'ದೇವಕಿ' ಖ್ಯಾತಿಯ ಜ್ಯೋತಿ ರೈ ಜರ್ನಿ ಸಖತ್ ಇಂಟ್ರೆಸ್ಟಿಂಗ್
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಓದು ಮುಗಿಯುತ್ತಿದ್ದಂತೆ, ಮದುವೆಯಾಗಿ ಬೆಂಗಳೂರಿಗೆ ಬಂದರು ನಟಿ ಜ್ಯೋತಿ ರೈ. ಇಂದಿಗೂ ಇವರನ್ನು ಜನ ದೇವಕಿ ಎಂದೇ ಗುರುತಿಸುತ್ತಾರೆ. ಮಂಗಳೂರು, ಮಡಿಕೇರಿಯಲ್ಲಿ ಓದಿ ಬೆಳದ ಜ್ಯೋತಿ ಅವರಿಗೆ ಈಗ 10 ವರ್ಷದ ಒಬ್ಬ ಮಗನಿದ್ದಾನೆ.
ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಇದಾದ ಮೇಲೆ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸಿದರು. ಜೋಗುಳ, ಜೋ ಜೋ ಲಾಲಿ, ಗೆಜ್ಜೆಪೂಜೆ ಹೀಗೆ ಹಲವು ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಅಲ್ಲದೇ, ತುಳು, ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲೂ ನಟಿಸಿದರು.
ನಟಿ ಜ್ಯೋತಿ ರೈ ಮದುವೆಯಾದ ಮೇಲೆ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಇದಾದ ಬಳಿಕ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸಿದರು. ಮೊದ ಮೊದಲು ಸಾಫ್ಟ್ ಆಗಿದ್ದ ಇವರು ಬರು ಬರುತ್ತಾ ನೆಗೆಟಿವ್ ರೋಲ್‌ಗಳಲ್ಲೂ ಕಾಣಿಸಿಕೊಂಡರು. ವಿಲನ್ ಪಾತ್ರದಲ್ಲೂ ಕೂಡ ಪ್ರೇಕ್ಷಕರಿಗೆ ಹತ್ತಿರ ಆಗಿದ್ದರು.

17-18 ವರ್ಷದಿಂದ ಕಿರುತೆರೆಯಲ್ಲಿ ಸಕ್ರಿಯ!
ಅನುರಾಗ ಸಂಗಮ, ಜೋಗುಳ, ಜೋ ಜೋ ಲಾಲಿ, ಗೆಜ್ಜೆ ಪೂಜೆ, ಶುಭಮಂಗಳ, ಲವಲವಿಕೆ, ಪ್ರೇರಣಾ, ಕಿನ್ನರಿ, ಸಿಲ್ಲಿ ಲಲ್ಲಿ, ಸವಾಲಿಗೆ ಸೈ, ಮೂರು ಗಂಟು, ಶಾಂತಲಾ, ಕನ್ಯಾದಾನ, ಕಸ್ತೂರಿ ನಿವಾಸ ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಳೆದ 17-18 ವರ್ಷದಿಂದ ಕಿರುತೆರೆಯಲ್ಲಿ ಮಿಂಚಿದ್ದಾರೆ.

ಸಿನಿಮಾದಲ್ಲೂ ಹೆಸರು ಮಾಡಿದ ಜ್ಯೋತಿ ರೈ!
ಕೇವಲ ಸೀರಿಯಲ್‌ಗಳಿಗೆ ಮೀಸಲಿರದ ಜ್ಯೋತಿ, ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೀತಾರಾಮ ಕಲ್ಯಾಣ, ಗಂಧದ ಕುಡಿ, 99, ದಿಯಾ ವರ್ಣ ಪಟಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ವರ್ಣ ಪಟಲ' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ತಾಯಿಯ ಪಾತ್ರದಲ್ಲಿ ಜ್ಯೋತಿ ಕಾಣಿಸಿಕೊಂಡಿದ್ದಾರೆ. ಜ್ಯೋತಿ ರೈ ಕನ್ನಡ ಮಾತ್ರವಲ್ಲದೇ, ತೆಲುಗು, ತುಳು, ತಮಿಳು ಭಾಷೆಯಲ್ಲೂ ಬಣ್ಣ ಹಚ್ಚಿದ್ದಾರೆ. ಇನ್ನು ಜ್ಯೋತಿ ರೈ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ಜ್ಯೋತಿ ಕನಸಿಗೆ ಕುಟುಂಬದ ಸಾಥ್!
ಜ್ಯೋತಿ ಓದಿದ್ದು ಕಂಪ್ಯೂಟರ್ ಸೈನ್ಸ್, ಬಿಎಸ್ಸಿ ಪದವಿ ಪಡೆದಿದ್ದಾರೆ. ಮದುವೆಯಾಗಿ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುವಾಗ ವಿನು ಬಳಂಜ ಅವರ ಕಣ್ಣಿಗೆ ಬಿದ್ದು, ನಟನೆಗೆ ಎಂಟ್ರಿ ಕೊಟ್ಟರು. ಕರ್ಮಷಿಯಲ್ ಚಿತ್ರಗಳಿಗಿಂತ ಕಲಾತ್ಮಕ ಸಿನಿಮಾಗಳ ಕಡೆಗೆ ಜ್ಯೋತಿ ಒಲವಿದೆ. ನೆಟ್ ವರ್ಕಿಂಗ್ ಎಂಜಿನಿಯರ್ ಮುಗಿಸಿರುವ ಜ್ಯೋತಿಗೆ ಅವರ ಪತಿ ಪದ್ಮನಾಭ ರೈ ಅವರು ನಟನೆಗೆ ತುಂಬಾ ಸಹಕಾರ ನೀಡುತ್ತಾರಂತೆ.

ಜ್ಯೋರಿ ಅವ್ರಿಗೆ 10 ವರ್ಷದ ಮಗನಿದ್ದಾನೆ!
ಇನ್ನು ಜ್ಯೋತಿಗೆ ಒಬ್ಬ ಮಗನಿದ್ದಾನೆ, ಸುಮಾರು 10 ವರ್ಷ ವಯಸ್ಸು. ಮಗನ ಹೆಸರು ಊರ್ವೇಶ್. ಮಗನಿಗೆ ಆಟಿಸಂ ಖಾಯಿಲೆ ಕೊಂಚ ಬಾಧಿಸಿದ್ದು, ಊರ್ವೇಶ್ ಸೂಪರ್ ಆಗಿ ಇಂಗ್ಲಿಷ್ ಮಾತನಾಡುತ್ತಾನೆ. ತುಂಬಾ ಚೆನ್ನಾಗಿ ಈಜುವ ಊರ್ವೇಶ್ ಬಗ್ಗೆ ದೇವಕಿಗೆ ಹೆಮ್ಮೆ ಇದೆ. ಊರ್ವೇಶ್ ಕೇವಲ ಟಿವಿ ನೋಡಿಯೇ ಬರೋಬ್ಬರಿ ಐದು ಭಾಷೆಗಳಲ್ಲಿ ಮಾತನಾಡುವುದನ್ನು ಕಲಿತಿದ್ದಾನಂತೆ. ಈ ಬಗ್ಗೆ ಸ್ವತಃ ಜ್ಯೋತಿ ಅವರೇ ಹೇಳಿಕೊಂಡಿದ್ದಾರೆ.


Click it and Unblock the Notifications











