ಪುಟ್ಟಕ್ಕನ ಮಗಳಿಗೆ ಲಾಯರ್ ಆಗಿ ಬಂದ 'ಅಗ್ನಿಸಾಕ್ಷಿ' ಮಾಯಾ: ನಟಿ ಇಶಿತಾ ಬಗ್ಗೆ ನಿಮಗೆ ಗೊತ್ತಾ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯ ಪೈಕಿ 'ಅಗ್ನಿಸಾಕ್ಷಿ'ಯೂ ಒಂದು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಖಳನಾಯಕಿ ಮಾಯಾಳಾಗಿ ನಟಿಸಿ ನಟಿ ಇಶಿತಾ ವರ್ಷ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.

ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಇಶಿತಾ ವರ್ಷ, ಮಾಯಾ ಪಾತ್ರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದ್ದರು. 'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಒಂದೆರಡು ಸೀರಿಯಲ್‌ಗಳಲ್ಲಿ ಅತಿಥಿ ಪಾತ್ರದ ಮೂಲಕವೂ ನಟಿ ಇಶಿತಾ ವರ್ಷ ಮೋಡಿ ಮಾಡಿದ್ದರು.

Actress Ishita Varsha returned to tv with Puttakkana Makkalu as a lawyer

ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕೊರಿಯೋಗ್ರಾಫರ್ ಮುರುಗನ್ ಎಂಬುವವರನ್ನು ಮದುವೆಯಾದರು. ನಂತರ ಒಂದೆರಡು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಧಾರಾವಾಹಿಗಳಿಗೆ ಬರಲೇ ಇಲ್ಲ. ಬದಲಿಗೆ ವೈಲ್ಡ್ ಲೈಫ್ ಫೋಟೋಗ್ರಾಫಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರು.

ಹೌದು, ವೈಲ್ಡ್ ಲೈಫ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಇರುವ ನಟಿ ಇಶಿತಾ ಮುರುಗನ್ ಕ್ಯಾಮರಾ ಹಿಡಿದು ಆಫ್ರಿಕಾದ ಕಾಡು ಮೇಡುಗಳಲ್ಲಿ ಸುತ್ತಿದ್ದಾರೆ. ಸೀರೆ ಉಟ್ಟು ಸಿಂಹ, ಚಿರತೆಗಳ ಫೋಟೋಶೂಟ್ ಮಾಡಿರುವ ಈಕೆ ಆಫ್ರಿಕಾದ ಬುಡಕಟ್ಟು ಜನಗಳ ನಡುವೆ ಬೆರೆತು ಅವರ ಜೀವನ ಶೈಲಿಯನ್ನು ತಿಳಿಯುವ ಪ್ರಯತ್ನ ಪಟ್ಟಿದ್ದಾರೆ. ಇದೆಲ್ಲದರ ನಂತರ ಇದೀಗ ಅವರು ಧಾರಾವಾಹಿಗೆ ವಾಪಾಸ್ ಆಗಿರುವುದು ವಿಶೇಷ.

Actress Ishita Varsha returned to tv with Puttakkana Makkalu as a lawyer

ನಟಿ ಇಶಿತ ಮುರುಗನ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ವಿಶೇಷ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಒಳ್ಳೆಯ ಟಿಆರ್‌ಪಿ ಪಡೆದು ಮುನ್ನುಗುತ್ತಿದೆ. ತನ್ನ ಜೀವನದಂತೆ ಮಕ್ಕಳ ಜೀವನ ಹಾಳಾಗಬಾರದು ಎಂದು ಕಷ್ಟ ಪಡುತ್ತಿರುವ ಪುಟ್ಟಕ್ಕ ತನ್ನ ಮೂರು ಹೆಣ್ಣು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುವ ಕನಸು ಕಂಡಿದ್ದಾಳೆ.

ಆದರೆ, ಮೊದಲ ಮಗಳು ಸಹನಾ ಪ್ರೀತಿಸಿ ಮದುವೆಯಾದರೂ ಗಂಡ ಮುರಳಿಯನ್ನು ಬಿಟ್ಟು ಮನೆಯಲ್ಲಿ ಕೂತಿದ್ದಾಳೆ. ಇದೀಗ ಗಂಡನಿಂದ ವಿಚ್ಛೇದನ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಕಥಾ ಹಂದರ ಈ ರೀತಿ ಓಡುತ್ತಿರುವಾಗ ಸಹನಾಳ ಈ ಹಠಕ್ಕೆ ಯಾರೂ ಮಣಿಯದೆ ವಿಚ್ಛೇದನಕ್ಕೆ ಮುನ್ನುಗ್ಗದಂತೆ ಪ್ರಯತ್ನ ಪಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಒಬ್ಬ ಮಹಿಳಾ ಲಾಯರ್ ಸಹನಾಳಿಗೆ ಸಹಾಯ ಮಾಡಲು ಮುಂಬರುತ್ತಿದ್ದಾರೆ. ಈ ಲಾಯರ್ ಪಾತ್ರವನ್ನು ಇಶಿತಾ ಮುರುಗನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಹೌದು, ವಿಶೇಷ ಪಾತ್ರ ಒಂದರಲ್ಲಿ ಇಶಿತಾ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕೆ ಬೇಕಾದ ತಯಾರಿಗಳನ್ನು ನಡೆಸಿದ್ದಾರಂತೆ.

ಹಲವು ವರ್ಷಗಳ ನಂತರ ಮತ್ತೆ ಧಾರಾವಾಹಿಗೆ ಕಾಲಿಡುತ್ತಿರುವ ನಟಿ ಇಶಿತಾ ಮುರುಗನ್ ಅವರನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಸದ್ಯದ ಕುತೂಹಲ.

More from Filmibeat

English summary
Actress Ishita Varsha returned to television with a new role:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X