ಪರಭಾಷೆಯಲ್ಲಿ ಬ್ಯೂಸಿಯಾಗಿರುವ ಕನ್ನಡದ ನಟಿ ಹೃತಿಕಾ ಶ್ರೀನಿವಾಸ್ ಬಗ್ಗೆ ನಿಮಗೇನು ಗೊತ್ತು?

By ಅನಿತಾ ಬನಾರಿ

ನಟಿ ಹೃತಿಕಾ ಶ್ರೀನಿವಾಸ್ ಅವರು ಕಿರುತೆರೆಯಲ್ಲಿ ಬ್ಯುಸಿಯಾಗುತ್ತಿದ್ದು ಸಾಕಷ್ಟು ಸಿನಿಮಾಗಳನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಹೌದು, ಕನ್ನಡ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ನಟಿಸಿ ತೆಲುಗು ಹಿರಿತೆರೆಯಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ಟಾಲಿವುಡ್ ಎರಡು ಒಟ್ಟಿಗೆ ಮ್ಯಾನೇಜ್ ಮಾಡುತ್ತಿದ್ದಾರೆ ನಟಿ ಹೃತಿಕಾ ಶ್ರೀನಿವಾಸ್.

ನಟಿ ಹೃತಿಕಾ ಶ್ರೀನಿವಾಸ್ ತಮ್ಮ ವೃತ್ತಿ ಬದುಕಿನ ಆರಂಭದಲ್ಲೇ ಈ ರೀತಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿರುವುದು ವಿಶೇಷ. 'ಸೌಂಡ್ ಪಾರ್ಟಿ' ಎಂಬ ಕನ್ನಡ ಸಿನಿಮಾ ಮೂಲಕ ಹೃತಿಕಾ ಶ್ರೀನಿವಾಸ್ ನಟನೆಗೆ ಕಾಲಿಟ್ಟರು. ಇದರ ಜೊತೆಗೆ ಈಗ ತೆಲುಗುನಿಂದ 'ಅಲ್ಲಂತ ದೂರನಾ' ಸಿನಿಮಾ ಸೇರಿದಂತೆ ಮತ್ತು ಎರಡು ತೆಲುಗು ಸಿನಿಮಾಗಳ ಆಫರ್ ಈ ನಟಿಯನ್ನು ಹುಡುಕಿಕೊಂಡು ಬಂದಿವೆ.

Actress Hrithika Srinivas is getting offers from other languages movies

ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಉಡಾಳ' ಎಂಬ ಸಿನಿಮಾದಲ್ಲಿಯೂ ನಾಯಕ ನಟಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಶಾಮನೂರು ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದೆಯಂತೆ. ಸದ್ಯಕ್ಕೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಹೆಚ್ಚಿನದೆಲ್ಲ ವಿಜಯಪುರದ ಸುತ್ತಮುತ್ತಲಿನ ಜಾಗದಲ್ಲಿ ನಡೆದಿದೆ ಅಂತೆ.

ಈ ಚಿತ್ರದ ಬಗ್ಗೆ ಮಾತನಾಡಿದ ನಟಿ ಹೃತಿಕಾ ಶ್ರೀನಿವಾಸ್ ನನಗೆ ಉತ್ತರ ಕನ್ನಡ ಭಾಷೆಯಲ್ಲಿ ಮಾತನಾಡುವುದು ಬಹಳ ಚಾಲೆಂಜಿಂಗ್ ಆಗಿತ್ತು. ಪ್ರಮೇಯ ಭಾಷೆಯನ್ನು ಕಲಿತೆ. ಚಿತ್ರತಂಡ ನನ್ನ ಈ ಬೆಳವಣಿಗೆಗೆ ಬಹಳಷ್ಟು ಸಹಕಾರ ನೀಡಿದೆ ಎಂದಿದ್ದಾರೆ.

Actress Hrithika Srinivas is getting offers from other languages movies

"ನಮ್ ಗಣಿ ಬಿಕಾಂ ಪಾಸ್" ಎಂಬ ಮತ್ತೊಂದು ಕನ್ನಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಹೃತಿಕಾ ಶ್ರೀನಿವಾಸ್. ಅಭಿಷೇಕ್ ಶೆಟ್ಟಿಯವರು ಈ ಚಿತ್ರದಲ್ಲಿ ನಿರ್ದೇಶಕರಾಗಿದ್ದಾರೆ. ಚಿತ್ರದ ಪಾತ್ರದ ಬಗ್ಗೆ ಮಾತನಾಡಿರುವ ಹೃತಿಕಾ ಶ್ರೀನಿವಾಸ್ ಅವರು ಈ ಚಿತ್ರದಲ್ಲಿನ ನನ್ನ ಪಾತ್ರ ನನ್ನ ಜೀವನಕ್ಕೆ ಹೆಚ್ಚು ಹತ್ತಿರವಾಗಿದೆ. ಹಾಗಾಗಿ ನನಗೆ ಈ ಪಾತ್ರದ ಬಗ್ಗೆ ಖುಷಿ ಇದೆ ಎಂದಿದ್ದಾರೆ.

ನಟನಾ ಜೀವನದ ಮೊದಲ ಹಂತದಲ್ಲೇ ಬಹಳಷ್ಟು ಆಫರ್ ಗಳನ್ನು ಪಡೆಯುತ್ತಿರುವ ನಟಿ ಹೃತಿಕಾ ಶ್ರೀನಿವಾಸ್ ಅವರು ತಮ್ಮ ಪಾತ್ರ ಆಯ್ಕೆ ಬಗ್ಗೆ ಮಾತನಾಡಿದ್ದು "ನಾನು ಯಾವುದೇ ಪಾತ್ರವನ್ನು ಮಾಡಿದರೂ ಅದು ನೋಡುಗರ ಮೇಲೆ ಪರಿಣಾಮ ಬೀರುವಂತಿರಬೇಕು. ಅಂತಹ ಪಾತ್ರಗಳನ್ನು ಮಾಡಲು ನಾನು ಸದಾ ಸಿದ್ಧ" ಎಂದು ಹೇಳುತ್ತಾರೆ.

More from Filmibeat

English summary
Apart from Kannada, Hrithika Srinivas is busy in other language cinema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X