'ಕೆಂಡಸಂಪಿಗೆ'ಯ ನಟಿ ಇದೀಗ ಡ್ಯಾನ್ಸ್ ಮೂಲಕ ವೀಕ್ಷಕರನ್ನು ರಂಜಿಸಲು ಹೊರಟ ಕಾವ್ಯಾ ಶೈವ
'ಕೆಂಡಸಂಪಿಗೆ' ಧಾರಾವಾಹಿಯ ಸುಮನಾ ಆಗಿ ಕಿರುತೆರೆಗೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಕಾವ್ಯಾ ಶೈವ. ಸುಮನಾ ಪಾತ್ರದ ಮೂಲಕ ಕಿರುತೆರೆ ಮನೆ ಮನ ಸೆಳೆದಿರುವ ಕಾವ್ಯಾ ಶೈವ ಮುಂದೆ ಕಾರಣಾಂತರಗಳಿಂದ ಆ ಪಾತ್ರದಿಂದ ಹೊರಬಂದಿದ್ದರು. ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಆಕೆ ಇದೀಗ ಮರಳಿ ಬಂದಿದ್ದಾರೆ. ಆದರೆ ಕಾವ್ಯಾ ಶೈವ ಅವರು ಕಾಣಿಸಿಕೊಂಡಿರುವುದು ಕಿರುತೆರೆಯಲ್ಲಿಯೇ ಆದರೂ ಧಾರಾವಾಹಿಯಲ್ಲಿ ಅಲ್ಲ.. ಬದಲಿಗೆ ರಿಯಾಲಿಟಿ ಶೋವಿನಲ್ಲಿ.
ಹೌದು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಪ್ರೀಮಿಯರ್ ಇಂದಿನಿಂದ ಶುರುವಾಗುತ್ತಿದ್ದು, ಅದರಲ್ಲಿ ಸ್ಪರ್ಧಿಯಾಗಿ ಕಾವ್ಯಾ ಶೈವ ಕಾಣಿಸಿಕೊಂಡಿದ್ದಾರೆ. "ಇಷ್ಟು ದಿನ ನೀವು ನನ್ನನ್ನು ನಟಿಯಾಗಿ ಕಿರುತೆರೆಯಲ್ಲಿ ನೋಡಿದ್ದೀರಿ. ಈಗ ಡಿಕೆಡಿಗೆ ಬಂದಿದ್ದೇನೆ. ನಿಜವಾಗಿಯೂ ನಾನು ಟ್ರೈನ್ಡ್ ಡ್ಯಾನ್ಸರ್ ಅಲ್ಲ.

ಪ್ರೊಫೇಶನಲ್ ಡ್ಯಾನ್ಸರ್ ಅಂತೂ ಅಲ್ಲವೇ ಅಲ್ಲ. ಇಷ್ಟು ದಿನ ಡ್ಯಾನ್ಸ್ ಗೊತ್ತಿರುವವರನ್ನು ಕಂಟೆಸ್ಟ್ ಆಗಿ ತೆಗೊಂಡು ಡಿಕೆಡಿ ಶೋ ರನ್ ಆಗಿತ್ತು. ಇದೇ ಮೊದಲಿಗೆ ನಾನ್ ಡ್ಯಾನ್ಸರ್ ಸೈಲೆಕ್ಟ್ ಮಾಡಿಕೊಂಡಿದ್ದಾರೆ. ಶೋ ಮುಗಿಯುವಷ್ಟರಲ್ಲಿ ಒಬ್ಬ ಫರ್ಪೆಕ್ಟ್ ಡ್ಯಾನ್ಸರ್ ಆಗಿ ಹೊರಬರುತ್ತೇನೆ ಅಂತ ಅಂದುಕೊಂಡಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಅಭಿನಯದತ್ತ ಒಲವು ಹೊಂದಿದ್ದ ಕಾವ್ಯಾ ಶೈವಗೆ ನಟಿಯಾಗಿ ಗುರುತಿಸಿಕೊಳ್ಳುವ ಮಹಾದಾಸೆ. 'ಭೂಮಿ ತಾಯಾಣೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಕಾವ್ಯಾ ಶೈವ ನಂತರ ಕಾಣಿಸಿಕೊಂಡಿದ್ದು, ಪರಭಾಷೆಯ ಕಿರುತೆರೆಯಲ್ಲಿ. ತೆಲುಗಿನ 'ಹಂಸಗೀತಂ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಈಕೆ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದರು. ನಂತರ 'ಕೆಂಡಸಂಪಿಗೆ'ಯ ಸುಮನಾ ಆಗಿ ಅಭಿನಯಿಸಿದ್ದ ಈಕೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದರು.

"ಸುಮನಾ ಪಾತ್ರವನ್ನು ನಾನು ಇಷ್ಟಪಟ್ಟು ನಿರ್ವಹಿಸುತ್ತಿದ್ದೆ. ಧನ್ಯವಾದಗಳು ಎಂದಿದ್ದಾರೆ. ನಾನು ಇದಕ್ಕಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಇವತ್ತು ನಾನು ಪಡೆದುಕೊಂಡಿರುವ ಪ್ರೀತಿಗಿಂತ ಮತ್ತಷ್ಟು ಹೆಚ್ಚು ಪ್ರೀತಿ ಪಡೆಯುವ ಭರವಸೆ ಹೊಂದಿದ್ದೇನೆ" ಎಂದು ಸುಮನಾ ಪಾತ್ರದಿಂದ ಹೊರಬಂದುದಕ್ಕೆ ಕಾವ್ಯ ಶೈವ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಇಷ್ಟು ದಿನಗಳ ಕಾಲ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಕಾವ್ಯ ಶೈವ ಇದೀಗ ಮೊದಲ ಬಾರಿಗೆ ಡ್ಯಾನ್ಸ್ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











