For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್'ಗೆ ಹೋಗುವ ಬಗ್ಗೆ ಕಿರುತೆರೆಯ ಖ್ಯಾತ ನಟಿ ಕಾವ್ಯ ಗೌಡ ಹೇಳಿದ್ದೇನು?

  |

  ಬಿಗ್ ಬಾಸ್ ಸೀಸನ್ 8 ಕನ್ನಡ ರಿಯಾಲಿಟಿ ಶೋಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಬಿಗ್ ಬಾಸ್ ಪ್ರಾರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ಜೋರಾಗಿ ಕೇಳಿಬರುತ್ತಿದೆ.

  ಸಂಭಾವ್ಯ ಸ್ಪರ್ಧಿಗಳ ಹೆಸರುಗಳಲ್ಲಿ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಗೌಡ ಹೆಸರು ಕೇಳಿಬರುತ್ತಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಗೌಡ ಇರಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ. ಇದೇ ತಿಂಗಳು ಕೊನೆಯಲ್ಲಿ ಅಂದರೆ ಫೆಬ್ರವರಿ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಆಗಿ ಓಪನ್ ಆಗಲಿದೆ.

  'ನಿಮ್ಮ ಪ್ರೀತಿ ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಡಿ'- ನಟಿ ಕಾವ್ಯಗೌಡ'ನಿಮ್ಮ ಪ್ರೀತಿ ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಡಿ'- ನಟಿ ಕಾವ್ಯಗೌಡ

  ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಗಂಟು ಖ್ಯಾತಿಯ ಗೀತಾ, ನಟ ಸುನಿಲ್ ರಾವ್, ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಸೇರಿದಂತೆ ಸಾಕಷ್ಟು ಹೆಸರುಗಳು ಕೇಳಿಬರುತ್ತಿದೆ. ಆದರೆ ಬಗ್ಗೆ ಕಾವ್ಯಾ ಗೌಡ ಎಂಟ್ರಿ ಬಗ್ಗೆ ಸಹೋದರಿ ಭವ್ಯಾ ಗೌಡ ಸ್ಪಷ್ಟಪಡಿಸಿದ್ದಾರೆ.

  ಕಾವ್ಯಾ ಗೌಡ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಭವ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕಾವ್ಯಾ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಭವ್ಯಾ ಇಲ್ಲ ಸುಳ್ಳು ಸುದ್ದಿ ಇದು ಎಂದು ಹೇಳಿದ್ದಾರೆ.

  ಅಂದಹಾಗೆ ಬಿಗ್ ಬಾಸ್ ಮನೆಗೆ ಹೋಗುವವರು ಯಾರು ಬಹಿರಂಗವಾಗಿ ಹೇಳಿ ಹೋಗುವುದಿಲ್ಲ. ಹಾಗಾಗಿ ಕಾವ್ಯಾ ಈ ಬಾರಿ ಬಿಗ್ ಬಾಸ್ ನಲ್ಲಿ ಭಾಗಿಯಾಗಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಗೊತ್ತಾಗಬೇಕಾದರೆ ಬಿಗ್ ಬಾಸ್ ಪ್ರಾರಂಭವಾಗುವ ವರೆಗೂ ಕಾಯಲೇ ಬೇಕು.

  ಕಾವ್ಯಾ ಕೊನೆಯದಾಗಿ ರಾಧ ರಮಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಶ್ವೇತಾ ಪ್ರಸಾದ್ ಬಿಟ್ಟುಹೋದ ಜಾಗಕ್ಕೆ ಕಾವ್ಯಾ ಎಂಟ್ರಿ ಕೊಟ್ಟಿದ್ದರು. ರಾಧಾ ಮಿಸ್ ಆಗಿ ಕಾವ್ಯಾ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಈ ಧಾರಾವಾಹಿ ಬಳಿಕ ಕಾವ್ಯಾ ಯಾವುದೇ ಸೀರಿಯಲ್ ನಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  English summary
  Serial Actress Kavya Gowda will not be a part of the Bigg Boss Kannada season 8.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X