ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ನಾಯಕಿ ಲಾಸ್ಯ ನಾಗ್
Recommended Video

ಕನ್ನಡದ 'ಬಿಗ್ ಬಾಸ್'ಗೆ ಪ್ರತಿವಾರ ಸಾಲು ಸಾಲಾಗಿ ಕಲಾವಿದರು ಹಾಗೂ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಭೇಟಿ ನೀಡುತ್ತಲೇ ಇದ್ದಾರೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ನಟಿ ವೈಷ್ಣವಿ ಅನಾರೋಗ್ಯದ ಸಮಸ್ಯೆಯಿಂದ ಹೊರಗಡೆ ಬಂದರು. ವೈಷ್ಣವಿ ನಂತರ ಈಗ ಬಿಗ್ ಬಾಸ್ ಮನೆಗೆ ಇಬ್ಬರು ಯುವತಿಯರು ಎಂಟ್ರಿಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಒರ್ವ ನಾಯಕಿಗೆ ಸಾಕಷ್ಟು ಅಭಿಮಾನಿಗಳು ಇರೋದ್ದರಿಂದ ಆಕೆಯ ಧ್ವನಿ ಕೇಳಿಯೇ ಇವ್ರು ಪಕ್ಕಾ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಅಂತ ಕಂಡುಹಿಡಿದಿದ್ದಾರೆ. ಆದ್ರೆ, ಸಂಯುಕ್ತ ಜೊತೆ ಮತ್ತೊಬ್ಬ ನಾಯಕಿ ಯಾರು ಅನ್ನೋದು ಮಾತ್ರ ಇನ್ನೂ ಕ್ಲಾರಿಟಿ ಸಿಕ್ಕಿರಲಿಲ್ಲ. ಆದರೆ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಗೆ ಹೋಗಿರುವ ಮತ್ತೊರ್ವ ನಾಯಕಿ ಲಾಸ್ಯ ನಾಗ್ ಅನ್ನೋದು ತಿಳಿದು ಬಂದಿದೆ.

ಲಾಸ್ಯ ನಾಗ್ ಈಗಾಗಲೇ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್'ನಲ್ಲಿ ಕಾಣಿಸಿಕೊಂಡಿದ್ದ ನಟಿ. ಸದ್ಯ 'ಅಸತೋಮ ಸದ್ಗಮಯ' ಚಿತ್ರದಲ್ಲಿ ನಾಯಕಿಯಾಗಿರುವ ಲಾಸ್ಯ ನಾಗ್ ಭರತನಾಟ್ಯ ಡ್ಯಾನ್ಸರ್ ಆಗಿದ್ದಾರೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಪದ್ಮಾವತಿ' ಧಾರಾವಾಹಿಯಲ್ಲೂ ಲಾಸ್ಯ ಅವರನ್ನ ನೋಡಬಹುದು. ಇಬ್ಬರು ನಟಿಯರ ಜೊತೆಯಲ್ಲಿ ಸಣ್ಣ ಮಗುವೊಂದು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದೆ. ಬಿಗ್ ಮನೆಗೆ ಎಂಟ್ರಿರುವ ಇವರಿಬ್ಬರು ಸ್ಪರ್ಧಿನಾ ಅಥವಾ ಅತಿಥಿನಾ ಎಂದು ಕಾದುನೋಡಬೇಕಿದೆ.


Click it and Unblock the Notifications











