ನಟನೆಯಿಂದ ದೂರ.. ಫ್ಯಾಮಿಲಿನೇ ಎಲ್ಲ: ಮಗಳೊಂದಿಗೆ ನಟಿ ಕಾವ್ಯಾ ಗೌಡ ಕ್ವಾಲಿಟಿ ಟೈಮ್

By ಅನಿತಾ ಬನಾರಿ

ನಟಿ ಕಾವ್ಯಾ ಗೌಡ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯ. 'ಗಾಂಧಾರಿ', 'ರಾಧಾ ರಮಣ' ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಕಾವ್ಯಾ ಗೌಡ ತಮ್ಮ ನಟನೆ ಮೂಲಕ ಬಹಳಷ್ಟು ಹೆಸರು ಮಾಡಿದ್ದಾರೆ. 'ಗಾಂಧಾರಿ' ಧಾರಾವಾಹಿಯಲ್ಲಿ ಅವಳಿ ಪಾತ್ರವನ್ನು ಮಾಡಿದ್ದ ನೆನಪಿರಬಹುದು. ಮುಂದೆ 'ರಾಧಾ ರಮಣ' ಎಂಬ ಬಹಳ ಜನಪ್ರಿಯ ಧಾರಾವಾಹಿಯಲ್ಲೂ ಆರಾಧನಾ ಪಾತ್ರವನ್ನು ಮಾಡಿದ್ದರು.

'ರಾಧಾ ರಮಣ' ಧಾರಾವಾಹಿಯ ನಂತರ ಮತ್ತೆ ಕಿರುತೆರೆಯಲ್ಲಿ ಅಷ್ಟೇನೂ ಕಾಣಿಸಿಕೊಳ್ಳದ ನಟಿ ಕಾವ್ಯಾ ಗೌಡ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2021ರಲ್ಲಿ ಬಿಸಿನೆಸ್ ಮ್ಯಾನ್ ಸೋಮಶೇಖರ್ ಎಂಬುವವರನ್ನು ಮದುವೆಯಾದರು. 2024ರಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಇವರು ತಮ್ಮ ಮಗಳಿಗೆ ಸಿಯಾ ಎಂದು ಹೆಸರಿಟ್ಟಿದ್ದಾರೆ.

Actress Kavya Gowda is spending quality time with her daughter

ವಿಶೇಷವೆಂದರೆ, ಇವರ ಮಗು ಇದೇ ಜನವರಿ 22ರಂದು ಜನಿಸಿತು. ಅಂದರೆ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ದಿನವೇ ಮಗಳು ಹುಟ್ಟಿದ್ದರಿಂದ ಮಗಳಿಗೆ ಸಿಯಾ ಎಂದು ಹೆಸರಿಟ್ಟಿದ್ದಾರೆ.

ಇದೀಗ ತಮ್ಮ ಮುದ್ದಾದ ಮಗುವಿಗೆ ಎರಡು ತಿಂಗಳು ಕಳೆದಿದ್ದು, ಈ ಸಂಭ್ರಮವನ್ನು ನಟಿ ಕಾವ್ಯಾ ಗೌಡ ಆಚರಿಸಿಕೊಂಡಿದ್ದಾರೆ. ಮಗುವಿನೊಂದಿಗೆ ಹಾಗೂ ತಮ್ಮ ಪತಿ ಸೋಮಶೇಖರ್ ಅವರೊಂದಿಗೆ ಹಲವು ಫೋಟೋಶೂಟ್‌ಗಳನ್ನು ಕಾವ್ಯಾ ಗೌಡ ಮಾಡಿಸಿಕೊಂಡಿದ್ದಾರೆ. ಜೊತೆಗೆ ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಆನಿವರ್ಸರಿಯನ್ನು ಆಚರಿಸಿದ್ದಾರೆ.

Actress Kavya Gowda is spending quality time with her daughter

ಪುಟ್ಟದಾಗಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಜೊತೆಗೆ ಈ ಸಂಭ್ರಮಾಚರಣೆಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಕಾವ್ಯಾ ಗೌಡ ಹಂಚಿಕೊಂಡಿದ್ದಾರೆ. ಜೊತೆಗೆ ತನ್ನ ಅಕ್ಕನ ಮಗಳನ್ನು ಔಟಿಂಗ್‌ಗೆ ಕರೆದುಕೊಂಡು ಹೋಗಿದ್ದಾರೆ.

ಇತ್ತೀಚೆಗಷ್ಟೇ ಮುದ್ದಾದ ಮಗು ಸಿಯಾಗೆ ಅದ್ಧೂರಿಯಾಗಿ ತೊಟ್ಟಿಲಶಾಸ್ತ್ರ ನಡೆದಿತ್ತು. ಇದೀಗ ಎರಡು ತಿಂಗಳ ಸಂಭ್ರಮಾಚರಣೆಯು ನಡೆದಿದೆ. ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ತಮ್ಮ ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಮಗುವಿನ ತೊಟ್ಟಿಲ ಶಾಸ್ತ್ರಕ್ಕೆ ಕೆಂಪು ಸೀರೆಯನ್ನುಟ್ಟ ನಟಿ ಕಾವ್ಯಾ ಗೌಡ ಬಹಳ ಲಕ್ಷಣವಾಗಿ ಕಾಣಿಸುತ್ತಿದ್ದರು. ಇದೀಗ ನಟಿ ಕಾವ್ಯಾ ಗೌಡ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು, ಇದನ್ನು ಡಿಸೈನರ್ ನಿಧಿಕಾ ಶೇಖರ್ ಡಿಸೈನ್ ಮಾಡಿದ್ದಾರಂತೆ. ಸೀರೆಗೆ ಸರಿಯಾಗಿ ಡೈಮಂಡ್ ಕುಂದನ್ ನೆಕ್ಲೆಸ್ ಅನ್ನು ಹಾಕಿಕೊಂಡಿರುವ ನಟಿ ಕಾವ್ಯಾ ಗೌಡ ಬಹಳ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಹಾಗೂ ಫಾಲೋವರ್ಸ್ ಕಮೆಂಟ್ ಮೂಲಕ ತಿಳಿಸಿದ್ದಾರೆ. ಎಲ್ಲವೂ ಚೆನ್ನಾಗಿದೆ ಹಣೆಗೊಂದು ಬೊಟ್ಟಿದ್ದರೆ ಇನ್ನೂ ಚೆನ್ನಾಗಿತ್ತು ಎಂದು ಎಷ್ಟೋ ಜನ ಕಮೆಂಟ್‌ ಮಾಡಿದ್ದೂ ಇದೆ.

ಒಟ್ಟಿನಲ್ಲಿ, ಹೇಳುವುದಾದರೆ ಸದ್ಯಕ್ಕೆ ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ಸಂತೃಪ್ತಿಯಿಂದ ಇರುವ ನಟಿ ಕಾವ್ಯಾ ಗೌಡ ವೃತ್ತಿ ಜೀವನದ ಕಡೆಗೆ ಅಷ್ಟೇನು ಗಮನಕೊಟ್ಟಂತಿಲ್ಲ. ತಮ್ಮ ಪತಿ ಹಾಗೂ ಮಗುವಿನೊಂದಿಗಿನ ಹಲವಾರು ಫೋಟೋಗಳನ್ನು ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಶೇರ್ ಮಾಡಿದ್ದು, ನಟಿ ಕಾವ್ಯಾ ಗೌಡ ಅವರ ಪತಿ ಹಾಗೂ ಮಗು ಮೂವರು ಬಿಳಿ ವಸ್ತ್ರವನ್ನು ಧರಿಸಿದ್ದಾರೆ. ಹಿಂದೆ ಹಲವಾರು ಕೆಂಪು ಬಣ್ಣದ ಬಲೂನ್‌ಗಳನ್ನು ಡೆಕೋರೇಟ್‌ ಮಾಡಿರುವ ಫೋಟೋ ಬಹಳ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗು ಸಿಯಾಗೂ ಶುಭ ಹಾರೈಕೆಗಳನ್ನು ಹೇಳಿದ್ದಾರೆ.

More from Filmibeat

English summary
Actress Kavya Gowda spending time with her daughter Siya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X