಾರೆಂದ ಕೂಡಲೇ ಆಕೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ ಬದಲಿಗೆ ಹರಿಪ್ರಿಯಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಡ್ಯಾನ್ಸ್ ಶೋನಲ್ಲಿ ಹರಿಪ್ರಿಯಾ ಜೊತೆಗೆ ಇನ್ನೂ ಇಬ್ಬರು ಪ್ರಮುಖ ಜಡ್ಜ್‌ಗಳು ಇರಲಿದ್ದಾರೆ.

  'ಡ್ಯಾನ್ಸ್ ಡ್ಯಾನ್ಸ್' ಹೆಸರಿನ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಜಡ್ಜ್ ಆಗಿ ಭಾಗವಹಿಸಲಿದ್ದಾರೆ. ಅದ್ಧೂರಿಯಾಗಿ ಆಯೋಜನೆ ಮಾಡಲಾಗುತ್ತಿರುವ ಈ ಡ್ಯಾನ್ಸ್ ಶೋ ಒಳಾಂಗಣ ಹಾಗೂ ಹೊರಾಂಗಣ ಎರಡೂ ಕಡೆ ಚಿತ್ರೀಕರಣವಾಗಲಿರುವುದು ವೀಶೇಷ.

  ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಜೊತೆಗೆ ನಟ ಪ್ರಜ್ವಲ್ ದೇವರಾಜ್ ಸಹ ಈ ರಿಯಾಲಿಟಿ ಶೋನ ಜಡ್ಜ್ ಆಗಿರಲಿದ್ದಾರೆ. ಜೊತೆಗೆ ನೃತ್ಯ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕ ಎರಡೂ ವಿಭಾಗದಲ್ಲೂ ಯಶಸ್ವಿಯಾಗಿರುವ ಹರ್ಷಾ ಸಹ ಈ ಡ್ಯಾನ್ಸ್ ಶೋನ ಜಡ್ಜ್ ಆಗಿರಲಿದ್ದಾರೆ. ಈ ರಿಯಾಲಿಟಿ ಶೋ ಅನ್ನು ಶೈನ್ ಶೆಟ್ಟಿ ನಿರೂಪಣೆ ಮಾಡಲಿದ್ದಾರೆ.

  ನಟಿ ಹರಿಪ್ರಿಯಾ ಒಳ್ಳೆಯ ನಟಿಯ ಜೊತೆಗೆ ಒಳ್ಳೆಯ ನೃತ್ಯಗಾರ್ತಿ ಸಹ ಹಲವು ಸಿನಿಮಾಗಳಲ್ಲಿ ಬಹಳ ಚೆನ್ನಾಗಿ ನರ್ತಿಸಿ ತಮ್ಮ ನೃತ್ಯ ಪ್ರತಿಭೆ ಸಾದರಪಡಿಸಿದ್ದಾರೆ ನಟಿ ಹರಿಪ್ರಿಯಾ, ಹಾಗಾಗಿ ರಿಯಾಲಿಟಿ ಶೋ ಆಯೋಜಕರು ಹರಿಪ್ರಿಯಾ ಅನ್ನು ಜಡ್ಜ್ ಆಗಿ ಆಯ್ಕೆ ಮಾಡಿದ್ದಾರೆ.

  ರಿಯಾಲಿಟಿ ಶೋ ಬಗ್ಗೆ ಮಾತನಾಡಿರುವ ಹರಿಪ್ರಿಯಾ, ''ಈ ಹಿಂದೆಯೂ ಕೆಲವು ರಿಯಾಲಿಟಿ ಶೋ ಆಫರ್‌ಗಳು ಬಂದಿದ್ದವು ಆದರೆ ಒಪ್ಪಿಕೊಂಡಿರಲಿಲ್ಲ. ಆದರೆ 'ಡ್ಯಾನ್ಸ್ ಡ್ಯಾನ್ಸ್' ಶೋನ ಪರಿಕಲ್ಪನೆ ಭಿನ್ನವಾಗಿದೆ. ಈ ಶೋನಲ್ಲಿ ನಟ-ನಟಿಯರೇ ಸ್ಪರ್ಧಿಗಳು ಸಹ ಆಗಿರುತ್ತಾರೆ.

  ಈಗಾಗಲೇ ಕನ್ನಡದ ಹಲವು ನಟ ನಟಿಯರು ರಿಯಾಲಿಟಿ ಶೋನಲ್ಲಿ ಜಡ್ಜ್‌ಗಳಾಗಿದ್ದಾರೆ. ನಟಿ ರಚಿತಾ ರಾಮ್, ರಕ್ಷಿತಾ, ವಿಜಯ್ ರಾಘವೇಂದ್ರ, ಯೋಗರಾಜ್ ಭಟ್, ಜಗ್ಗೇಶ್, ಸಾಧು ಕೋಕಿಲ ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ರಿಯಾಲಿಟಿ ಶೋ ಜಡ್ಜ್‌ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.

  English summary
  Actress Haripriya judging a dance reality show along with Prajwal Devaraj and Harsha. Reality Show name is 'Dance Dance'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X