Actress Kavyashree Gowda: ಫ್ಯಾಷನ್ ಸೆನ್ಸ್‌ನಿಂದ ಅಭಿಮಾನಿಗಳ ಮನಗೆದ್ದ ಬಿಗ್ ಬಾಸ್ ಸುಂದರಿ ಕಾವ್ಯಶ್ರೀ!
ನಟಿ ಕಾವ್ಯಶ್ರೀ ಗೌಡ ಅವರು ತಮ್ಮ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಬಹಳಷ್ಟು ಅಭಿಮಾನಿಗಳು ಜೊತೆಗೆ ಮೆಚ್ಚುಗೆಯನ್ನು ಪಡೆದ ನಟಿ ಕಾವ್ಯಶ್ರೀ ಗೌಡ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಬಹಳಷ್ಟು ಆಕ್ಟೀವ್ ಇದ್ದಾರೆ.
ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳನ್ನು ಪ್ರೇರಣೆ ಮಾಡುವುದು, ಸದಾ ಕಾಲ ಕಾಂಟಾಕ್ಟ್‌ನಲ್ಲಿಟ್ಟು ಕೊಳ್ಳುವುದು ಹೊಸ ಟ್ರೆಂಡ್ ಆಗಿರುವುದರಿಂದ ಎಲ್ಲಾ ನಟ ನಟಿಯರು ಅಂಗೈ ಅಗಲದ ಫೋನ್‌ನಿಂದ ಜನಸಾಮಾನ್ಯರಿಗೆ ಸಂಪರ್ಕಕ್ಕೆ ಸಿಗುವಂತಾಗಿದೆ.

ಸೋಶಿಯಲ್ ಮೀಡಿಯಾ ಪ್ರಸ್ತುತ ಜಗತ್ತಿನಲ್ಲಿ ಬಹಳಷ್ಟು ಪ್ರೇರೆಪಿಸುವಂತೆ ಮಾಡುವ ಒಂದು ಪ್ರಮುಖ ಮಾಧ್ಯಮವಾಗಿರುವಾಗ ಇದರಲ್ಲಿ ನಟ ನಟಿಯರು ತಮ್ಮ ದೈನಂದಿನ ಜೀವನ, ಉಡುಗೆ ತೊಡುಗೆ, ದಾನ ಧರ್ಮಗಳಿಂದ ಜನಸಾಮಾನ್ಯರನ್ನು ಹೆಚ್ಚು ಪ್ರೇರಣೆ ಮಾಡುತ್ತಾರೆ ಎಂದರೆ ತಪ್ಪಾಗಲ್ಲ.
ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿ
ಅಂತೆಯೇ ನಟಿ ಕಾವ್ಯಶ್ರೀ ಗೌಡ ತಮ್ಮ ಫ್ಯಾಶನ್ ಸೆನ್ಸ್ ಗೆ ಹೆಸರುವಾಸಿ. 'ಮಂಗಳ ಗೌರಿ' ಮದುವೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರು ಈಕೆ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟು ಇನ್ನಷ್ಟು ಜನ ಪರಿಚಯವನ್ನು ಪಡೆದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬೇರೆ ಬೇರೆ ಉಡುಗೆ ತೊಡುಗೆ ಸ್ಟೈಲ್‌ಗಳಲ್ಲಿ ಫೋಟೋಗಳನ್ನು ಹಾಕಿ ಜನರ ಮೆಚ್ಚುಗೆಗೆ ಪಾತ್ರವಾಗುವ ಇವರು ಹೊಸ ಹೊಸ ಟ್ರೆಂಡಿಂಗ್ ಸ್ಟೈಲ್‌ಗಳನ್ನು ತೋರಿಸುತ್ತಿರುತ್ತಾರೆ.

ಹರಿದುಬಂದಿತು ಕಮೆಂಟ್
ಹೀಗಿರುವಾಗ ಈಗ ಇತ್ತೀಚೆಗಷ್ಟೇ ಹಾಕಿರುವ ಕೆಲವೊಂದಷ್ಟು ಪೋಸ್ಟ್‌ಗಳು ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಬಿಳಿ ಬಣ್ಣದ ಕಸೂತಿಯ ಕ್ರಾಪ್ ಟಾಪ್ ಹಾಗೂ ಸ್ಕರ್ಟ್ ಹಾಕಿಕೊಂಡ ಇವರು ದೊಡ್ಡ ದೊಡ್ಡ ಜುಮುಕಿ ನೆಕ್ಲೆಸ್ ಹಾಗೂ ಬೈತಲೆ ಬೊಟ್ಟನ್ನು ಏರಿಸಿಕೊಂಡು, ಗುಂಗುರು ಕೂದಲಿನ ಹೇರ್ ಸ್ಟೈಲ್‌ನೊಂದಿಗೆ ಸ್ಟೈಲಿಶ್ ಪೋಸ್‌ಗಳೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಬಹಳಷ್ಟು ಫ್ಯಾಶನ್ ಪ್ರಿಯರು ಬೇರೆ ಬೇರೆ ರೀತಿಯ ಕಮೆಂಟ್‌ಗಳನ್ನು ಹಾಕಿ ಶುಭ ಹಾರೈಸಿದ್ದಾರೆ.


Click it and Unblock the Notifications











