ಗೃಹ ಪ್ರವೇಶದಲ್ಲಿ ಮಿಂಚಿದ ಕೃಷಿ ತಾಪಂಡ; ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ನಟಿ
ಸದಾ ಆಕ್ಟಿವ್ ಆಗಿರುವ ಕೃಷಿ ತಾಪಂಡ ಅಭಿಮಾನಿಗಳಿಗೆ ಇದೀಗ ಖುಷಿ ಸುದ್ದಿ ನೀಡಿದ್ದಾರೆ. ಹೌದು ಕೃಷಿ ತಾಪಂಡ ಅವರು ಇದೀಗ ಹೊಸ ಕನಸಿನೊಂದಿಗೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಕೃಷಿ ಅವರ ಮನೆಯ ಗೃಹ ಪ್ರವೇಶ ಅದ್ದೂರಿಯಾಗಿ ನೆರವೇರಿದೆ.
ಮೈಸೂರಿನಲ್ಲಿ ನೂತನವಾಗಿ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಕೃಷಿ ಅವರು ಮೊದಲು ಮಾಡೆಲ್ ಆಗಿದ್ದರು ಆ ಬಳಿಕ ಅವರನ್ನು ಚಿತ್ರರಂಗ ಕೈ ಬೀಸಿ ಕರೆಯುತ್ತಿತ್ತು. ಕೃಷಿ ಮೊದಲ ಬಾರಿಗೆ ಕಹಿ ಎನ್ನುವ ಸಿನಿಮಾದಲ್ಲಿ ನಟನೆ ಮಾಡುತ್ತಾರೆ. ಆದರೆ ಆ ಸಿನಿಮಾ ಸೆಟ್ ಏರಿರುವುದಿಲ್ಲ.

ಇನ್ನು ಕೃಷಿ ತಾಪಂಡ ಕೊಡಗಿನ ಕುವರಿ. ಹೌದು ಕೃಷಿ ಹುಟ್ಟಿ ಬೆಳೆದಿದ್ದು ಮಡಿಕೇರಿಯಲ್ಲಿ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ಬೆಡಗಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಂದೆ ತಾಯಿ ಹಾಗೂ ಅಣ್ಣನ ಜೊತೆ ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಕೃಷಿಯ ಮನೆಯಲ್ಲಿ ಖುಷಿಯ ವಾತಾವರಣ ತುಂಬಿ ತುಳುಕುತ್ತಿದೆ.
ಕೃಷಿ ತಾಪಂಡಗೆ ಅಭಿಮಾನಿಗಳು ಹಾಗೆಯೇ ಗೆಳತಿಯರಾದ ಅನುಪಮಾ , ಮಾನ್ವಿತಾ ಮುಂತಾದವರು ಶುಭ ಹಾರೈಸಿದ್ದಾರೆ. ಇನ್ನು ಗೃಹ ಪ್ರವೇಶದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಹಾಗೆಯೇ ಹೊಸ ಮನೆಯ , ಹೊಸ ಆರಂಭ ಎನ್ನುವ ಶೀರ್ಷಿಕೆಯನ್ನು ಕೊಟ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಡುತ್ತಾ ಇದ್ದಾರೆ. ಹಾಗೆಯೇ ಫೋಟೋಗೆ ಸಖತ್ ಲೈಕ್ ಗಳನ್ನೂ ಕಾಮೆಂಟ್ ಗಳನ್ನೂ ಮಾಡಿ ಕೃಷಿ ತಾಪಂಡಗೆ ವಿಶ್ ಮಾಡುತ್ತಿದ್ದಾರೆ. ಎರಡು ಕನಸು, ಅಕಿರ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಭರಾಟೆ, ಲಂಕೆ, ಬ್ಲ್ಯಾಂಕ್, ರೂಪಾಯಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಕೃಷಿ ತಾಪಂಡ ಹೆಚ್ಚಿನ ಹೆಸರು ಮಾಡಿಕೊಟ್ಟಿದ್ದು ಬಿಗ್ ಬಾಸ್ ಸೀಸನ್ 5. ಹೌದು ಸದಾ ನಗುಮೊಗದಿಂದಲೇ ಎಲ್ಲರ ಮನಸನ್ನು ಕದಿಯುತ್ತ ಇದ್ದ ಕೃಷಿ ಈ ಕಾರಣಕ್ಕಾಗಿ ಅಭಿಮಾನಿಗಳಿಗೆ ಸಾಕಷ್ಟು ಹತ್ತಿರ ಆಗಿದ್ದರು ಕೃಷಿ ಎಂದರೆ ತಪ್ಪಾಗಲಾರದು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಈ ಬೆಡಗಿ ಫೋಟೋ ಷೂಟ್ ಮಾಡಿಸಿ ಪೋಸ್ಟ್ ಮಾಡುತ್ತಿದ್ದರು.
ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಇರುವಿಕೆಯನ್ನು ತೋರ್ಪಡಿಸುತ್ತ ಇದ್ದರು. ಆದರೆ ಇದೀಗ ಗೃಹ ಪ್ರವೇಶದ ಫೋಟೋ ನೋಡಿದ ಅಭಿಮಾನಿಗಳಿಗೆ ಸಖತ್ ಆಗಿ ಖುಷಿ ನೀಡಿದೆ. ಅದರಲ್ಲೂ ಮುದ್ದು ಮುದ್ದಾಗಿ ಕರುವಿನ ಜೊತೆ ಫೋಟೋ ತೆಗೆಸಿಕೊಂಡಿದ್ದ ಕೃಷಿಯನ್ನು ನೋಡಿದ ಅಭಿಮಾನಿಗಳು ಕೊಂಡಾಡುತ್ತ ಇದ್ದಾರೆ. ಗೃಹ ಪ್ರವೇಶದಲ್ಲಿ ಕೃಷಿ ಹಳದಿ ಬಣ್ಣದ ಸೀರೆಯುಟ್ಟು ಕೈಗಳಿಗೆ ಹಳದಿ ಬಣ್ಣದ ಬಳೆಗಳನ್ನು ತೊಟ್ಟು ಮಿಂಚಿದ್ದಾರೆ. ಹೀಗೆ ಕೃಷಿ ತನ್ನ ಕನಸಿನ ಮನೆಯಲ್ಲಿ ಖುಷಿ ಖುಷಿ ಆಗಿ ಕಾಲ ಕಳೆಯುತ್ತಾ ಇದ್ದಾರೆ. ಕೃಷಿ ಖುಷಿ ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ.


Click it and Unblock the Notifications











