ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದ ಪ್ರತಿಭೆ ಕರಿಶ್ಮಾ ಅಮೀನ್
ಕೋಸ್ಟಲ್‌ವುಡ್ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿದ ಕೆಲವು ನಟಿಯರಿದ್ದಾರೆ. ಅಂಥಹಾ ನಟಿಯರಲ್ಲಿ ಕರಿಷ್ಮಾ ಅಮೀನ್ ಸಹ ಒಬ್ಬರು. ಕೋಸ್ಟಲ್‌ವುಡ್‌ನಿಂದ ನಟನೆ ಆರಂಭದಿಸಿದ ಕರಿಶ್ಮಾ ಅಮೀನ್ ಈಗ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದಾರೆ. ಇಲ್ಲೇ ನೆಲೆಗೊಳ್ಳುವ ಉಮೇದಿನಲ್ಲಿದ್ದಾರೆ.
2015ರಲ್ಲಿ 'ಚಂಡಿಕೋರಿ' ಎಂಬ ತುಳು ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿ ನಟಿಯಾಗಿ ಕಾಣಿಸಿಕೊಂಡರು ಕರಿಶ್ಮಾ. ಬಳಿಕ 2020ರಲ್ಲಿ 'ಗಮ್ಜಾಲ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ನಂತರ ಜೀ ಕನ್ನಡದಲ್ಲಿ 'ನಾಗಿಣಿ' ಧಾರವಾಹಿಯಲ್ಲಿ ಪಾತ್ರಗಿಟ್ಟಿಸಿಕೊಂಡರು.
ರಿಷ್ಮಾ ಅಮೀನ್ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಇದೀಗ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ . ಕರೀಷ್ಮಾ ತುಳು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಕಾಲೇಜು ದಿನಗಳಲ್ಲಿ ಕಿರುಚಿತ್ರಗಳು ಮತ್ತು ನೃತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದರು ಬಳಿಕ ದೇವದಾಸ್ ಕಾಪಿಕಾಡ್ ನಿರ್ದೇಶನದ 'ಚಂಡಿಕೋರಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಆ ಸಿನಿಮಾ ಸೂಪರ್ ಹಿಟ್ ಆಯಿತು.

ಒಳ್ಳೆಯ ಹಾಡುಗಳು ಹಾಗೂ ಸಖತ್ ಕಾಮಿಡಿ ಇದ್ದ 'ಚಂಡಿಕೋರಿ' ಸಿನಿಮಾ ಉತ್ತಮ ಹಿಟ್ ಮಾಡಿತು. ಆ ಸಿನಿಮಾದ ಮೂಲಕ ಕರಿಶ್ಮಾ ಕೋಸ್ಟಲ್‌ವುಡ್‌ನಲ್ಲಿ ಜನಪ್ರಿಯಗೊಂಡರು. ಆ ಬಳಿಕ ಕಿರಣ್ ಎಂಬುವರೊಟ್ಟಿಗೆ ಮದುವೆಯಾದ ಕರಿಶ್ಮಾ ಮನರಂಜನಾ ಉದ್ಯಮದಿಂದ ಸ್ವಲ್ಪ ವಿರಾಮ ತೆಗೆದುಕೊಂಡರು. ಬಳಿಕ ಕರಿಶ್ಮಾ 'ನಾಗಿಣಿ' ಕನ್ನಡ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದರು. ಕರಿಶ್ಮಾ ಅನೇಕ ಟಾಕ್ ಶೋಗಳಲ್ಲಿ ಭಾಗವಹಿಸಿದ್ದಾರೆ ಹಾಗೆಯೇ ಜಾಹೀರಾತುಗಳಿಗಾಗಿ ಮಾಡೆಲಿಂಗ್ ಸಹ ಮಾಡಿದ್ದಾರೆ.

ಕರಿಶ್ಮಾ, ಇದೀಗ 'ಸೌಂಡ್ಸ್ ಆಂಡ್ ಲೈಟ್ಸ್' ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಮಾತ್ರವಲ್ಲ ಕನ್ನಡ ಕಿರುತೆರೆಯಲ್ಲಿಯೂ ಮಿಂಚಲು ಕರಿಶ್ಮಾ ತಯಾರಾಗಿದ್ದಾರೆ. 'ನಾಗಿಣಿ' ಧಾರಾವಾಹಿಯಲ್ಲಿ ಶೇಷನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.

ತುಳು ಸಿನಿಮಾರಂಗದಿಂದ ಕನ್ನಡ ಚಿತ್ರರಂಗ ಹಾಗೂ ಕುರಿತೆರೆಗೆ ಹಲವು ಅತ್ಯುತ್ತಮ ಪ್ರತಿಭೆಗಳು ಬಂದಿವೆ. ಅಂತೆಯೇ ಇದೀಗ ಕರಿಶ್ಮಾ ಸಹ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಅವರ ಪ್ರಯತ್ನಕ್ಕೆ ಗೆಲುವು ಸಿಗುತ್ತದೆಯಾ ಕಾದು ನೋಡಬೇಕು.


Click it and Unblock the Notifications











