'ಅಯ್ಯನ ಮನೆ' ವೆಬ್‌ ಸೀರಿಸ್ ಮೇಕಿಂಗ್ ಫನ್ ಹೇಗಿತ್ತು ಗೊತ್ತಾ?

By ಪ್ರಿಯಾ ದೊರೆ

ಕನ್ನಡ ಜೀ 5 ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಮೊದಲ ಬಾರಿಗೆ ಕನ್ನಡದ ವೆಬ್ ಸಿರೀಸ್ ಕಳೆದ ವಾರವಷ್ಟೇ ರಿಲೀಸ್ ಆಗಿದೆ.ಆರು ಎಪಿಸೋಡ್‌ಗಳಿರುವ 'ಅಯ್ಯನ ಮನೆ' ವೆಬ್ ಸೀರಿಸ್ ಅನ್ನು ಒಂದೇ ದಿನ ರಿಲೀಸ್ ಮಾಡಲಾಗಿತ್ತು. ಈಗಾಗಲೇ ಈ ವೆಬ್ ಸೀರಿಸ್ ಅನ್ನು ಲಕ್ಷಾಂತರ ಮಂದಿ ನೋಡಿ ಮೆಚ್ಚಿಕೊಂಡಿದ್ದಾಗಿದೆ.

'ಅಯ್ಯನ ಮನೆ' ವೆಬ್ ಸೀರೀಸ್‌ನಲ್ಲಿ ರೋಚಕಥೆ, ರಹಸ್ಯ, ಸಂಸ್ಕೃತಿ, ದೈವಭಕ್ತಿ, ಮಾನಸಿಕ ತಳಮಳ, ಮುಗ್ಧ ಮನಸ್ಸುಗಳ ನಡುವೆ ನಡೆದ ಕಥೆ ಇದಾಗಿತ್ತು.

Actress Kushee Ravi shares BTS video from Ayyana Mane s set

ಪ್ರತಿಯೊಂದು ಸಂಚಿಕೆಯೂ 18 ನಿಮಿಷಗಳ ಕಾಲ ಇದ್ದರೂ ಒಂದು ಸಂಚಿಕೆಯ ಬಳಿಕ ಕುತೂಹಲ ತಾಳಲಾರದೇ ಬ್ರೇಕ್ ಪಡೆಯದೆಯೇ ಅಷ್ಟೂ ಸಂಚಿಕೆಯನ್ನು ನೋಡುವಂತೆ ಮಾಡಿತ್ತು.

ಅಯ್ಯನ ಮನೆ

ಜಾಜಿ ಮತ್ತು ದುಷ್ಯಂತನ ಮದುವೆಯಿಂದ ಮೊದಲ ದಿನದಿಂದ ಶುರುವಾಗುವ ಕಥೆ ಸೊಸೆ ಸೇರು ಹೊದ್ದು ಮನೆಗೆ ಕಾಲಿಡುತ್ತಿದ್ದಂತೆಯೇ ಮಾವನ ಸಾವು ಆತಂಕವನ್ನು ಉಂಟು ಮಾಡುತ್ತದೆ. ಮನೆಯಲ್ಲಿ ದೈವವಿದೆ. ಅದರಿಂದಲೇ ಈ ಅಂತಸ್ತು ಐಶ್ವರ್ಯ ಸಿಕ್ಕಿರುವುದು ಎನ್ನುತ್ತಲೇ ಶುರುವಾಗುವ ಕಥೆ ಕೊನೆಗೆ ಮನೆಯ ಸೊಸೆಯಂದಿರೆಲ್ಲಾ ಸಾಲು ಸಾಲಾಗಿ ಸಾವನ್ನಪ್ಪಲು ಕಾರಣವೇನು ಎಂದು ಭಯವೂ ಹುಟ್ಟಿಕೊಳ್ಳುತ್ತದೆ. ಮನೆಯಲ್ಲಿ ಆರು ಸಾವುಗಳು ಸಂಭವಿಸುತ್ತವೆ ಎಂಬ ದೈವದ ಮಾತು ಜಾಜಿಯನ್ನು ಕುಗ್ಗಿಸುತ್ತದೆ. ಮನೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ದುರ್ಘಟನೆ ಕಾರಣ ಯಾರು ಎಂಬ ಪ್ರಶ್ನೆಯ ಹಿಂದೆಯೇ ಜಾಜಿ ಹೊರಡುತ್ತಾಳೆ.


ರಹಸ್ಯಗಳನ್ನು ಬೇಧಿಸಿದ ಜಾಜಿ

ದೈವದ ಮಾತಿನಂತೆ ಆರನೇಯ ಸಾವು ಸ್ವತಃ ಜಾಜಿ ಅತ್ತೆಯದ್ದಾಗಿರುತ್ತದೆ. ಚಿಕ್ಕವಯಸ್ಸಿನಿಂದಲೂ ತಾನೇ ರಾಣಿ. ತಾನು ಹೇಳಿದಂತೆ ಮನೆ ನಡೆಯಬೇಕು ಎಂಬ ಮನಸ್ಥಿತಿಯಲ್ಲಿದ್ದ ನಾಗಲಾಂಬಿಕೆ ಎಲ್ಲಾ ಅನಾಹುತಗಳಿಗೆ ಕಾರಣ ಎಂಬುದನ್ನು ಮನೆಯವರಿಗೆ ತಿಳಿಸದೆಯೇ ಕಥೆ ಮುಕ್ತಾಯಗೊಳ್ಳುತ್ತದೆ. ನಾಗಲಾಂಬಿಕೆಯ ಸಾವಿನೊಂದಿಗೆ ಸಾಕಷ್ಟು ರಹಸ್ಯಗಳು ಮುಚ್ಚಿ ಹೋಗುತ್ತವೆ. ಜಾಜಿ ಒಬ್ಬಳೇ ಮನೆಯ ರಹಸ್ಯಗಳನ್ನು ಬೇಧೀಸಿ, ಕೊನೆಗೆ ಇದಕ್ಕೆಲ್ಲಾ ನಾಗಲಾಂಬಿಕೆಯೇ ಕಾರಣ ಎಂಬುದು ಗೊತ್ತಾಗುತ್ತದೆ. ಆದರೆ, ಈ ಸತ್ಯವನ್ನು ಮನೆಯವರಿಗೆ ತಿಳಿಸದೆಯೇ ವೆಬ್ ಸೀರೀಸ್ ಮುಕ್ತಾಯಗೊಳ್ಳುತ್ತದೆ.

'ಅಯ್ಯನ ಮನೆ' ಕಲಾವಿದರು

ಒಟ್ನಲ್ಲಿ ವೆಬ್ ಸೀರೀಸ್ ಆರಂಭದಿಂದ ಕೊನೆಯವರೆಗೂ ಒಂದೇ ತೆರನಾದ ಕುತೂಹಲವನ್ನು ಉಳಿಸಿಕೊಂಡು ಬಂದಿದ್ದು ಕೊನೆಯ ಸಂಚಿಕೆ ಸತ್ಯವನ್ನು ರಿವೀಲ್ ಮಾಡುತ್ತದೆ. ಸದ್ಯ ಈ ವೆಬ್ ಸೀರೀಸ್ ಬಗ್ಗೆಯೇ ಎಲ್ಲೆಡೆ ಮಾತನಾಡಲಾಗುತ್ತಿದೆ. ಇನ್ನು ಈ ವೆಬ್ ಸೀರೀಸ್‌ನ ಶೂಟಿಂಗ್ ಬಿಟಿಎಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಟಿ ಖುಷಿರವಿ, ಮಾನಸಿ ಸುಧೀರ್, ಹಿತಾ ಚಂದ್ರಶೇಖರ್, ಖುಷಿ ಚಂದ್ರಶೇಖರ್, ಅರ್ಚನಾ ಕೊಟ್ಟಿಗೆ, ಅನಘಾ ನಾಗೇಶ್, ರಮ್ಯಾ ಶಂಕರ್, ಗೌರಿ ಕೃಷ್ಣ, ಹಾಗೂ ನಟರಾದ ಶೋಭರಾಜ್ ಪಾವೂರ್, ಆರ್ ಜೆ ಅನೂಪ್, ಅನಿರುದ್ಧ ಆಚಾರ್ಯ, ಅಕ್ಷಯ ನಾಯಕ ಸೇರಿದಂತೆ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ.

BTS ಹಂಚಿಕೊಂಡ ನಟಿಯರು

ಸದ್ಯ 'ಅಯ್ಯನ ಮನೆ' ವೆಬ್ ಸೀರೀಸ್ ಸುದ್ದಿ ಎಲ್ಲೆಡೆ ಓಡಾಡುತ್ತಿದ್ದು, ನಟಿ ಖುಷಿರವಿ ಅವರು ಇದರ ಶೂಟಿಂಗ್‌ ಮೇಕಿಂಗ್ ವೀಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ನಟಿ ಹಿತಾ ಚಂದ್ರಶೇಖರ್ ಕೂಡ ವೆಬ್ ಸೀರೀಸ್ ಶೂಟಿಂಗ್ ವೇಳೆ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಅಯ್ಯನ ಮನೆ' ನೋಡಿದ ಪ್ರತಿಯೊಬ್ಬರೂ ಕನ್ನಡದಲ್ಲಿ ಇಂತಹ ಇನ್ನಷ್ಟು ವೆಬ್ ಸೀರೀಸ್ ಗಳು ಮೂಡಿ ಬರಲಿ ಎಂದು ಬಯಸಿದ್ದಾರೆ.

More from Filmibeat

English summary
Zee5 kannada ayyana mane web series Bts shared by actress;
Read more about: ott actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X