Khushi Shivu: ನಟನೆಗೆ ಗ್ಯಾಪ್ ಕೊಟ್ಟಿದ್ದ ನಟಿ 'ನೀನಾದೆ ನಾ' ಸೀರಿಯಲ್ ಮೂಲಕ ಗ್ರ್ಯಾಂಡ್ ಎಂಟ್ರಿ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಅರುಂಧತಿ ಮಗಳು ಅನನ್ಯಾ ಆಗಿ ಅಭಿನಯಿಸಿದ್ದ ಖುಷಿ ಶಿವು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆ. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಗಂಗಾ ಆಗಿ ಅಭಿನಯಿಸಿದ್ದ ಖುಷಿ ಶಿವು ಇದೀಗ ಮಗದೊಂದು ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.

ಹೌದು, ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ್ದ 'ನಮ್ಮನೆ ಯುವರಾಣಿ'ಯು ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡು ಸ್ವಲ್ಪ ಸಮಯವಾಯಿತು. ಈ ಧಾರಾವಾಹಿಯಲ್ಲಿ 'ಗಂಗಾ' ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ಖುಷಿ ಶಿವು ಇದೀಗ ಹೊಚ್ಚ ಹೊಸ ಧಾರಾವಾಹಿಯ ಮೂಲಕ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಖುಷಿ ರವಿ.

Actress Khushi Shivu is returning to acting with Neenade Na serial

ಸಕತ್ ಸದ್ದು ಮಾಡುತ್ತಿದೆ ಪ್ರೋಮೋ

ಇದೀಗ 'ನೀನಾದೆ ನಾ' ಎಂಬ ಹೊಸ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಖುಷಿ ಶಿವು ಅವರು ಕಾಣಿಸಿಕೊಳ್ಳುತ್ತಿರುವುದು ಕಿರುತೆರೆಪ್ರಿಯರಿಗೆ ಸಂತಸ ತಂದಿದೆ. ಇದೊಂದು ವಿಭಿನ್ನ ಪಾತ್ರವಾಗಿದ್ದು ಮೊಟ್ಟಮೊದಲ ಬಾರಿಗೆ ಈ ರೀತಿಯ ಪಾತ್ರ ಮಾಡುತ್ತಿದ್ದಾರಂತೆ ನಟಿ. ಧಾರಾವಾಹಿ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ನಾಯಕಿ ಬಹಳ ಸಭ್ಯ ಹುಡುಗಿಯಂತೆ ಕಂಡುಬಂದಿದ್ದಾಳೆ.

ನಾಯಕಿ ತನ್ನ ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿರುತ್ತಾಳೆ. ಆ ಸಮಯದಲ್ಲಿ ಕಥೆಯ ನಾಯಕ ತನ್ನ ತಂಗಿಯ ಮದುವೆಯನ್ನು ನಿಲ್ಲಿಸಲು ಮುಂದೆ ಹೋಗುತ್ತಾನೆ. ತಾಳಿ ಕಟ್ಟಿ ಆದ ಕಾರಣ ನಾಯಕಿ ನಾಯಕನಿಗೆ ಬೈಯ್ಯುತ್ತಾಳೆ. ಇದರಿಂದ ರೊಚ್ಚಿಗೆದ್ದ ನಾಯಕ ನಾಯಕಿಯ ಕತ್ತಿಗೆ ತಾಳಿ ಕಟ್ಟಿ ಬಿಡುವ ರೀತಿ ಪ್ರೋಮೊ ಕಂಡು ಬಂದಿದ್ದು ಬಹಳಷ್ಟು ಟ್ವಿಸ್ಟ್ ಇದೆ ಎಂಬುದು ಇದರಿಂದನೇ ತಿಳಿಯುತ್ತದೆ.

Actress Khushi Shivu is returning to acting with Neenade Na serial

ರಗಡ್ ಅವತಾರದಲ್ಲಿ ದಿಲೀಪ್ ಶೆಟ್ಟಿ

ಸಭ್ಯ ಹುಡುಗಿಗೆ ರಗಡ್ ರೌಡಿಯಂತಿರುವ ಹುಡುಗ ಬಂದು ತಾಳಿ ಕಟ್ಟಿ ಚಾಲೆಂಜ್ ಮಾಡಿದಾಗ ಆಕೆಯ ಸ್ಥಿತಿ ಹಾಗೂ ಮುಂದಿನ ನಿರ್ಧಾರದ ಮೇಲೆ ಕಥೆ ನಿಂತಿದೆ. ಇನ್ನು ಕಿರುತೆರೆಯ ಜನಪ್ರಿಯ ನಟ ದಿಲೀಪ್ ಶೆಟ್ಟಿ ಅವರು ನಾಯಕನ ಪಾತ್ರ ಮಾಡುತ್ತಿದ್ದು ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದ ಹಾಗೇ ಬೆಂಗಾಲಿ ಧಾರಾವಾಹಿ ಒಂದರ ರೀಮೇಕ್ ಇದಾಗಿದೆ. ಇದೇ ಏಪ್ರಿಲ್ ಕೊನೆಯ ವಾರದಿಂದ ಇದು ಆರಂಭಗೊಳ್ಳಲಿದೆ. ಮಾತ್ರವಲ್ಲ ಇದರ ಜೊತೆಗೆ ಇದು ಹಾಟ್ ಸ್ಟಾರ್ ನಲ್ಲಿ ಕೂಡ ನೋಡಲು ಲಭ್ಯವಾಗಲಿದೆ.

More from Filmibeat

English summary
After a short gap, Khushi Shivu of Namnane Yuvarani Ganga fame returned to television with Neenade Na, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X