»   » ಕನ್ನಡ ಕಿರುತೆರೆಗೆ ಬೆಳದಿಂಗಳಾಗಿ ಬಂದ ನಟಿ ಜಯಪ್ರದ

ಕನ್ನಡ ಕಿರುತೆರೆಗೆ ಬೆಳದಿಂಗಳಾಗಿ ಬಂದ ನಟಿ ಜಯಪ್ರದ

Posted By:
Subscribe to Filmibeat Kannada

ತಮ್ಮ ಅದ್ಭುತ ನಟನೆಯಿಂದ ಕನ್ನಡ ನಾಡಿನ ಜನತೆಯ ಮನ ಗೆದ್ದ ಮನಮೋಹಕ ನಟಿ ಜಯಪ್ರದ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಜಯಪ್ರದ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಯಾಗಿ ಜಯಪ್ರದ ಭಾಗವಹಿಸಿದ್ದಾರೆ.

Actress Jaya Prada in Suvarna Channel's Dance Dance show

ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್, ಖುಷ್ಬು, ಶಿಲ್ಪಾ ಶೆಟ್ಟಿ, ಸುಧಾರಾಣಿ, ಮೀನಾ ಸೇರಿದಂತೆ ಹಲವರು 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗು ನೀಡಿದ್ದರು. [ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ]

ಇದೀಗ 'ಓ ಹೋ ಪ್ರೇಮ ಕಾಶ್ಮೀರ' ಹಾಡಿಗೆ ಸ್ಟೆಪ್ ಹಾಕುವ ಮೂಲಕ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ ಮೇಲೆ ಬಂದ ಜಯಪ್ರದ ಸಂತಸ ವ್ಯಕ್ತಪಡಿಸಿದ್ದಾರೆ.

ನಟಿ ಜಯಪ್ರದ ಜೊತೆ 'ಡ್ಯಾನ್ಸ್ ಡ್ಯಾನ್ಸ್' ವಿಶೇಷ ಇಂದಿನಿಂದ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Actress Jaya Prada has taken part in Kannada Entertainment Channel Suvarna's popular show 'Dance Dance' as special guest. The show will telecast on Wednesday, February 24th 7.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada