ಸಾಕ್ಷಿ ಸಮೇತ ತಮ್ಮ ನಿಜವಾದ ವಯಸ್ಸು ಹೇಳಿದ 'ಜೋಗುಳ'ದ ಅಮ್ಮ ಜ್ಯೋತಿ ರೈ; ಫ್ಯಾನ್ಸ್ ಶಾಕ್
'ಜೋಗುಳ' ಧಾರಾವಾಹಿಯ ದೇವಕಿ ಪಾತ್ರದಿಂದ ಮನೆ ಮಾತಾಗಿದ್ದ ನಟಿ ಜ್ಯೋತಿ ರೈ ಈಗ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಗುಪ್ಪೆಡಂತ ಮನಸು' ಎನ್ನುವ ತೆಲುಗು ಧಾರಾವಾಹಿನಲ್ಲಿ ನಟಿಸಿ ತೆಲುಗು ವೀಕ್ಷಕರ ಮನಗೆದ್ದಿದ್ದರು. ಸದ್ಯ ತೆಲುಗು ವೆಬ್‌ಸೀರಿಸ್ ಹಾಗೂ ಸಿನಿಮಾಗಳಲ್ಲಿ ಚೆಲುವೆ ಫುಲ್ ನಟಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿದ್ದ ಜ್ಯೋತಿ ರೈ ಸದ್ಯ ತೆಲುಗು ನಿರ್ದೇಶಕನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರ ಎಂಗೇಜ್‌ಮೆಂಟ್, ಮದುವೆ ಕೂಡ ಆಗಿದೆ ಎನ್ನುವ ಚರ್ಚೆ ನಡೀತಿತ್ತು. ಈ ವಿಚಾರವನ್ನು ಆಕೆಯ ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕೃತವಾಗಿ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಇನ್ನು ಇತ್ತೀಚೆಗೆ ಸಿಕ್ಕಾಪಟ್ಟೆ ಹಾಟ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ದರ್ಶನ ಕೊಡುತ್ತಿದ್ದಾರೆ. ಶಾರ್ಟ್ಸ್, ಬಿಕಿನಿ, ಸ್ವಿಮ್ ಸೂಟ್ ಧರಿಸಿ ಫೋಟೊ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಪ್ರಿಯಕರ ಸುಕು ಪೂರ್ವಜ್ ಜೊತೆಗೂ ಆತ್ಮೀಯವಾಗಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಜ್ಯೋತಿ ರೈಗೆ ಭಾರೀ ಫಾಲೋಯಿಂಗ್ ಇದೆ. ಆಕೆಯ ಹಾಟ್ ಹಾಟ್ ಪೋಸ್ಟ್‌ಗಳಿಗೆ ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿರುತ್ತಾರೆ. ಕನ್ನಡದ ನಟಿಯಾದರೂ ತೆಲುಗು ಮನೆ ಮಗಳು ಎನ್ನುವಂತೆ ಅಲ್ಲಿ ಧಾರಾವಾಹಿಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಕಿರುತೆರೆಯಲ್ಲಿ ಸೀರೆ ಉಟ್ಟು ಕಂಗೊಳಿಸುವ ಜ್ಯೋತಿ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಮಾಡ್ ಡ್ರೆಸ್‌ಗಳಲ್ಲಿ ಮಿಂಚುತ್ತಿದ್ದಾರೆ.
ಸದ್ಯ ತೆಲುಗಿನಲ್ಲಿ 'ಗುಪ್ಪೆಂಡತ ಮನಸು' ಧಾರಾವಾಹಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ಈ ಧಾರಾವಾಹಿಯಲ್ಲಿ ಜಗತಿ ಎನ್ನುವ ಪಾತ್ರದಲ್ಲಿ ಜ್ಯೋತಿ ಗಮನ ಸೆಳೆಯುತ್ತಿದ್ದಾರೆ. ಮತ್ತೊಂದು ಕಡೆ 'ಪ್ರೆಟಿ ಗರ್ಲ್' ಎನ್ನುವ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಟಚ್‌ನಲ್ಲಿ ಇರುವ ಜ್ಯೋತಿ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಇತ್ತೀಚೆಗೆ ಜ್ಯೋತಿ ರೈ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಷನ್ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರು "ನಿಮ್ಮ ವಯಸ್ಸು ಎಷ್ಟು?" ಎಂದು ಕೇಳಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ತಮ್ಮ ನಿಜವಾದ ವಯಸ್ಸು ಎಷ್ಟು ಎಂದು ಹೇಳಲು ಇಷ್ಟಪಡುವುದಿಲ್ಲ. ನಟಿಯರಂತೂ ಈ ವಿಚಾರದಲ್ಲಿ ಬಹಳ ಎಚ್ಚರ ವಹಿಸುತ್ತಾರೆ. ಆದರೆ ಜ್ಯೋತಿ ತಮ್ಮ ಪಾನ್ ಕಾರ್ಡ್ ಅಲ್ಲಿ ಇರುವ ಡೇಟ್ ಆಫ್ ಬರ್ತ್ ಸಮೇತ ತಮ್ಮ ವಯಸ್ಸು ರಿವೀಲ್ ಮಾಡಿದ್ದಾರೆ.

ನಟಿ ಜ್ಯೋತಿ ರೈ 1994ರಲ್ಲಿ ಹುಟ್ಟಿದ್ದಾಗಿ ಹೇಳಿದ್ದಾರೆ. ಆ ಲೆಕ್ಕದಲ್ಲಿ ಆಕೆಯ ವಯಸ್ಸು 30 ವರ್ಷ ಎನ್ನುವುದು ಗೊತ್ತಾಗಿದೆ. ಇದನ್ನು ಕೇಳಿ ಕೆಲವರು ಶಾಕ್ ಆಗಿದ್ದಾರೆ. ಅರೇ ಧಾರಾವಾಹಿಗಳಲ್ಲಿ ಆಕೆಯನ್ನು ನೋಡಿದರೆ ಇಷ್ಟು ಚಿಕ್ಕ ವಯಸ್ಸು ಅನಿಸುವುದಿಲ್ಲ ಅಲ್ವಾ? ಎಂದು ಹುಬ್ಬೇರಿಸಿದ್ದಾರೆ. ಜ್ಯೋತಿ ವಯಸ್ಸು ಮೀರಿದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆಕೆ ವಯಸ್ಸು ಇನ್ನು 30 ವರ್ಷ. ಆಕೆಯ ಗ್ಲಾಮರ್ ನೋಡುತ್ತಿದ್ದರೆ ಈಗಲೂ ಸಿನಿಮಾ ಹೀರೊಯಿನ್ ಆಗಬಹುದು ಎಂದಿದ್ದಾರೆ.
ಅಂದಹಾಗೆ ಜ್ಯೋತಿ ರೈಗೆ ಈಗಾಗಲೇ ಮದುವೆಯಾಗಿ ಒಬ್ಬ ಮಗ ಇದ್ದಾನೆ. ಪತಿಗೆ ಡಿವೋರ್ಸ್ ನೀಡಿ ನಿರ್ದೇಶಕ ಸುಕು ಪೂರ್ವನ್ ಕೈ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಆಕೆ ಮಾತ್ರ ಪ್ರತಿಕ್ರಿಯಿಸಿಲ್ಲ. ಕನ್ನಡದಲ್ಲಿ 'ಬಂದೇ ಬರತಾವ ಕಾಲ' ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಜ್ಯೋತಿ(ಜಯಶ್ರೀ ರೈ) ಬಳಿಕ 'ಜೋಗುಳ', 'ಗೆಜ್ಜೆಪೂಜೆ', 'ಕನ್ಯಾದಾನ', 'ಅನುರಾಗ ಸಂಗಮ', 'ಮೂರು ಗಂಟು', 'ಕಿನ್ನರಿ' ಹೀಗೆ ಹಲವು ಧಾರಾವಾಹಿಗಳಲ್ಲಿ ಮಿಂಚಿದರು.


Click it and Unblock the Notifications











