ದಿಢೀರ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದೇಕೆ ಉಪ್ಪೆನಾ ಬೆಡಗಿ ಕೃತಿ ಶೆಟ್ಟಿ?

By Poorva

ಕರಾವಳಿ ಬೆಡಗಿ ಕೃತಿ ಶೆಟ್ಟಿ ರಾತ್ರೋ ರಾತ್ರಿ ಸೆಲೆಬ್ರಿಟಿಯಾಗಿ ಮಿಂಚಿದ ನಟಿ ಈಕೆ. ಮೊದಲ ಚಿತ್ರ 'ಉಪ್ಪೆನಾ' ಯಶಸ್ವಿ ಆದ ಬಳಿಕ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿಬಿಟ್ಟಳು. ತನ್ನ ನಟನೆಯ ಮೂಲಕ ಎಲ್ಲರ ಮನಸ್ಸನ್ನೂ ಕದ್ದ ಈ ಬೆಡಗಿ ನೋಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್ ಫಾಲೋವರ್ಸ್‌ ಗಳಿಸಿದ ಕೃತಿ ಖುಷಿ ಹಂಚಿಕೊಂಡಿದ್ದಾರೆ. ಇನ್ನು ಕೃತಿ ಶೆಟ್ಟಿ ಫೋಟೋ ಸಾಕಷ್ಟು ವೈರಲ್ ಆಗುತ್ತಿದ್ದು ನೋಡುಗರು ಕೂಡ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಅನೇಕ ಜನ ಕೃತಿ ಶೆಟ್ಟಿ ಅವರ ನಗುವಿಗೆ ಫಿದಾ ಆಗಿದ್ದಾರೆ. ನಗು ಮೊಗದ ಚೆಲುವೆ ಕೃತಿ ಶೆಟ್ಟಿ ಎಂದು ಹೇಳಿದರೆ ತಪ್ಪಾಗದು.

Actress Krithi Shetty clocks 7 million followers on Instagram

ಇದೀಗ ಕೃತಿ ಶೆಟ್ಟಿ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಾಗೆಯೇ ಸಿನಿಮಾಗಳಲ್ಲೂ ಕೂಡ ಬಹಳಷ್ಟು ಆಫರ್ಸ್ ಬರುತ್ತಿದೆ. ಕೃತಿ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿಂಪಲ್ ಮೇಕಪ್ ಮಾಡಿಕೊಡು ಫೋಟೋ ಶೂಟ್ ಮಾಡಿಸಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋ ಇದೀಗ ಎಲ್ಲರ ಮನಸೂರೆಗೊಂಡಿದೆ. ಹಾಗೆಯೇ ಕೃತಿ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಿಂಪಲ್ ಸುಂದರಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. 'ಉಪ್ಪೆನಾ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಕೃತಿ ಬಳಿಕ 'ಶ್ಯಾಮ್ ಸಿಂಗ ರಾಯ್' ಹಾಗೂ ನಾಗ ಚೈತನ್ಯ ಜೊತೆ 'ಬಂಗಾರ್ರಾಜು' ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನಸ್ಸಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೃತಿ ಶೆಟ್ಟಿಗೆ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ . ಹಾಗೆಯೇ ಫೋಟೋ ಶೂಟ್, ವಿಡಿಯೋ ಪೋಸ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಮ್ ಪೋತಿನೇನಿ ಅವರ ಜೊತೆಗೂ ಕೃತಿ ಶೆಟ್ಟಿ ತೆರೆ ಹಂಚಿಕೊಂಡು ಗಮನ ಸೆಳೆದಿದ್ದಾರೆ. 'ವಾರಿಯರ್' ಚಿತ್ರದ ಮೂಲಕ ಎಲ್ಲರ ಮನೆ ಮಾತಾಗಿರುವ ಕೃತಿ ಶೆಟ್ಟಿ ನಟನೆ ಎಲ್ಲರ ಗಮನ ಸೆಳೆದಿದೆ.

ಬಹಳ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಸಾಧಿಸಿದ ಕೃತಿ ಸದ್ಯ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಶ್ರಮಿಸುತ್ತಿದ್ದಾರೆ. 'ಉಪ್ಪೆನಾ' ಬಳಿಕ ಆ ಮಟ್ಟಗಿನ ಸಕ್ಸಸ್ ಮತ್ತೆ ಸಿಗಲಿಲ್ಲ. ಸದ್ಯ ತಮಿಳಿನ 'ವಾ ವಾತಿಯಾರೆ' ಹಾಗೂ 'ಜೆನೀ' ಸಿನಿಮಾಗಳು ಆಕೆಯ ಕೈಯಲ್ಲಿವೆ. ಶರ್ವಾನಂದ್‌ ಜೋಡಿಯಾಗಿ ಇನ್ನು ಹೆಸರಿಡದ ತೆಲುಗು ಚಿತ್ರಕ್ಕೂ ಆಯ್ಕೆ ಆಗಿದ್ದಾರೆ.

'ಉಪ್ಪೆನಾ' ಚಿತ್ರದಲ್ಲಿ ನಟಿಸೋಕು ಮುನ್ನ ಕೃತಿ ಶೆಟ್ಟಿ ಹಿಂದಿಯ 'ಸ್ಪೆಷಲ್ 30' ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸಿದ್ದರು. ಮುಂಬೈನದಲ್ಲಿ ತುಳು ಕುಟುಂಬವೊಂದರಲ್ಲಿ ಕೃತಿ ಶೆಟ್ಟು ಹುಟ್ಟಿ ಬೆಳೆದರು. ಮುಂಬೈನಲ್ಲೇ ಓದಿ ಬೆಳೆದ ಕೃತಿ ನಿಧಾನವಾಗಿ ಜಾಹೀರಾತುಗಳಲ್ಲಿ ನಟಿಸೋಕೆ ಆರಂಭಿಸಿದರು. ಬಳಿಕ 'ಸ್ಪೆಷಲ್ 30' ಸಿನಿಮಾ ಅವಕಾಶ ಸಿಕ್ಕಿತ್ತು. ಬಳಿಕ ಬುಚ್ಚಿಬಾಬು 'ಉಪ್ಪೆನಾ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

More from Filmibeat

English summary
kannada Actress kruti shetty photo shoot;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X