ಪರಬಾಷೆಯಲ್ಲಿ ಮಿಂಚಲು ರೆಡಿಯಾದ ಕೌಸ್ತುಭ ಮಣಿ
ಕನ್ನಡದ ನಟ ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ. ಇದೀಗ ಕನ್ನಡದ ಮತ್ತಿಬ್ಬರು ನಟಿಯರು ತೆಲುಗು ಪ್ರೇಕ್ಷಕರನ್ನ ರಂಜಿಸೋಕೆ ಸಿದ್ಧರಾಗಿದ್ದಾರೆ. ಹೌದು, ನಮ್ಮ ಕನ್ನಡದ ಮುದ್ದು ಮುಖದ ಚೆಲುವೆಯರು ಟಾಲಿವುಡ್ ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ಇದೇ ನಟಿ ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ 'ರಾಮಾಚಾರಿ 2.0' ಚಿತ್ರಕ್ಕೆ ಇಂಚರ ಖ್ಯಾತಿಯ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
'ರಾಮಾಚಾರಿ 2.0' ಚಿತ್ರದಲ್ಲಿ ಮಾರ್ಗರೇಟ್ ಪಾತ್ರಕ್ಕೆ ಕೌಸ್ತುಭ ಮಣಿ ಜೀವ ತುಂಬಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಹರಿದಾಡುತ್ತಿದೆ. ಕೌಸ್ತುಭ ಅವರ ಬೆಳವಣಿಗೆ ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ರು. ಇದೀಗ ಕೌಸ್ತುಭ ಮಣಿ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಸುದ್ದಿ ಅಭಿಮಾನಿಗಳಿಗೆ ಇನ್ನೂ ಖುಷಿ ನೀಡಿದೆ.
ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಅವರಿಗೆ ನಟಿಯಾಗಬೇಕು ಎಂಬ ಕನಸು, ಆಸೆ ಇರಲಿಲ್ಲ. ಮಾನ್ವಿತಾ ಕಾಮತ್ ಅವರ ಕೃಪೆಯಿಂದ ಆಕಸ್ಮಿಕವಾಗಿ ಕೌಸ್ತುಭ ಮಣಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಫ್ಯಾಶನ್ ಶೋವೊಂದರಲ್ಲಿ ನಟಿ ಕೌಸ್ತುಭ ಮಣಿ ಅವರನ್ನು ಭೇಟಿ ಮಾಡಿದ ಮಾನ್ವಿತಾ ಕಾಮತ್ ಧಾರಾವಾಹಿಯ ತಂಡಕ್ಕೆ ಪರಿಚಯಿಸಿದರು. ಆಡಿಷನ್‌ನಲ್ಲಿ ಪಾಸ್ ಆದ ಕೌಸ್ತುಭ ಮಣಿ ನನ್ನರಸಿ ರಾಧೆ ಧಾರಾವಾಹಿಗೆ ಸೆಲೆಕ್ಟ್ ಆದರು.

'ನನ್ನರಸಿ ರಾಧೆ'ಯ ಇಂಚರಾ ಪಾತ್ರಧಾರಿ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ನನ್ನರಸಿ ರಾಧೆ ಕೂಡ ಒಂದು. ನನ್ನರಸಿ ರಾಧೆ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವವರು ನಟಿ ಕೌಸ್ತುಭ ಮಣಿ. ಇದೀಗ ಇದೇ ನಟಿ ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಬೆಳ್ಳಿತೆರೆ ಮೇಲು ತಮ್ಮ ಛಾಪು ಮೂಡಿಸಲು ಕೌಸ್ತುಭ ಮಣಿ ಸಜ್ಜಾಗಿದ್ದಾರೆ. ಅಸಲಿಗೆ, ನಟಿ ಕೌಸ್ತುಭ ಮಣಿಗೆ ನಟಿಯಾಗಬೇಕು ಎಂಬ ಆಸೆ, ಕನಸು ಇರಲಿಲ್ಲ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು.

ಮಾನ್ವಿತಾ ಕಾಮತ್‌ರಿಂದ ಧಾರಾವಾಹಿ ಅವಕಾಶ
ನಟಿ ಮಾನ್ವಿತಾ ಕಾಮತ್ ಅವರ ಕೃಪೆಯಿಂದ ಬಣ್ಣದ ಪ್ರಪಂಚಕ್ಕೆ ಕೌಸ್ತುಭ ಮಣಿ ಕಾಲಿಟ್ಟರು. ಅಷ್ಟಕ್ಕೂ, ಫ್ಯಾಶನ್ ಶೋವೊಂದರಲ್ಲಿ ನಟಿ ಕೌಸ್ತುಭ ಮಣಿ ಅವರನ್ನ ಮಾನ್ವಿತಾ ಕಾಮತ್ ಭೇಟಿ ಮಾಡಿದರು. ಬಳಿಕ ಅವರನ್ನ ಧಾರಾವಾಹಿಯ ತಂಡಕ್ಕೆ ನಟಿ ಮಾನ್ವಿತಾ ಕಾಮತ್ ಪರಿಚಯಿಸಿದರು. ನನ್ನರಸಿ ರಾಧೆ ಧಾರಾವಾಹಿಯ ಲುಕ್ ಟೆಸ್ಟ್ ಮತ್ತು ಆಡಿಷನ್‌ನಲ್ಲಿ ಪಾಸ್ ಆದ ಕೌಸ್ತುಭ ಮಣಿ ಕಿರುತೆರೆ ಲೋಕಕ್ಕೆ ಕಾಲಿಟ್ಟೇ ಬಿಟ್ಟರು.

'ಕೋಡಲು ಮೀಕು ಜೋಹಾರ್ಲು'
ನಟಿ ಕೌಸ್ತುಭ ಮಣಿ ಇದೀಗ ತೆಲುಗು ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಮೊಟ್ಟ ಮೊದಲ ತೆಲುಗು ಸೀರಿಯಲ್ 'ಕೋಡಲು ಮೀಕು ಜೋಹರ್ಲು'ಗೆ ನಟಿ ಕೌಸ್ತುಭ ಮಣಿ ಸಹಿ ಹಾಕಿದ್ದಾರೆ. ಈಗಾಗಲೇ 'ಕೋಡಲು ಮೀಕು ಜೋಹರ್ಲು' ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದೆ. 'ಕೋಡಲು ಮೀಕು ಜೋಹರ್ಲು' ಧಾರಾವಾಹಿಯಲ್ಲೂ ನಟಿ ಕೌಸ್ತುಭ ಮಣಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಅಂದಹಾಗೆ, 'ಕೋಡಲು ಮೀಕು ಜೋಹರ್ಲು ಧಾರಾವಾಹಿ ಅತೀ ಶೀಘ್ರದಲ್ಲೇ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಉತ್ಸಾಹದಿಂದ ಎದುರು ನೋಡುತ್ತಿರುವ ಕೌಸ್ತುಭ ಮಣಿ
ಇನ್ನು ಕೌಸ್ತುಭ ಮಣಿ ಕೂಡ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಪಾತ್ರದ ಬಗ್ಗೆ ತುಂಬಾ ಎಕ್ಸೈಟ್‌ಮೆಂಟ್ ಇದೆ. ಅದರ ಜೊತೆಗೆ ಅಷ್ಟೇ ಭಯ ಕೂಡ ಇದೆ. ಕನ್ನಡದ ಜನ ನನ್ನ ಹರಸಿ ಬೆಳೆಸಿದ್ದಾರೆ. ಅದೇ ಪ್ರೀತಿ ಮುಂದೆ ಕೂಡ ಸಿಗಲಿ ಅನ್ನೋದು ನನ್ನ ಆಶಯ ಎಂದಿದ್ದಾರೆ ನಟಿ . ಒಟ್ಟಿನಲ್ಲಿ ಕನ್ನಡದ ನಟಿಯರು ಒಂದೇ ಧಾರಾವಾಹಿಯಲ್ಲಿ ಮಿಂಚೋಕೆ ರೆಡಿಯಾಗಿರೋದು ಪ್ರೇಕ್ಷಕರಿಗೆ ಸಂತಸ ತಂದಿದೆ. ತೆಲುಗು ನಾಡಿನಲ್ಲಿ ಕನ್ನಡಿಗರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುದು ಪ್ರತಿಯೊಬ್ಬರ ಹಾರೈಕೆಯಾಗಿದೆ


Click it and Unblock the Notifications











