ತಾರೆ ಹೇಮಶ್ರೀ ಫೇಸ್ ಬುಕ್ ನಲ್ಲಿ ಇನ್ನೂ ಅವಿವಾಹಿತೆ

By Rajendra

ಅನುಮಾನಾಸ್ಪದವಾಗಿ ಮೃತಪಟ್ಟ ಕಿರುತೆರೆ ಹಾಗೂ ಬೆಳ್ಳಿತೆರೆ ತಾರೆ ಹೇಮಶ್ರೀ ಅವರ ಫೇಸ್ ಬುಕ್ ಅಕೌಂಟ್ ಗೆ ಒಮ್ಮೆ ಭೇಟಿ ನೀಡಿದರೆ ನಿಮಗೆ ಅಚ್ಚರಿಯಾಗುತ್ತದೆ. ಹೇಮಶ್ರೀ ಫೇಸ್ ಬುಕ್ ಅಕೌಂಟನ್ನು ಹೊಂದಿದ್ದರಾದರೂ ಅದರಲ್ಲಿ ಅಷ್ಟಾಗಿ ಸಕ್ರಿಯವಾಗಿರಲಿಲ್ಲ ಎಂಬ ಅಂಶವೂ ಮನದಟ್ಟಾಗುತ್ತದೆ.

ಹೇಮಶ್ರೀಗೆ ಫೇಸ್ ಬುಕ್ ನಲ್ಲೂ ಅಸಂಖ್ಯಾತ ಫಾಲೋವರ್ಸ್ ಇದ್ದಾರೆ. ಆದರೂ ಆಕೆಯ ಅಕೌಂಟ್ ನಲ್ಲಿ ಯಾವುದೇ ಬಿಸಿಬಿಸಿ ಚರ್ಚೆ, ವಾದ ವಿವಾದಗಳು ನಡೆದೇ ಇಲ್ಲ. ಆಕೆ ನಿಧನರಾದ ಮೇಲೂ ಫಾಲೋವರ್ಸ್ ಕಡೆಯಿಂದ ಸಂತಾಪ ಸೂಚಕ ಸಂದೇಶಗಳೂ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಹೇಮಶ್ರೀ ಫೇಸ್ ಬುಕ್ ಪ್ರೊಫೈಲ್ ಮೇಲೆ ಒಮ್ಮೆ ಕಣ್ಣಾಡಿಸಿದರೆ ಮತ್ತಷ್ಟು ಆಸಕ್ತಿಕರ ಅಂಶಗಳು ಹೊರಬೀಳುತ್ತವೆ. ತಮ್ಮ ಆಸಕ್ತಿಗಳು, ಹವ್ಯಾಸಗಳ ಬಗ್ಗೆಯೂ ಹೇಮಶ್ರೀ ಇಲ್ಲಿ ಬರೆದುಕೊಂಡಿದ್ದಾರೆ. ಹೇಮಶ್ರೀ ಫೇಸ್ ಬುಕ್ ಅಕೌಂಟ್

ಇನ್ನು ಆಕೆಯ ಆಸಕ್ತಿಗಳ ವಿಚಾರಕ್ಕೆ ಬರುವುದಾದರೆ ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಆಸಕ್ತಿ ಇದೆಯಂತೆ. ಕ್ಯಾನ್ಸರ್ ನಿಂದ ಮೃತಪಡುತ್ತಿರುವ ಮಕ್ಕಳು, ಶ್ರೀಲಂಕಾದಲ್ಲಿನ ನಮ್ಮ ಆನೆಗಳ ರಕ್ಷಣೆ ಬಗ್ಗೆಯೂ ಕನಿಕರ, ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಮದುವೆ ವಿಚಾರಕ್ಕೆ ಬಂದರೆ, Relationship statusನಲ್ಲಿ ತಾವಿನ್ನೂ ಅವಿವಾಹಿತೆ ಎಂದು ಬರೆದುಕೊಂಡಿದ್ದಾರೆ. ಫೇಸ್ ಬುಕ್ ಅಕೌಂಟ್ ತೆರೆದಾಗ ಹೇಮಶ್ರೀಗೆ ಮದುವೆಯಾಗಿತ್ತೋ ಇಲ್ಲವೋ ಗೊತ್ತಿಲ್ಲ. ಇನ್ನು ಮದುವೆಯಾದ ಮೇಲೆ ಫೇಸ್ ಬುಕ್ ಪ್ರೊಫೆಲ್ ಪೇಜನ್ನು ಬದಲಾಯಿಸುವ ಗೋಜಿಗೆ ಹೋದಂತಿಲ್ಲ ಅನ್ನಿಸುತ್ತದೆ.

ಇಷ್ಟಕ್ಕೂ ಇದು ಹೇಮಶ್ರೀ ಅವರ ಅಸಲಿ ಫೇಸ್ ಬುಕ್ ಅಕೌಂಟಾ? ಅಥವಾ ನಕಲಿಯೇ ಎಂಬುದು ಹೇಳುವುದು ಇನ್ನೂ ಕಷ್ಟ. ಆದರೆ ಇಲ್ಲಿನ ವಿವರಗಳು ಫೋಟೋಗಳು ಹಾಗೂ ಫಾಲೋವರ್ಸ್ ಸಂಖ್ಯೆ ನೋಡಿದರೆ ಇದು ಅಸಲಿ ಎನ್ನಿಸುತ್ತದೆ. ಆದರೆ ಯಾವುದೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ! (ಒನ್ಇಂಡಿಯಾ ಕನ್ನಡ)

More from Filmibeat

English summary
A well-known Kannada TV starlet Hemashree (32) has still single in her facebook profile (Weather it is fake or original we don't know), who was mysteriously dead by her husband Surendra Babu to the Baptist hospital in Bangalore few days ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X