ನಟನೆಯಲ್ಲಿ ಸೈ ಎನಿಸಿಕೊಂಡ ನಟಿ ಖುಷಿ ಶಿವು; ತನ್ನ ಶಿಷ್ಯೆ ಬಗ್ಗೆ ಮಂಡ್ಯ ರಮೇಶ್ ಹೇಳಿದ್ದೇನು?

By ಅನಿತಾ ಬನಾರಿ

'ನೀನಾದೆ ನಾ' ಧಾರಾವಾಹಿಯ ನಟಿ ವೇದಾ ಕೃಷ್ಣಮೂರ್ತಿ ನಡೆದು ಬಂದ ಕಥೆ ಇದು. ವೇದಾ ಕೃಷ್ಣಮೂರ್ತಿ ಎಂಬ ಪಾತ್ರದ ಮೂಲಕ ಬಹಳಷ್ಟು ಜನಪ್ರಿಯತೆ ಪಡೆಯುತ್ತಿರುವ ನಟಿ ಖುಷಿ ಶಿವು, ಅವರು ಈ ಮೊದಲು ಹಲವಾರು ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಅಂದ ಹಾಗೆ ನಟಿ ಖುಷಿ ಶಿವು ಅವರು ಬಾಲ್ಯದಿಂದಲೂ ನಟನ ಎಂಬ ಸಂಸ್ಥೆಯಲ್ಲಿ ನಟನೆಯನ್ನು ಕಲಿತವರು. ನಟನಾ ಎಂಬ ಸಂಸ್ಥೆ ಮಂಡ್ಯ ರಮೇಶ್ ಅವರು ನಡೆಸಿಕೊಂಡು ಬಂದಿರುವ ಕಲಾಸಂಸ್ಥೆಯಾಗಿದ್ದು, ಅದರಲ್ಲಿ ನಟಿ ಖುಷಿ ಶಿವು ಅವರು ಬಾಲ್ಯದಿಂದಲೂ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Actress Khushi shivu who is charming on television is a student of natana acting school

ಈ ಬಗ್ಗೆ ಸ್ವತಃ ನಟ ಮಂಡ್ಯ ರಮೇಶ್ ಅವರೇ ಮಾತನಾಡಿದ್ದು "ಖುಷಿ ಚಿಕ್ಕಂದಿನಿಂದಲೂ ನಾನು ನೋಡಿರುವ ಹುಡುಗಿ. ಬಾಲ್ಯದಿಂದಲೂ ಅವಳು ನಮ್ಮ ಸಂಸ್ಥೆಯಲ್ಲಿ ಓಡಾಡಿಕೊಂಡು ನಟನೆಯನ್ನು ಕಲಿತವಳು. ಇದೀಗ ಅವಳು ಇಷ್ಟು ಎತ್ತರಕ್ಕೆ ಬೆಳೆದಿದ್ದಾಳೆ ಎಂದರೆ, ನನಗೆ ಬಹಳ ಹೆಮ್ಮೆ ಆಗುತ್ತದೆ. ಇಂದು ಆಕೆ ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಒಂದು ಒಳ್ಳೆಯ ಪಾತ್ರದಲ್ಲಿ ಜನರಿಗೆ ಕಾಣಿಸಿಕೊಳ್ಳುತ್ತಿದ್ದಾಳೆ. ಈಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಈ ಯಶಸ್ಸಿನ ಹಿಂದೆ ಆಕೆಯ ಹಠವಿದೆ, ಛಲವಿದೆ, ಅಪಮಾನಗಳಿವೆ. ಎಲ್ಲದರ ಜೊತೆಗೆ ಎಚ್ಚರಕ್ಕೆ ಏರುವ ಒಳ್ಳೆ ದೃಷ್ಟಿಕೋನ ಹಾಗೂ ಕಲೆ ಇದೆ" ಎಂದು ತಮ್ಮದೇ ಸಂಸ್ಥೆಯಿಂದ ಮೂಡಿ ಬಂದ ಕಲಾವಿದೆ ಖುಷಿ ಬಗ್ಗೆ ನಟ ಮಂಡ್ಯ ರಮೇಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ನಟಿ ಖುಷಿ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಮೊದಲು ನಟಿ ಖುಷಿ ಸಿಗುವವರು 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ಇರುವಂತಹ ಈ ಪಾತ್ರ ಜನರಿಗೆ ಬಹಳ ಹಿಡಿಸಿತ್ತು. ನಂತರ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಗಂಗಾ ಪಾತ್ರ ಮಾಡುವ ಮೂಲಕ ಫುಲ್ ಟೈಮ್ ನಟಿಯಾಗಿ ಭಡ್ತಿ ಪಡೆದಿದ್ದರು. ಪಿಯುಸಿಯಿಂದಲೂ ನಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಟಿ ಖುಷಿ ಶಿವು ನಟನೆಯ ಜೊತೆಗೆ ಓದನ್ನು ಮುಂದುವರಿಸುತ್ತಿದ್ದಾರೆ.

Actress Khushi shivu who is charming on television is a student of natana acting school

ಸದ್ಯಕ್ಕೆ ಕೌಟುಂಬಿಕ ಕಥಾಹಂದರವನ್ನು ಹೊಂದಿರುವ "ನೀನಾದೆ ನಾ" ಧಾರವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆಯುವುದಲ್ಲದೆ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಗೆದ್ದಿದ್ದಾರೆ ಎಂದರೆ ತಪ್ಪಾಗಲ್ಲ.

More from Filmibeat

English summary
Khushi shivu who is charming on television is a student of natana acting school, Know More:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X