Karunya Ram: ತಮ್ಮ ಹುಟ್ಟುಹಬ್ಬಕ್ಕೆ ನಟಿ ಕಾರುಣ್ಯ ರಾಮ್ ಏನ್ಮಾಡಿದ್ದಾರೆ ಗೊತ್ತಾ..?
'ವಜ್ರಕಾಯ' ಸಿನಿಮಾ ಮೂಲಕ ಜನಪ್ರಿಯತೆಯನ್ನು ಪಡೆದ ನಟಿ ಕಾರುಣ್ಯ ಅವರು ಬಿಗ್ ಬಾಸ್ ಸೀಸನ್- 4ರಲ್ಲಿ ಭಾಗವಹಿಸುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ನಟಿಯಾಗಬೇಕು ಎಂದು ಕನಸನ್ನು ಹೊತ್ತುಕೊಂಡು ಕಾರುಣ್ಯ ಅವರು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಂಡರು. ಸದ್ಯ ಸಮಾಜ ಸೇವೆಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಕಾರುಣ್ಯ ಅವರು ಹೆಚ್ಚು ಸಿನಿಮಾಗಳನ್ನು ಮಾಡದಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಶೂಟ್‌ಗಳನ್ನು ಮಾಡಿಸುತ್ತಿರುತ್ತಾರೆ.

ಸಮಾಜ ಸೇವೆಯಲ್ಲಿ ಬ್ಯುಸಿ
ನಟಿ ಕಾರುಣ್ಯಗೆ ನಟನೆಯ ಜೊತೆಗೆ ಉದ್ಯಮಿ ಆಗುವ ಆಸೆಯೂ ಇದೆಯಂತೆ. ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು. ನಟಿಯಾಗಿದ್ದುಕೊಂಡು ಜೀವನ ಪೂರ್ತಿ ಕಲಿಯುವ ಆಸೆ ಎಂದು ಹೇಳಿದ್ದ ಕಾರುಣ್ಯಾ, ಸಿನಿಮಾ ಹೊರತಾಗಿ ತಮ್ಮನ್ನು ತಾವು ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡುತ್ತಿರುವ ಕಾರುಣ್ಯ ಅವರು ತಮ್ಮದೇ ಆದ ಸಂಸ್ಕಾರ ಟ್ರಸ್ಟ್ ಹೆಸರಿನಲ್ಲಿ ಎನ್ ಜಿಓ ಒಂದನ್ನು ಶುರು ಮಾಡಿದ್ದಾರೆ. ಆ ಮೂಲಕ ಕೊರೋನಾ ಸಂದರ್ಭದಲ್ಲೂ ಹಲವರಿಗೆ ಸಹಾಯ ಮಾಡಿದ್ದರು. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ 14 ಇಂಚಿನ ತಲೆ ಕೂದಲನ್ನು ದಾನ ಮಾಡಿದ್ದರು.
ಉತ್ತಮ ಸಿನಿಮಾಗಳಲ್ಲಿ ನಟನೆ
ಕಾರುಣ್ಯಾ ರಾಮ್ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಟನೆಯ 'ವಜ್ರಕಾಯ' ಚಿತ್ರ ಹೆಸರನ್ನು ತಂದುಕೊಟ್ಟಿತು. 'ಎರಡು ಕನಸು', 'ಕಿರಗೂರಿನ ಗಯ್ಯಾಳಿಗಳು', 'ಮನೆ ಮಾರಾಟಕ್ಕಿದೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಾರುಣ್ಯಾಗೆ 2.7 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ವೆಸ್ಟರ್ನ್ ಮತ್ತು ಟ್ರೆಡಿಷನಲ್ ಆಗಿ ಫೊಟೋಶೂಟ್ ಮಾಡಿಸಿದ್ದರು. ಇದನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.

ಕಿರುತೆರೆಯಲ್ಲೂ ಮಿಂಚಿರುವ ನಟಿ
'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಪೆಟ್ರೋಮ್ಯಾಕ್ಸ್', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಮತ್ತೊಂದು ಮದುವೆನಾ' ಸೇರಿದಂತೆ ಪರಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಕಾರುಣ್ಯಾ ರಾಮ್ ಅವರು ಬೆಳ್ಳಿಪರದೆ ಜೊತೆಗೆ ಕಿರುತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಬಿಗ್ ಬಾಸ್ ಸೀಸನ್- 4ರಲ್ಲಿ ಕಾರುಣ್ಯಾ ಅವರು ಭಾಗವಹಿಸಿದ್ದರು. ಅದಲ್ಲದೇ, ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. 2019ರಲ್ಲಿ 'ತಕಧಿಮಿತಾ' ಶೋನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. ಇನ್ನು 'ಕುಕ್ ವಿಥ್ ಕಿರಿಕ್ಕು', 'ಕಿಕ್', 'ಸೂಪರ್ ಮಿನಿಟ್' ಕಾರ್ಯಕ್ರಮಗಳಲ್ಲೂ ಕಾರುಣ್ಯಾ ಅವರು ಕಾಣಿಸಿದ್ದರು.
ಬರ್ತ್‌ಡೇ ಸಂಭ್ರಮದಲ್ಲಿ ಕಾರುಣ್ಯ
ಕಾರುಣ್ಯ ಅವರಿಗೆ ಹಲವು ಆಸೆಗಳಿದ್ದು, ಒಂದೊಂದೇ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಅಪ್ಪ-ಅಮ್ಮ ಹಾಗೂ ತಂಗಿಯ ಜೊತೆಗೆ ಸ್ವಂತ ಕಾರಿನಲ್ಲಿ ಓಡಾಡುವ ಆಸೆ ಇಟ್ಟುಕೊಂಡಿದ್ದ ಕಾರುಣ್ಯಾ ಅವರು ಎರಡು ವರ್ಷಗಳ ಹಿಂದೆ ಕಾರನ್ನು ಖರೀದಿಸಿದ್ದರು. ಕಲೆದ ವರ್ಷ ಸ್ವಂತ ಮನೆಯನ್ನೂ ಖರೀದಿಸಿ ಸಂಭ್ರಮಿಸಿದ್ದರು. ಇನ್ನು 'ಮನೆ ಮಾರಟಕ್ಕಿದೆ' ಚಿತ್ರಕ್ಕೆ ಬೆಸ್ಟ್ ಆಕ್ಟರ್ ಎಂದು ಸೈಮಾ ಅವಾರ್ಡ್ ಕೂಡ ಪಡೆದಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಚೆಲುವೆಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ನಟ-ನಟಿಯರು ವಿಶ್ ಮಾಡಿದ್ದಾರೆ. ಕಾರುಣ್ಯ ಅವರು ತಮ್ಮ ಹುಟ್ಟುಹಬ್ಬ ಹಿನ್ನೆಲೆ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ಗಿಫ್ಟ್ ಮಾಡಿದ್ದಾರೆ.


Click it and Unblock the Notifications











