'ನೀನಾದೆ ನಾ' ಎನ್ನುತ್ತಲೇ ಮೊದಲ ಸಿನಿಮಾದ ಪೋಸ್ಟರ್ ಹಂಚಿಕೊಂಡ ಖುಷಿ ಶಿವು; ಯಾವುದು ಆ ಸಿನಿಮಾ?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿ.. ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಧಾರಾವಾಹಿಗಳ ಪೈಕಿ 'ನೀನಾದೆ ನಾ' ಧಾರಾವಾಹಿಯೂ ಒಂದು. 'ನೀನಾದೆ ನಾ' ಧಾರಾವಾಹಿಯು ಇದೀಗ ಹೊಸ ಅಧ್ಯಾಯದೊಂದಿಗೆ ಶುರುವಾಗಿದ್ದು, ನಾಯಕ ವಿಕ್ರಮ್ ಆಗಿ ದಿಲೀಪ್ ಶೆಟ್ಟೆ ಹಾಗೂ ನಾಯಕಿ ವೇದಾಳಾಗಿ ಖುಷಿ ಶಿವು ಕಾಣಿಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಹಳೆಯ ಜೋಡಿಯ ಹೊಸ ಕಥೆ ಎಂದು ಇದನ್ನು ಹೇಳಿದರೆ ತಪ್ಪಾಗಲಾರದು.

ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿರುವ ನಾಯಕಿ ವೇದಾ ಉಡುಪಿಯ ಕೃಷ್ಣನ ಪತಮಭಕ್ತೆ. ತನ್ನದೇ ಸ್ವಂತ ಅಂಗಡಿಯನ್ನು ಹೊಂದಿರುವ ವೇದಾ ಒಂದೆಡೆಯಾದರೆ ಗೂಂಡಾಗಿರಿ ಮಾಡುತ್ತಾ, ದಂಧೆ ನಡೆಸುತ್ತಿರುವ ಹುಡುಗ ನಾಯಕ ವಿಕ್ರಮ್. ಮಂಗಳೂರಿನ ಫೇಮಸ್ಸು ಡಾನ್ ಕರುಣಾಕರ್ ಶೆಟ್ಟಿಯ ಬಲಗೈ ಬಂಟ ಆಗಿ ಗುರುತಿಸಿಕೊಂಡಿರುವ ಈತ ಮತ್ತು ನಾಯಕಿ ಅದು ಹೇಗೆ ಒಂದಾಗುತ್ತಾರೆ ಎಂಬುದೇ ಈ ಧಾರಾವಾಹಿಯ ಕಥಾ ಹಂದರ.

Actress Khushi Shivu shared the poster of the debut movie Rukmini Vasantha

'ನೀನಾದೆ ನಾ' ಧಾರಾವಾಹಿಯಲ್ಲಿ ಪಕ್ಕಾ ಕರಾವಳಿಯ ಹುಡುಗಿಯಾಗಿ ಮಂಗಳೂರಿನ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಖುಷಿ ಶಿವು ಮಗದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ವೀಕ್ಷಕರನ್ನು ರಂಜಿಸಿರುವ ಖುಷಿ ಶಿವು ಇದೀಗ ಮೊದಲ ಬಾರಿಗೆ ಸಿನಿಮಾಗೆ ಕಾಲಿಟ್ಟಿದ್ದಾರೆ.

'ರುಕ್ಮಿಣಿ ವಸಂತ' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ ಈ ಬೆಡಗಿ. ಅಂದ ಹಾಗೇ ಇದೇ ಸೆಪ್ಟೆಂಬರ್ 16ರಂದು ಖುಷಿ ಶಿವು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಆ ದಿನ ಅವರ ಪಾತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ತಮ್ಮ ಪಾತ್ರದ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಈ ನಟಿ "ರುಕ್ಮಿಣಿ ವಸಂತ ನನ್ನ ಮೊದಲ ಸಿನಿಮಾ. ಹೊಸ ಹೆಜ್ಜೆ ವಿಭಿನ್ನ ಪಾತ್ರದೊಂದಿಗೆ ಪ್ರಾರಂಭಿಸುತ್ತಿದ್ದೇನೆ. ನಿಮ್ಮನ್ನು ಮನರಂಜಿಸಲು ಬರುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ಕಾಲ ಇರಲಿ" ಎಂದು ಬರೆದುಕೊಂಡಿದ್ದಾರೆ.

Actress Khushi Shivu shared the poster of the debut movie Rukmini Vasantha

ಖುಷಿ ಶಿವು ಮೊದಲ ಬಾರಿ ಬಣ್ಣ ಹಚ್ಚಿದ್ದು 'ಪಾರು' ಧಾರಾವಾಹಿಯಲ್ಲಿ. ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲಿ ಖಳನಾಯಕಿ ಅನುಷ್ಕಾ ತಂಗಿ ಅನನ್ಯಾ ಆಗಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟರು. ವಿಶೇಷ ಎಂದರೆ ಮೊದಲ ಧಾರಾವಾಹಿಯಲ್ಲಿ ಈಕೆ ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿದ್ದರು.

ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ನಂತರ ನಾಯಕಿಯಾಗಿ ಭಡ್ತಿ ಪಡೆದರು. 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಗಂಗಾ ಆಗಿ ನಟಿಸಿರುವ ಈಕೆ ನಾಯಕಿಯಾಗಿ ಮಿಂಚಿದರು. ಇದೀಗ ವೇದಾಳಾಗಿ ಅಭಿನಯಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಈಕೆಗೆ ಎಳವೆಯಿಂದಲೂ ನಟಿಯಾಗುವ ಬಯಕೆಯಿತ್ತು.

ಯುಕೆಜಿ ವಿದ್ಯಾರ್ಥಿನಿಯಾಗಿದ್ದಾಗಲೇ ಮಂಡ್ಯ ರಮೇಶ್ ಅವರ ನಟನಾ ತಂಡ ಸೇರಿದ ಈಕೆ ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡಿದ್ದರು. ಬರೋಬ್ಬರಿ ಹತ್ತು ವರ್ಷಗಳ ಕಾಲ ನಟನಾದ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ಪರಿಪೂರ್ಣ ನಟಿಯಾಗಿ ಹೊರಹೊಮ್ಮಿದ್ದಾರೆ.

More from Filmibeat

English summary
Television actress Khushi Shivu said that she is taking a new step with a different role in Rukmini Vasantha.
Read more about: tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X