'ಕಿಲ್ಲರ್' ಟೀಸರ್ ರಿಲೀಸ್; ರೋಬೊ ಅವತಾರದಲ್ಲಿ ಜ್ಯೋತಿ ರೈ
ನಟಿ ಜ್ಯೋತಿ ರೈ ಕಿರುತೆರೆಗೆ ಬಂದಾಗ ಸೈಲೆಂಟ್ ಆಗಿಯೇ ಎಲ್ಲರ ಮನ ಗೆದ್ದಿದ್ದರು. ಬಳಿಕ ಮೊದಲ ಮದುವೆಗೆ ಗುಡ್ ಬೈ ಹೇಳಿ ಶಾಕ್ ಕೊಟ್ಟರು. ನಿಧಾನವಾಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ನಿರ್ದೇಶಕ ಸುಕುಪೂರ್ವಜ್ ಅವರನ್ನು ಮದುವೆಯಾಗಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ ಜ್ಯೋತಿ ರೈ ಫೋಟೋಗಳನ್ನು ನೋಡಲೆಂದೇ ಕೆಲ ನೆಟ್ಟಿಗರು ಕಾಯುತ್ತಿರುತ್ತಾರೆ.
ನಟಿ ಜ್ಯೋತಿ ರೈ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಇನ್ಮುಂದೆ ಸಿನಿರಂಗದಲ್ಲೂ ಹೊಸ ಅಧ್ಯಾಯವನ್ನು ತೆರೆಯುವುದರಲ್ಲಿ ಅನುಮಾನವೇ ಇಲ್ಲ.

ನಟಿ ಜ್ಯೋತಿ ಪೂರ್ವಜ್ ಈಗ ಟಾಲಿವುಡ್‌ನಲ್ಲಿ 'ಕಿಲ್ಲರ್' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಮುಕ್ತಾಯವಾಗಿ ರಿಲೀಸ್ ಆಗಬೇಕಿದೆ. ಈ ಹಿಂದೆಯೇ ಇದರ ಪೋಸ್ಟರ್ ರಿಲೀಸ್ ಆಗಿತ್ತು.
ಸೂಪರ್ ಶೀ ಅವತಾರ
ಇದೀಗ ಕಿಲ್ಲರ್ ಚಿತ್ರದ ತುಣುಕನ್ನು ಯೂಟ್ಯೂಬ್‌ನನಲ್ಲಿ ರಿಲೀಸ್ ಮಾಡಲಾಗಿದೆ. ನಟಿ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕಿಲ್ಲರ್' ಚಿತ್ರವನ್ನು ಜ್ಯೋತಿ ಪತ್ನಿ ಸುಕು ಪೂರ್ವಜ್ ಅವರೇ ನಿರ್ದೇಶನ ಮಾಡಿದ್ದಾರೆ. ನಟಿ ಜ್ಯೋತಿ ರೈ ಹಾಟ್ ಆಗಿ ನಟಿಸಿದ್ದು, ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. ಚಿತ್ರಕ್ಕೆ ಸೂಪರ್ ಶೀ ಎಂಬ ಟ್ಯಾಗ್‌ಲೈನ್ ಕೂಡ ಇದೆ. ವೀಡಿಯೋ ಆರಂಭವಾಗುತ್ತಲೇ ಸಿನಿಮಾ ಕಥೆಯ ಎಳೆ ಬಿಚ್ಚಿಡಲಾಗಿದೆ.
ಸಿನಿಮಾ ಕಥೆ ಹೇಳಿದ ವೀಡಿಯೋ
ಪ್ರಾಚೀನ ಕಾಲದಲ್ಲಿ ವೈಮಾನಿಕ ಎಂಬ ಶಾಸ್ತ್ರದಲ್ಲಿ ಮಾನವ ನಿರ್ಮಿತ ಯಂತ್ರಗಳು ಕೇವಲ ಕಾಲ್ಪನಿಕ ಎನ್ನುವ ಕತೆಗಳನ್ನು ಹೇಳಲಾಗುತ್ತಿತ್ತು. ಮಿಷಿನ್‌ಗಳಿಗೂ ಆತ್ಮವಿದೆ ಎಂಬ ಕತೆ ಹೀಗಾಗಬಹುದು ಎಂದು ಕಥೆ ಕೇಳಿದ್ದೆವು. ಈಗ ಅದೇ ನಿಜವಾಗುವ ಸಮಯ ಬಂದಿದೆ ಎಂದು ಟೀಸರ್ ಆರಂಭವಾಗುತ್ತದೆ. ಇದರಲ್ಲಿ ಪೂರ್ವಜ್, ಹಾಗೂ ಜ್ಯೋತಿ ತೋರಿಸಲಾಗಿದೆ. ಜೊತೆಗೆ ಒಂದು ರೊಬೋಟ್ ಕೂಡ ಇದೆ. ರೈ ಒಬ್ಬಳು ಸಾಮಾನ್ಯ ವ್ಯಕ್ತಿ. ಆದರೆ ಅಸಾಧಾರಣವಾಗಿ ಬದಲಾಗುತ್ತಾಳಾ. ಆಕೆ ಡಿ-ಬೌಂಡ್‌ನಿಂದ ಬಳಲುತ್ತಿದ್ದು, ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ. ಹಾಗೊಂದು ವೇಳೆ ಚೇತರಿಸಿಕೊಂಡರೆ ಇದು ಅವಳಿಗೆ ಪುನರ್ ಜನ್ಮ. ಹಾಗೇನಾದರೂ ಹಿಂದಿರುಗಿ ಬಂದರೆ ಅವಳ ಎದುರು ಯಾರೂ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ರೊಬೋಟ್ ಅವತಾರದಲ್ಲಿ ಜ್ಯೋತಿ
ಇನ್ನು ಜ್ಯೋತಿ ಅವರು ಮಿಸ್ಟರೀಸ್ ಆಫೆನ್ ಡೇಂಜರಸ್ ಎಂದಿದ್ದು. ಇದು ಕೇವಲ ಆರಂಭ ಮಾತ್ರವೇ ಎಂದು ಕೊನೆಯಲ್ಲಿ ಹೇಳಲಾಗಿದ್ದು, ವೀಡಿಯೋ ಸೂಪರ್ ಆಗಿ ಮೂಡಿ ಬಂದಿದೆ. ಜ್ಯೋತಿ ಇದರಲ್ಲಿ ರೈ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಅವಳೇ ಮುಂದೆ ರೋಬೋಟ್ ಮೂಲಕ ಮರು ಜೀವ ಪಡೆಯುತ್ತಾಳೆ. ಹಾಟ್ ಆಗಿರುವ ರೈ ಹೇಗೆ ವೈಲೆಂಟ್ ಆಗಿ ಮಾರ್ಪಾಡಾಗುತ್ತಾಳೆ. ರೊಬೋಟ್ ಆಗಿ ಮರು ಜೀವ ಪಡೆಯಲು ಕಾರಣವೇನು. ರೋಬೋಟ್‌ಗೆ ಯಾರ ಮೇಲೆ ಸೇಡು. ಯಾಕೆ ಹಲವರನ್ನು ಕೊಲ್ಲುತ್ತಾಳೆ ಎಂಬುದೇ ಸಿನಿಮಾದಲ್ಲಿನ ಕುತೂಹಲವಾಗಿದೆ. ಇನ್ನು ಈ ಸಿನಿಮಾದಲ್ಲಿ ಜ್ಯೋತಿ ರೈ ಅವರೊಂದಿಗೆ ಪೂರ್ವಜ್ ಕೂಡ ತೆರೆ ಹಂಚಿಕೊಂಡಿದ್ದಾರೆ. ಒಟ್ನಲ್ಲಿ 'ಕಿಲ್ಲರ್' ಚಿತ್ರ ವೀಡಿಯೋ ಅದ್ಭುತವಾಗಿ ಮೂಡಿ ಬಂದಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.


Click it and Unblock the Notifications











