ಕಿರುತೆರೆಯಿಂದ ದೂರವಿದ್ರೂ ಕ್ರೇಜ್ ಏನಂತೀರಾ? ನಟಿಯ ಉಡುಗೆಯನ್ನು ಕಾಪಿ ಹೊಡೆದ ಲೇಡೀಸ್
ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಹಾಗೂ ನಟರ ಲುಕ್ ಅನ್ನು ರೀ-ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ. ಇದು ಹೊಸದೇನೂ ಅಲ್ಲ.
ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಭಾರತಿ, ಕಲ್ಪನಾ, ಮಂಜುಳ, ಆರತಿ, ಶೃತಿ, ಸೌಂದರ್ಯ ಹೀಗೆ ಸಾಕಷ್ಟು ನಟ-ನಟಿಯರ ಲುಕ್‌ಗಳನ್ನು ಕಾಪಿ ಮಾಡಿದ್ದಾರೆ.

ಆಗೆಲ್ಲಾ ಯಾವುದಾದರೂ ಸಿನಿಮಾ ರಿಲೀಸ್ ಆದರೆ, ಅವರಂತೆಯೇ ಡ್ರೆಸ್‌ಗಳನ್ನು ಖರೀದಿಸಿ ತೊಟ್ಟುಕೊಳ್ಳುತ್ತಿದ್ದರು. ಇದು ಈಗಲೂ ನಿಂತಿಲ್ಲ. ಇಂದಿಗೂ ಅಭಿಮಾನಿಗಳು ತಮ್ಮಿಷ್ಟದ ನಟ-ನಟಿಯರಂತೆ ರೆಡಿಯಾಗಲು ಬಯಸುತ್ತಾರೆ.
ನೆಚ್ಚಿನ ಕಲಾವಿದರ ಲುಕ್ಸ್ ರಿ-ಕ್ರಿಯೇಟ್
ಇನ್ನು ಹೆಣ್ಣು ಮಕ್ಕಳ ಬಗ್ಗೆಯಂತೂ ಹೇಳುವುದೇ ಬೇಡ. ಯಾವುದೇ ಸಿನಿಮಾ, ಧಾರಾವಾಹಿ ಅಥವಾ ಕಾರ್ಯಕ್ರಮಗಳಲ್ಲಿ ನಟಿಯರು ಧರಿಸಿದ ಬಟ್ಟೆ, ಹೇರ್ ಸ್ಟೈಲ್, ಬ್ಯಾಗ್ ಹಾಗೂ ಒಡವೆಗಳನ್ನು ನೋಡಿ ಇಷ್ಟಪಟ್ಟು ತಾವೂ ಅದೇ ರೀತಿ ಸ್ಟಿಚ್ ಮಾಡಿಸಿಕೊಂಡು ಧರಿಸುತ್ತಾರೆ. ಇನ್ನು ಈಗಂತೂ ಈ ಟ್ರೆಂಡ್ ಸದಾ ಇದ್ದೇ ಇರುತ್ತದೆ. ಅದರಲ್ಲೂ ಕೆಲ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವವರು ರೀಲ್ಸ್ ಮಾಡಲೆಂದೇ ಕೆಲ ಉಡುಗೆಯನ್ನು ಧರಿಸಿ, ಸೀನ್ ಅಥವಾ ಹಾಡುಗಳಿಗೆ ಹೆಜ್ಜೆ ಹಾಕಿ ರಿ-ಕ್ರಿಯೇಟ್ ಮಾಡುತ್ತಿರುತ್ತಾರೆ. 'ಅರುಂಧತಿ', 'ನಾಗವಲ್ಲಿ', 'ಗಂಗೂಭಾಯಿ ಕಥಿಯಾವಾಡಿ' ಸೇರಿದಂತೆ ಹಲವು ಲುಕ್ ಮತ್ತು ಸಿನಿಮಾಗಳಲ್ಲಿ ನಟಿಯರು ಧರಿಸಿದ ಒಡವೆಗಳ ಡಿಸೈನ್ ಅನ್ನು ರಿ-ಕ್ರಿಯೇಟ್ ಮಾಡಿರುವ ಉದಾಹರಣಗಳು ಬಹಳಷ್ಟಿವೆ.
ನಟಿಯರಂತೆ ರೆಡಿಯಾಗುವ ಹುಡುಗಿಯರು
ಈಗಾಗಲೇ ಸಾಕಷ್ಟು ನಟಿಯರು ಧಾರಾವಾಹಿಯಿಂದ ದೂರಾಗಿದ್ದಾರೆ. ಅಲ್ಲೊಂದು ಇಲ್ಲೊಂದು ಪಾತ್ರದಲ್ಲಿ ಕಾಣಿಸಿಕೊಂಡು ತೆರೆಮೇಲೆ ಕಾಣಿಸುತ್ತಿಲ್ಲ ಎಂದರೆ ಅಂತಹ ನಟಿಯರನ್ನು ವೀಕ್ಷಕರು ಮರೆಯುತ್ತಾರೆ ಎಂದು ಹಲವರು ನಂಬಿದ್ದಾರೆ. ಆದರೆ, ಈಗಿನ ಕಾಲದಲ್ಲಿ ಯಾವುದಾದರೂ ಒಂದು ಧಾರಾವಾಹಿಯಲ್ಲಿ ನಟಿಸಿ ಮರೆಯಾದವರನ್ನೂ ಕೂಡ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ನಟಿ ಶ್ವೇತಾ ಪ್ರಸಾದ್, ಅನಿಕಾ, ಕಾವ್ಯಾ ಗೌಡ, ಅಶ್ವಿನಿ, ಮಯೂರಿ, ಚಂದ್ರಕಲಾ, ಕವಿತಾ ಗೌಡ ಹೀಗೆ ಹಲವರು ಧಾರಾವಾಹಿಗಳಿಂದ ದೂರವೇ ಉಳಿದಿದ್ದಾರೆ. ಹಾಗಿದ್ದರೂ ಅಭಿಮಾನಿಗಳು ಇಂದಿಗೂ ಇವರ ಸೋಶಿಯಲ್ ಮೀಡಿಯಾ ಖಾತೆಯನ್ನು ರೆಗ್ಯುಲರ್ ಆಗಿ ಫಾಲೋ ಮಾಡುತ್ತಿರುತ್ತಾರೆ. ಇವರ ಪ್ರತಿಯೊಂದು ಅಪ್ ಡೇಟ್ಸ್ ಅನ್ನು ತಿಳಿದುಕೊಳ್ಳುತ್ತಲೇ ಇರುತ್ತಾರೆ.

ನಟಿ ಕಾವ್ಯಾ ಗೌಡ ಉಡುಗೆಗಳಲ್ಲಿ ಫ್ಯಾನ್ಸ್
ಇದೀಗ ವಿಷಯ ಏನಪ್ಪಾ ಅಂದರೆ, ನಟಿ ಕಾವ್ಯಾ ಗೌಡ ಅವರು ಕಿರುತೆರೆಯಿಂದ ದೂರಾಗಿ ವರುಷಗಳೇ ಕಳೆದಿದ್ದರೂ ಅವರನ್ನು ಫಾಲೋ ಮಾಡುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಅಲ್ಲದೇ, ಕಾವ್ಯಾ ಗೌಡ ಅವರ ಲುಕ್ ಅನ್ನು ಇಷ್ಟಪಟ್ಟು ತಮ್ಮ ಮನೆಯ ಸಮಾರಂಭಗಳಿಗೆ ಅದೇ ರೀತಿಯಲ್ಲಿ ಸೀರೆಯನ್ನು ಉಡುತ್ತಾರೆ. ಈ ಬಗ್ಗೆ ಸ್ವತಃ ಅಭಿಮಾನಿಗಳೇ ಕಾವ್ಯಾ ಗೌಡ ಅವರಿಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ ಕೂಡ. ನೀವು ರೆಡಿಯಾಗುವ ರೀತಿ ನಮಗೆ ಖುಷಿ ಕೊಡುತ್ತದೆ ಎಂದು ಹೇಳಿ ಅದೇ ರೀತಿಯಲ್ಲಿ ಬಟ್ಟೆಯನ್ನು ಸ್ಟಿಚ್ ಮಾಡಿಸಿಕೊಂಡಿದ್ದಾರೆ.
ಅಭಿಮಾನಿಗಳ ಫೋಟೋ ಹಂಚಿಕೊಂಡ ನಟಿ
ಇದರ ಫೋಟೋಗಳನ್ನು ಕಾವ್ಯಾ ಗೌಡ ಅವರಿಗೆ ಅಭಿಮಾನಿಗಳು ಶೇರ್ ಮಾಡಿ ಖುಷಿಪಟ್ಟಿದ್ದಾರೆ. ಈ ಫೋಟೋಗಳನ್ನು ನಟಿ ಕಾವ್ಯಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ, ಅಭಿಮಾನಿಗಳು ಬರೆದ ಸಾಲುಗಳನ್ನು ಕೂಡ ಶೇರ್ ಮಾಡಿದ್ದಾರೆ. ಕಾವ್ಯಾ ಗೌಡ ಅವರ ರೀತಿಯಲ್ಲಿ ಸೀರೆಯನ್ನು ಖರೀದಿಸಿ, ಅದೇ ರೀತಿಯಲ್ಲಿ ಸಿದ್ಧರಾಗಿರುವ ಅಭಿಮಾನಿಗಳ ಫೊಟೋಗಳು ಈಗ ಕಾವ್ಯಾ ಗೌಡ ಅವರ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ.


Click it and Unblock the Notifications











