'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ಶ್ರೀವಲ್ಲಿಗೆ ಡಿಮಾಂಡಪ್ಪೋ ಡಿಮಾಂಡು: ಯಾರೀ ನಟಿ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಹೊಚ್ಚ ಹೊಸ ಧಾರಾವಾಹಿ 'ಶ್ರಾವಣಿ ಸುಬ್ರಹ್ಮಣ್ಯ' ಇದೀಗ ಬಹಳಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿವೆ. ಧಾರಾವಾಹಿಯಲ್ಲಿ ಮುದ್ದುಮುಖದ ಮುಗ್ಧ ಹುಡುಗ ಸುಬ್ರಹ್ಮಣ್ಯ, ಕಾರ್ ಡ್ರೈವರ್ ಆಗಿ, ಎಜುಕೇಶನ್ ಮಿನಿಸ್ಟರ್ ಪಿಎ ಆಗಿ ಕೆಲಸ ಮಾಡುತ್ತಿದ್ದಾನೆ. ನಾಯಕಿ ಶ್ರಾವಣಿ ಚಟಪಟ ಮಾತನಾಡಿಕೊಂಡು ಸುತ್ತಮುತ್ತಲಿನವರನ್ನು ಸಂತೋಷದಲ್ಲಿ ಇರಿಸುತ್ತಾಳೆ.

ಈ ನಡುವೆ ಚಂದದ ಚೆಲುವೆ ಶ್ರೀವಲ್ಲಿ ಎನ್ನುವ ಹುಡುಗಿ ಸುಬ್ರಹ್ಮಣ್ಯನ ಹಿಂದೆ ಬಿದ್ದಿದ್ದಾಳೆ. ಸುಬ್ರಹ್ಮಣ್ಯನ ಮನೆಯಲ್ಲಿ ಆರ್ಥಿಕವಾಗಿ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಶ್ರೀವಲ್ಲಿಯ ಮನೆಯಲ್ಲಿ ಎಲ್ಲವೂ ಇದೆ. ಸುಬ್ರಹ್ಮಣ್ಯ ಎಂದರೆ ಬಹಳ ಪ್ರೀತಿ. ಈ ಚಂದದ ಹುಡುಗಿ ಪಾತ್ರವನ್ನು ಮಾಡುತ್ತಿರುವ ನಟಿ ಕೀರ್ತಿ ವೆಂಕಟೇಶ್‌ಗೆ ಇದೀಗ ಬಹಳಷ್ಟು ಡಿಮ್ಯಾಂಡ್‌ ಬಂದಿದೆ.

Actress Keerthi Venkatesh is charming through the role of Srivalli

ಶ್ರೀವಲ್ಲಿಯೇ ಮುಗ್ಧವಾಗಿ ಚೆನ್ನಾಗಿದ್ದಾಳೆ. ಅವಳನ್ನೇ ಸುಬ್ರಹ್ಮಣ್ಯನೊಂದಿಗೆ ಮದುವೆ ಮಾಡಿಸಿ, ಶ್ರಾವಣಿಯನ್ನು ಹೊರ ತೆಗೆದು ಆಕೆಯನ್ನು ಹೀರೋಯಿನ್ ಮಾಡಿ.. ಎಂಬಿತ್ಯಾದಿಯಾಗಿ ಧಾರಾವಾಹಿ ನೋಡುವ ವೀಕ್ಷಕರು ಹಾಗೂ ನೆಟ್ಟಿಗರು ಡಿಮಾಂಡ್ ಇಡುತ್ತಿದ್ದಾರೆ.

ಅಂದಹಾಗೆ ನಟಿ ಕೀರ್ತಿ ವೆಂಕಟೇಶ್ ಧಾರಾವಾಹಿಯಲ್ಲಿ ಕಾಣಿಸಿಕೊಂಡಷ್ಟು ಸಿಂಪಲ್ ಹುಡುಗಿ ಅಲ್ಲ. ಸ್ಟೈಲಿಶ್ ಆಗೇ ಇರುವ ಈಕೆ, ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಬಹಳ ಮಾಡರ್ನ್ ಲುಕ್ಕುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟೈಮ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು 'ಮಿಸ್ ಟ್ಯಾಲೆಂಟೆಡ್' ಎಂಬ ಅವಾರ್ಡ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಈ ಹಿಂದೆ 'ಸತ್ಯ' ಧಾರಾವಾಹಿಯಲ್ಲಿ ಅಮೂಲ್ ಬೇಬಿ ತಂಗಿ ರೀತುವ ಪಾತ್ರವನ್ನು ಮಾಡಿದ್ದ ನಟಿ ಕೀರ್ತಿ ವೆಂಕಟೇಶ್ ಜನಮನ ಗೆದ್ದಿದ್ದರು. ಅಷ್ಟೇ ಅಲ್ಲದೆ ಅದೇ ಧಾರಾವಾಹಿಯಲ್ಲಿ ಅವರು ಸುಬ್ಬು ಪಾತ್ರಧಾರಿ ಆಗಿರುವ ಅಮೋಘ ಆದಿತ್ಯ ಅವರೊಂದಿಗೆ ಜೋಡಿಯಾಗಿ ನಟಿಸಿದ್ದರು. ಇದೀಗ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲೂ ಇಬ್ಬರು ಜೊತೆಗೆ ನಟಿಸುತ್ತಿದ್ದಾರೆ.

Actress Keerthi Venkatesh is charming through the role of Srivalli

ಉದಯ ವಾಹಿನಿಯಲ್ಲಿ ಪ್ರಸಾರವಾಗುವ 'ಕನ್ಯಾದಾನ' ಎಂಬ ಧಾರಾವಾಹಿಯಲ್ಲಿಯೂ ನಾಯಕಿಯಾಗಿ ನಟಿಸುತ್ತಿರುವ ನಟಿ ಕೀರ್ತಿ ವೆಂಕಟೇಶ್ ಅಲ್ಲೂ ಬಹಳಷ್ಟು ದೊಡ್ಡ ಜನಪ್ರಿಯತೆಯನ್ನು ಪಡೆದಿದ್ದಾರೆ. ಕಿರುತೆರೆ ಅಷ್ಟೇ ಅಲ್ಲದೆ ಹಲವಾರು ಶಾರ್ಟ್ ಫಿಲಂಗಳಲ್ಲೂ ನಟಿಸಿಕೊಂಡಿರುವ ನಟಿ ಕೀರ್ತಿ ವೆಂಕಟೇಶ್ ಅವರಿಗೆ ಫೋಟೋಶೂಟ್ ಗಳನ್ನು ಮಾಡಿಸುವುದು ಹಾಗೂ ಟ್ರಾವೆಲಿಂಗ್ ಅಂದರೆ ಬಹಳ ಇಷ್ಟವಂತೆ.

More from Filmibeat

English summary
TV actress Keerthi Venkatesh likes to do photoshoots and travel:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X