'ಸ್ನೇಹದ ಕಡಲಲ್ಲಿ' ಹೇಮಾ ವಿ ಬೆಳ್ಳುರು : 2 ದಶಕದಿಂದ ಕಿರುತೆರೆಯಲ್ಲಿ ಮೋಡಿ
'ಸ್ನೇಹದ ಕಡಲಲ್ಲಿ' ಧಾರಾವಾಹಿಯ ಎರಡನೇ ಪ್ರೊಮೋ ರಿಲೀಸ್ ಆಗಿದೆ. ಈ ಧಾರಾವಾಹಿಯಲ್ಲಿ ಸ್ಟಾರ್ ನಟ ಸುಮನ್ ತಲ್ವಾರ್ ಅವರು ನಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ನಟ ಸುಮನ್ ತಲ್ವಾರ್ ಅವರು ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ತಂದೆಯ ಪಾತ್ರದಲ್ಲಿ ನಟ ಸುಮನ್ ಅವರು ಕಾಣಿಸಿಕೊಂಡಿದ್ದು, ಆದರೆ ಧಾರಾವಾಹಿಯ ಶುರುವಿನಲ್ಲೇ ಸುಮನ್ ಅವರ ಪಾತ್ರಕ್ಕೆ ಅಂತ್ಯವನ್ನೂ ಕೂಡ ಹಾಡಲಾಗಿದೆ.
ಪ್ರೋಮೋ ಶುರುವಿನಲ್ಲೇ ನಾಯಕ ಅಪ್ಪನ ಫೋಟೋ ಮುಂದೆ ಕುಳಿತು ಶ್ರಾದ್ಧಾ ಕಾರ್ಯವನ್ನು ಮಾಡುತ್ತಿರುತ್ತಾನೆ. ಅವರ ತಂದೆ ನಾನು ಎರಡನೇ ಮದುವೆ ಮಾಡಿಕೊಂಡು ತಪ್ಪು ಮಾಡಿದೆ. ನನ್ನ ಜವಾಬ್ದಾರಿಯನ್ನೆಲ್ಲಾ ನಿನ್ನ ಹೆಗಲ ಮೇಲೇ ಇದೆ ಎಂದು ಕಣ್ಣೀರು ಹಾಕುತ್ತಾರೆ. ನಾಯಕ ನಟ ಅಪ್ಪ ಇದ್ದಾಗಲೂ ನನಗೆ ಕಷ್ಟ ಈಗಲೂ ಅವರಿಂದಲೇ ಸಮಸ್ಯೆ ಎಂಬಂತೆ ಮಾತನಾಡಿದ್ದಾನೆ.

ಹೇಮಾ ಬೆಳ್ಳೂರು ನಟನೆ
ಈ ಧಾರಾವಾಹಿಯಲ್ಲಿ ನಾಯಕನ ಮಲತಾಯಿಯ ಮಕ್ಕಳಲ್ಲಿ ಒಬ್ಬಳು ನಾಯಕನಿಗೆ ಬೈಯುತ್ತಾರೆ. ಇದರಲ್ಲಿ ಮಲತಾಯಿಯ ಪಾತ್ರದಲ್ಲಿ ನಟಿ ಹೇಮಾ ವಿ ಬೆಳ್ಳೂರು ಅವರು ಕಾಣಿಸಿಕೊಂಡಿದ್ದಾರೆ. ನಟಿ ಹೇಮಾ ವಿ ಬೆಳ್ಳೂರು ಅವರು 'ಮಾಯಾಮೃಗ', 'ಮನ್ವಂತರ'ದಂತಹ ಸೂಪರ್ ಹಿಟ್ ಧಾರಾವಾಹಿಯಲ್ಲಿ ಕಾಣಿಸಿಕೊಂಡವರು. ಕಳೆದ 25 ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದಾರೆ. ಇನ್ನೂ ಕಳೆದ ನಾಲ್ಕೈದು ವರ್ಷಗಳಲ್ಲಿ 'ಗಂಗೆ-ಗೌರಿ', 'ನನ್ನರಸಿ ರಾಧೆ', 'ತ್ರಿಪುರ ಸುಂದರಿ', 'ಮಿಥುನ ರಾಶಿ', 'ಸೀತಾ ವಲ್ಲಭ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ನಟಿ ಹೇಮಾ ವಿ ಬೆಳ್ಳೂರು ಅವರು ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಾಗ ಹೇಗಿದ್ದರೋ ಈಗಲೂ ಅದೇ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಮೊದಲಿಗಿಂತ ಸ್ವಲ್ಪ ದಪ್ಪಗಾಗಿದ್ದಾರೆ ಎನ್ನುವುದು ಬಿಟ್ಟರೆ, ಮುಖದ ಅಂದದಲ್ಲಿ ಯಾವುದೇ ಬದಲಾವಣೆ ಇಲ್ಲ.
ಸ್ವಂತ ಉದ್ಯಮ ಹೊಂದಿರುವ ನಟಿ
ನಟಿ ಹೇಮಾ ಅವರದ್ದೇ ಸ್ವಂತ ಹೋಮ್ ಬೇಕರ್ ಇದೆ. ಬನಶಂಕರಿಯಲ್ಲಿ ತಮ್ಮದೇ ಸ್ವಂತ ಔಟ್ ಲೆಟ್ ಅನ್ನು ಹೊಂದಿದ್ದಾರೆ. ವಿಕೆಟ್ಸ್ ಎಂದು ಇದಕ್ಕೆ ಹೆಸರಿಟ್ಟಿದ್ದು, ಐಸ್ ಕ್ರೀಮ್ ಮತ್ತು ತಾವೇ ತಯಾರಿಸಿದ ಕೇಕ್ ಗಳನ್ನು ಮಾರಾಟ ಮಾಡುತ್ತಾರೆ. ಹೇಮಾಸ್ ಮಿನಿ ಬೇಕರಿಯನ್ನು ನಡೆಸುತ್ತಿರುವ ನಟಿ ಹೇಮಾ ಅವರು ಎಗ್ ಲೆಸ್ ಕೇಕ್, ಕಪ್ ಕೇಕ್, ಚಾಕ್ಲೆಟ್ ಹಾಗೂ ಬ್ರೌನಿಯನ್ನೂ ತಾವೇ ತಯಾರಿಸುತ್ತಾರೆ. ಇನ್ನು ಚಿತ್ರ ನಿರ್ಮಾಪಕ ನರಹರಿ ರಾವ್ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ನರಹರಿ ಅವರು ತಮ್ಮದೇ ಆದ ವೃದ್ಧಿ ಕ್ರಿಯೇಶನ್ಸ್ ಮೂಲಕ ಅಶೋಕ ಬ್ಲೇಡ್ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ವೃದ್ಧೀ ಕ್ರಿಯೇಷನ್ಸ್ ಮೂಲಕವೇ ತ್ರಿಪುರ ಸುಂದರಿ, 'ನನ್ನರಸಿ ರಾಧೆ' ಹಾಗೂ 'ಮಿಥುನ ರಾಶಿ' ಸೀರಿಯಲ್‌ಗಳನ್ನು ನಿರ್ಮಾಣ ಮಾಡಿದ್ದರು. ಇನ್ನು ನರಹರಿ ರಾವ್ ಅವರು ಕೂಡ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಹೇಮಾ ಸ್ನೇಹದ ಕಡಲಲ್ಲಿ
ನಟಿ ಹೇಮಾ ಅವರು ಆಗಾಗ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಹತ್ತು ವರ್ಷಗಳ ಬಳಿಕ ನಟಿ ಹೇಮಾ ಹಾಗೂ ನಟಿ ಕಾವ್ಯಾ ಮಹಾದೇವ್ ಮತ್ತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ನಾಯಕನ ಪಾತ್ರದಲ್ಲಿ ನಟ ಚಂದು ಗೌಡ ಕಾಣಿಸಿಕೊಂಡಿದ್ದು, ಉಳಿದಂತೆ ಅನನ್ಯಾ ಕಾಸರವಳ್ಳಿ, ನಟ ಸಮೀಪ್ ಆಚಾರ್ಯ, ಕಾಮಿಡಿ ಕಿಲಾಡಿ ನಯನಾ, ಅಭಿಜ್ಞಾ ಭಟ್ ನಟಿಸಿದ್ದಾರೆ. ಕಥೆ ಡಿಫರೆಂಟ್ ಆಗಿ ಇದ್ದು, ನೋಡಲು ವೀಕ್ಷಕರು ಕಾತುರರಾಗಿದ್ದಾರೆ.


Click it and Unblock the Notifications











