ಇದೇ ಮೊದಲ ಬಾರಿಗೆ ಮಗಳ ಮುಖ ತೋರಿಸಿದ 'ರಾಧಾ ರಮಣ' ನಟಿ ಕಾವ್ಯಾ ಗೌಡ

By ಅನಿತಾ ಬನಾರಿ

'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ಆರಾಧನಾಳಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಟಿ ಕಾವ್ಯ ಗೌಡ. ಈ ಧಾರಾವಾಹಿ ನಂತರ ನಟನೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಮುಂದೆ ಸೋಮಶೇಖರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕಾವ್ಯಾ ಗೌಡ ಇದೇ ಜನವರಿಯಂದು ಮುದ್ದಾದ ಹೆಣ್ಣು ಮಗಳಿಗೆ ಜನ್ಮ ನೀಡಿದ್ದರು.

ಜನವರಿ 22 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾವ್ಯಾ ಗೌಡ ರಾಮಮಂದಿರ ಪ್ರತಿಷ್ಠಾಪನೆ ದಿನದಂದು ಮುದ್ದು ಕಂದಮ್ಮನನ್ನು ಬರಮಾಡಿಕೊಂಡಿದ್ದರು. ರಾಮಮಂದಿರದ ದಿನವೇ ತಮ್ಮ ಮನೆಗೆ ಮಗಳು ಆಗಮಿಸಿದ ಕಾರಣ ಮಗಳನ್ನು ಸಿಯಾ ಎಂದೇ ಕರೆಯುತ್ತಿದ್ದಾರೆ. ಸಿಯಾ ಎನ್ನುವುದು ಮಗಳ ನಿಕ್ ನೇಮ್ ಆಗಿದೆಯಾ ಅಥವಾ ಅದೇ ನಿಜವಾದ ಹೆಸರೋ ಎಂಬುದು ಇನ್ನು ಸ್ಪಷ್ಟವಾಗಬೇಕಿದೆ. ಅಂದ ಹಾಗೇ ಸಿಯಾ ಎಂದರೆ ಸೀತೆ ಎಂಬು ಅರ್ಥ ಕೊಡುತ್ತೆ. ಇದರ ಹೊರತಾಗಿ ಸುಂದರವಾದ ಹೂವು ಎಂಬ ಅರ್ಥವೂ ಇದಕ್ಕಿದೆ.

Actress Kavya Gowda revealed her daughter face for the first time

ವಿಷಯ ಏನಪ್ಪಾ ಅಂತ ಅಂದ್ರೆ ನಿನ್ನೆ ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ತಮ್ಮ ಮುದ್ದು ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ ಕಾವ್ಯಾ ಗೌಡ. ಹೌದು, ಮಗಳು ಹುಟ್ಟಿ ಬರೋಬ್ಬರಿ ಆರು ತಿಂಗಳ ನಂತರ ಮೊದಲ ಬಾರಿಗೆ ಮಗಳ ಮುಖವನ್ನು ಬಹಿರಂಗಗೊಳಿಸಿದ್ದಾರೆ ಕಾವ್ಯಾ ಗೌಡ.

ಜೊತೆಗೆ ಮಗಳ ವಿಡಿಯೋದ ತುಣುಕೊಂದನ್ನು ಕೂಡಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಾವ್ಯಾ ಗೌಡ "ವರಮಹಾಲಕ್ಷ್ಮಿ ಶುಭದಿನದಂದು ಮುದ್ದು ಮಗಳು ಸಿಯಾಳ ಮುಖವನ್ನು ಪರಿಚಯಿಸುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ "ಈ ಕಳೆದ 6 ತಿಂಗಳುಗಳು ಭಾವನಾತ್ಮಕ ರೋಲರ್ ಕೋಸ್ಟರ್ ಆಗಿದ್ದು, ಪ್ರೀತಿ, ಮುದ್ದು ಮತ್ತು ತಾಯ್ತನದ ಪ್ರಯಾಣವು ನಂಬಲಾಗದ ಸುಂದರ ಅನುಭವವನ್ನು ನೀಡಿದೆ" ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.

Actress Kavya Gowda revealed her daughter face for the first time

"ತಾಯಿಯಾಗುವುದು ನನ್ನ ಜೀವನದ ಅತ್ಯಂತ ಸುಂದರ ಅನುಭವವಾಗಿದೆ. ನಾನು ಸಿಯಾಳನ್ನು ನನ್ನ ತೋಳುಗಳಲ್ಲಿ ಹಿಡಿದಾಗ ಆದ ಅನುಭವವೂ ಯಾವತ್ತಿಗೂ ಮರೆಯಲಾರದು. ಸಿಯಾ ಹುಟ್ಟಿದ ಮೊದಲ ಕ್ಷಣದಿಂದ ಇಂದಿನವರೆಗೆ ಪ್ರತಿ ದಿನವೂ ಸಂತಸ ನೀಡಿದೆ" ಎಂದು ಆಕೆ ಬರೆದುಕೊಂಡಿದ್ದಾರೆ. ಕೊನೆಯಲ್ಲಿ "ಈ ಪ್ರಯಾಣದಲ್ಲಿ ನಮಗೆ ಬೆಂಬಲ ನೀಡಿದ ನಿಮ್ಮೆಲ್ಲರಿಗೂ, ನನ್ನ ಹೃದಯಂತರಾಳದ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವು ಸದಾ ಹೀಗಿರಲಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ನಟನೆಯಿಂದ ಬ್ರೇಕ್ ತೆಗೆದುಕೊಂಡು ಮುದ್ದು ಮಗಳು ಸಿಯಾಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಕಾವ್ಯಾ ಗೌಡ ಮತ್ತೆ ನಟನಾ ಲೋಕದ ನಂಟು ಬೆಳೆಸಿಕೊಳ್ಳುತ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Kavya Gowda revealed her daughter face on Varamahalakshmi day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X