'ಕೋಟ್ಯಧಿಪತಿ'ಯಲ್ಲಿ ಪುಟ್ಟಗೌರಿ ಮಹೇಶ ಮಾಡಿದ ತಪ್ಪನ್ನ ಜಯಶ್ರೀ ಮಾಡಲಿಲ್ಲ

By Bharath Kumar

Recommended Video

Kannadada Kotyadipathi Season 3 : ಒಳ್ಳೆ ಹಣ ಗೆದ್ದ ಜಯಶ್ರೀ..! | Filmibeat Kannada

'ಕನ್ನಡದ ಕೋಟ್ಯಧಿಪತಿ'ಯಲ್ಲಿ ಭಾಗವಹಿಸಿದ್ದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟ ರಕ್ಷಿತ್ (ಪುಟ್ಟಗೌರಿ ಮಹೇಶ) ಮಾಡಿಕೊಂಡ ಒಂದು ತಪ್ಪಿನಿಂದ ದೊಡ್ಡ ಮೊತ್ತವನ್ನ ಕಳೆದುಕೊಳ್ಳಬೇಕಾಯಿತು. ಅದಾದ ಬಳಿಕ ಹಾಟ್ ಸೀಟ್ ನಲ್ಲಿ ಕುಳಿತುಕೊಂಡ ಕಿರುತೆರೆ ನಟಿ ಜಯಶ್ರೀಗೂ ಅದೇ ಸಂದರ್ಭ ಎದುರಾಗಿತ್ತು.

ಆ ವೇಳೆ ಪುಟ್ಟಗೌರಿ ಮಹೇಶ ಮಾಡಿದ ಎಡವಟ್ಟು ಜಯಶ್ರೀ ಅವರು ಮಾಡ್ತಾರೆ ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಆದ್ರೆ, ಆ ತಪ್ಪನ್ನ ಜಯಶ್ರೀ ಮಾಡಲಿಲ್ಲ. ಅದಕ್ಕೆ ಆಕೆ ಗೆದ್ದು ಪೂರ್ತಿ ಹಣವನ್ನ ತೆಗೆದುಕೊಂಡು ಹೋದರು.

'ಕನ್ನಡದ ಕೋಟ್ಯಧಿಪತಿ' ಆಟದಲ್ಲಿ ಬುದ್ದಿವಂತಿಕೆ ಇದ್ರೆ ಮಾತ್ರ ಆಗಲ್ಲ, ಅದರ ಜೊತೆಗೆ ಆ ಬುದ್ದಿವಂತಿಕೆಯನ್ನ ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಹೊಂದಿರಬೇಕು ಎಂಬುದನ್ನ ಜಯಶ್ರೀ ತೋರಿಸಿಕೊಟ್ಟರು. ಅಷ್ಟಕ್ಕೂ, 'ಪುಟ್ಟಗೌರಿ ಮದುವೆ' ಖ್ಯಾತಿಯ ರಕ್ಷಿತ್ ಮಾಡಿದ ಎಡವಟ್ಟೇನು.? ನಟಿ ಜಯಶ್ರೀ ಗಳಿಸಿದ ಮೊತ್ತವೆಷ್ಟು.? ಹೇಗಿತ್ತು ಜಯಶ್ರೀ ಅವರ ಆಟ.? ಎಂದು ತಿಳಿದುಕೊಳ್ಳಲು ಮುಂದೆ ಓದಿ....

9 ಪ್ರಶ್ನೆಗೂ ಉತ್ತರಿಸಿದ ಜಯಶ್ರೀ

9 ಪ್ರಶ್ನೆಗೂ ಉತ್ತರಿಸಿದ ಜಯಶ್ರೀ

'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿ ರಕ್ಷಿತ್ ಅವರಂತೆ ಜಯಶ್ರೀ ಅವರು ಕೂಡ ಮೊದಲ ಒಂಭತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದರು. ಆದ್ರೆ, ಅವರಂತೆ ಹತ್ತನೇ ಪ್ರಶ್ನೆಯಲ್ಲಿ ಎಡವಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ಚಾಣಕ್ಷತನದಿಂದ ಯೋಚಿಸಿ ಆಟವನ್ನ ಕ್ವಿಟ್ ಮಾಡಿಕೊಂಡರು.

ಇವರಿಗೂ ಕೈ ಕೊಡ್ತು 10ನೇ ಪ್ರಶ್ನೆ

ಇವರಿಗೂ ಕೈ ಕೊಡ್ತು 10ನೇ ಪ್ರಶ್ನೆ

ಮೊದಲ ಒಂಭತ್ತು ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿದ್ದ ಜಯಶ್ರೀ ಅವರಿಗೆ ಹತ್ತನೇ ಪ್ರಶ್ನೆ ಕಷ್ಟವಾಯಿತು. ಉತ್ತರ ಏನು ಎಂಬುದು ಗೊತ್ತಾಗಲಿಲ್ಲ. ಆಟ ಮುಂದುವರೆಸುವುದಾ ಅಥವಾ ಕ್ವಿಟ್ ಮಾಡೋದಾ ಎಂಬ ಯೋಚನೆ ಉಂಟಾಯಿತು.

ಬುದ್ದಿವಂತಿಕೆಯಿಂದ ಕ್ವಿಟ್ ಮಾಡಿದ ನಟಿ

ಬುದ್ದಿವಂತಿಕೆಯಿಂದ ಕ್ವಿಟ್ ಮಾಡಿದ ನಟಿ

ಒಂದು ವೇಳೆ ಹತ್ತನೇ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸರಿಯಾದರೇ ಓಕೆ. ಬಟ್, ಅದು ತಪ್ಪಾದರೇ ಗೆದ್ದ ಹಣವನ್ನೆಲ್ಲಾ ಕಳೆದುಕೊಂಡು ಖಾಲಿ ಹತ್ತು ಸಾವಿರ ರೂಪಾಯಿಗೆ ಜಾರುತ್ತಿದ್ದರು. ಅದನ್ನ ಗಮದಲ್ಲಿಟ್ಟುಕೊಂಡಿದ್ದ ಜಯಶ್ರೀ, ರಕ್ಷಿತ್ ಮಾಡಿದ ತಪ್ಪನ್ನ ಮಾಡಲಿಲ್ಲ. ಬುದ್ದಿವಂತಿಕೆಯಿಂದ ಆಟವನ್ನ ಕ್ವಿಟ್ ಮಾಡಿ ಗೆದ್ದ ಹಣವನ್ನ ತೆಗೆದುಕೊಂಡು ಹೋದರು.

ಜಯಶ್ರೀ ಆಟ ಮುಗಿಸಿದ ಆ ಪ್ರಶ್ನೆ ಯಾವುದು.?

ಜಯಶ್ರೀ ಆಟ ಮುಗಿಸಿದ ಆ ಪ್ರಶ್ನೆ ಯಾವುದು.?

ಹಿಂದೂ ಪುರಾಣದ ಪ್ರಕಾರ, ತ್ರಿಕೂಟ ಪರ್ವತದ ಮೇಲೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ನಗರದ ಹೆಸರೇನು.?

A ಲಂಕಾ

B ದ್ವಾರಕ

C ಅಮರಾವತಿ

D ಅಯೋಧ್ಯ

ಜಯಶ್ರೀ ಗಳಿಸಿದ್ದೆಷ್ಟು.?

ಜಯಶ್ರೀ ಗಳಿಸಿದ್ದೆಷ್ಟು.?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಶ್ರೀ' ಧಾರಾವಾಹಿಯಲ್ಲಿ ಶ್ರೀಗೆ ತಾಯಿಯ ಪಾತ್ರ ಮಾಡುತ್ತಿರುವುದು ಇದೇ ಜಯಶ್ರೀ. ಇವರು ಕನ್ನಡದ ಕೋಟ್ಯಧಿಪತಿಯಲ್ಲಿ ಗಳಿಸಿದ್ದು 1.60 ಲಕ್ಷ. ಹತ್ತನೇ ಪ್ರಶ್ನೆ ಉತ್ತರ ಆಯ್ಕೆ A ಲಂಕಾ.

More from Filmibeat

English summary
'Kannadada Kotyadhipathi season 3' contestant Shree serial actress jayashree has won 1 lakh 60 thousand rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X