ಹೊಸ ಮನೆ ಗೃಹ ಪ್ರವೇಶ ನೆರವೇರಿಸಿದ ಕಾರುಣ್ಯ ರಾಮ್!
ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಚೆಲುವೆ ಕಾರುಣ್ಯಾ ರಾಮ್ ಹೊಸ ಮನೆಯನ್ನು ಖರೀದಿಸಿದ್ದಾರೆ. ಇದರ ಗೃಹಪ್ರವೇಶವನ್ನು ಸಹ ನೆರವೇರಿಸಿದ್ದಾರೆ. ಮನೆಯ ಗೃಹ ಪ್ರವೇಶಕ್ಕೆ ಕಾರುಣ್ಯ ಅವರು, ಕಿರುತೆರೆ ಹಾಗೂ ಹಿರಿತೆರೆಯ ಸೆಲೆಬ್ರಿಟಿಗಳನ್ನು ಕರೆದಿದ್ದರು. ಸ್ಟಾರ್‌ಗಳು ಬಂದು ಕಾರುಣ್ಯ ಅವರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ವಜ್ರಕಾಯ ಸಿನಿಮಾ ಮೂಲಕ ಜನಪ್ರಿಯತೆಯನ್ನು ಪಡೆದ ನಟಿ ಕಾರುಣ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ನಟಿಯಾಗಬೇಕು ಎಂದು ಕನಸನ್ನು ಹೊತ್ತುಕೊಂಡು ಕಾರುಣ್ಯ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಂಡರು.
ಕಾರುಣ್ಯಗೆ ಹಲವು ಆಸೆಗಳಿದ್ದು, ಒಂದೊಂದೇ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಅಪ್ಪ-ಅಮ್ಮ ಹಾಗೂ ತಂಗಿಯ ಜೊತೆಗೆ ಸ್ವಂತ ಕಾರಿನಲ್ಲಿ ಓಡಾಡುವ ಆಸೆ ಇಟ್ಟುಕೊಂಡಿದ್ದ ಕಾರುಣ್ಯಾ ಕಳೆದ ವರ್ಷ ಕಾರನ್ನು ಖರೀದಿಸಿದ್ದರು. ಇದೀಗ ಮನೆಯನ್ನು ಖರೀದಿಸಿದ್ದು ಇದರ ಗೃಹ ಪ್ರವೇಶವನ್ನೂ ಮಾಡಿ ಮುಗಿಸಿದ್ದಾರೆ.

ನಟನೆಯ ಜೊತೆಗೆ ಉದ್ಯಮಿ ಆಗುವ ಆಸೆ!
ನಟಿ ಕಾರುಣ್ಯಗೆ ನಟನೆಯ ಜೊತೆಗೆ ಉದ್ಯಮಿ ಆಗುವ ಆಸೆಯೂ ಇದೆಯಂತೆ. ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು. ನಟಿಯಾಗಿದ್ದುಕೊಂಡು ಜೀವನ ಪೂರ್ತಿ ಕಲಿಯುವ ಆಸೆ ಎಂದು ಹೇಳಿದ್ದ ಕಾರುಣ್ಯ, ಸಿನಿಮಾ ಹೊರತಾಗಿ ತಮ್ಮನ್ನು ತಾವು ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡುತ್ತಿರುವ ಕಾರುಣ್ಯ ತಮ್ಮದೇ ಆದ ಸಂಸ್ಕಾರ ಟ್ರಸ್ಟ್ ಹೆಸರಿನಲ್ಲಿ ಎನ್ ಜಿಓ ಒಂದನ್ನು ಶುರು ಮಾಡಿದ್ದಾರೆ. ಇದರ ಮೂಲಕ ಕೊರೊನಾ ಸಂದರ್ಭದಲ್ಲೂ ಹಲವರಿಗೆ ಸಹಾಯ ಮಾಡಿದ್ದರು. ಅಲ್ಲದೇ ಕಳೆದ ವರ್ಷ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ 14 ಇಂಚಿನ ತಲೆ ಕೂದಲನ್ನು ದಾನ ಮಾಡಿದ್ದರು.

ಕಾರುಣ್ಯ ನಟನೆಯ ಸಿನಿಮಾಗಳು!
ಕಾರುಣ್ಯಾ ರಾಮ್ ಹಲವು ಚಿತ್ರಗಳಲ್ಲಿ ನಟಿಸಿದ್ದು, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟನೆಯ 'ವಜ್ರಕಾಯ' ಚಿತ್ರದ ಹೆಸರನ್ನು ತಂದುಕೊಟ್ಟಿತು. 'ಎರಡು ಕನಸು', 'ಕಿರಗೂರಿನ ಗಯ್ಯಾಳಿಗಳು', 'ಮನೆ ಮಾರಾಟಕ್ಕಿದೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾರುಣ್ಯಾ ರಾಮ್ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ 'ರೆಮೋ' ಹಾಗೂ 'ಪೆಟ್ರೋಮ್ಯಾಕ್ಸ್' ಸಿನಿಮಾಗಳಲ್ಲಿ ಕಾರುಣ್ಯ ಅವರು ಬ್ಯುಸಿಯಾಗಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾರುಣ್ಯಾಗೆ 2.4 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.

ಕಿರುತೆರೆಯಲ್ಲೂ ಸಕ್ರಿಯರಾಗಿರುವ ಕಾರುಣ್ಯಾ!
ಕಾರುಣ್ಯ ರಾಮ್ ಬೆಳ್ಳಿಪರದೆ ಜೊತೆಗೆ ಕಿರುತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಬಿಗ್ ಬಾಸ್ ಸೀಸನ್ 4 ರಲ್ಲಿ ಕಾರುಣ್ಯಾ ಭಾಗವಹಿಸಿದ್ದರು. ಅದಲ್ಲದೇ, ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. 2019ರಲ್ಲಿ ತಕಧಿಮಿತಾ ಶೋನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. ಇದೇ ವರ್ಷ ಬೆಸ್ಟ್ ಆಕ್ಟರ್ ವಿಭಾಗದಲ್ಲಿ ಸೈಮಾ ಅವಾರ್ಡ್ ಕೂಡ ಪಡೆದಿದ್ದರು. ಇನ್ನು 'ಕುಕ್ ವಿಥ್ ಕಿರಿಕ್ಕು' ಕಾರ್ಯಕ್ರಮದಲ್ಲೂ ಕಾರುಣ್ಯಾ ಭಾಗವಹಿಸಿದ್ದರು.
ಮನೆ ಕಟ್ಟಿದ ನಟಿ ಕಾರುಣ್ಯ!
ಕಾರುಣ್ಯಗೆ ಹಲವು ಆಸೆಗಳಿದ್ದು, ಒಂದೊಂದೇ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಅಪ್ಪ-ಅಮ್ಮ ಹಾಗೂ ತಂಗಿಯ ಜೊತೆಗೆ ಸ್ವಂತ ಕಾರಿನಲ್ಲಿ ಓಡಾಡುವ ಆಸೆ ಇಟ್ಟುಕೊಂಡಿದ್ದ ಕಾರುಣ್ಯ ಕಳೆದ ವರ್ಷ ಕಾರನ್ನು ಖರೀದಿಸಿದ್ದರು. ಇದೀಗ ಮನೆಯನ್ನು ಖರೀದಿಸಿದ್ದು, ಅದರ ಗೃಹ ಪ್ರವೇಶವನ್ನೂ ಮಾಡಿದ್ದಾರೆ. ಗೃಹ ಪ್ರವೇಶಕ್ಕೆ 'ನೆನಪಿರಲಿ' ಪ್ರೇಮ್ ದಂಪತಿ, ಉಪೇಂದ್ರ, ನಿರಂಜನ್ ಸುಧೀಂದ್ರ, ಜಗದೀಶ್ ಆರ್ ಚಂದ್ರ, ಸ್ವಾತಿ ಶರ್ಮಾ, ಪ್ರಿಯಾಂಕಾ, ತೇಜಸ್ವಿನಿ ಪ್ರಕಾಶ್ ಮುಂತಾದವರು ಆಗಮಿಸಿದ್ದರು. ಇನ್ನು ಕಾರುಣ್ಯಗೆ ಪಕ್ಕಾ ನಾಟಿ ಸ್ಟೈಲ್ ಎಂದರೆ ಇಷ್ಟವಂತೆ. ಚಿಕನ್ ಫ್ರೈ, ಚಿಲ್ಲಿಚಿಕನ್, ಮಟನ್ ಚಾಫ್ಸ್, ಚಿಕನ್ ಕಬಾಬ್ ಮುಂತಾದ ನಾನ್ವೆಜ್ ಅಡುಗೆಗಳನ್ನು ತುಂಬಾ ಇಷ್ಟಪಡುತ್ತಾರಂತೆ. ಮನೆಯಲ್ಲೂ ವೆಜ್‌ಗಿಂತ ಹೆಚ್ಚು ನಾನ್ ವೆಜ್ ಆಹಾರಗಳನ್ನೇ ತಯಾರಿಸುತ್ತಾರಂತೆ. ಇನ್ನು ಕಾರುಣ್ಯಗೆ ಚಿಕನ್ ಕಬಾಬ್, ಚಿಲ್ಲಿಚಿಕನ್, ಗ್ರೀನ್ ಟೀ, ಚಿಕನ್ ಕರಿ ಮಾಡುವುದರಲ್ಲಿ ಎಕ್ಸ್‌ಪರ್ಟ್.


Click it and Unblock the Notifications











