Lasya Nagraj: ಬಿಂದಾಸ್ ಬೆಡಗಿ ಲಾಸ್ಯ ನಾಗರಾಜ್ ಫಿಟ್‌ನೆಸ್ ಸೀಕ್ರೆಟ್ ಏನು?

By ಪ್ರಿಯಾ ದೊರೆ

ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ. ಇವರು ಕನ್ನಡ ಬಿಗ್ ಬಾಸ್ ಸೀಸನ್- 5 ರ ವಿಶೇಷ ಸ್ಪರ್ಧಿಯಾಗಿದ್ದರು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು.

ಅಂದಹಾಗೆ, ಬಿಗ್ ಬಾಸ್‌ನಿಂದ ಹೊರ ಬಂದ ಲಾಸ್ಯ ಕೆಲ ಸಿನಿಮಾ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.

Actress Lasya Nagaraj fitness, beauty and diet secrets

ಸುದ್ದಿಯಾಗಿ ಹಾಟ್‌ ಫೋಟೋ

ಫೋಟೋ ಎಂದರೆ ಎಲ್ಲರಿಗೂ ಆಕರ್ಷಣೆ. ನಟಿಯರು ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಬಿಗ್ ಬಾಸ್ ಸೀಸನ್- 5 ರ ಸ್ಪರ್ಧಿ ಆಗಿದ್ದ ಲಾಸ್ಯ ನಾಗರಾಜ್ ಪದೇ ಪದೆ ಕ್ಯಾಮರಾಗೆ ಪೋಸ್ ನೀಡುತ್ತಾರೆ. ಕೆಲ ಫೋಟೋಗಳು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತ್ತು. ಲಾಸ್ಯ ನಾಗರಾಜ್ ಸಿಕ್ಕಾಪಟ್ಟೆ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿದ್ದರು. ಅವರ ಫೋಟೋವನ್ನು ತಮ್ಮ ಇನ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡು ಬಹಳ ಸುದ್ದಿಯಾಗಿದ್ದರು. ಇನ್ನು ಟ್ರೆಡಿಷನಲ್‌ ಹಾಗೂ ವೆಸ್ಟರ್ನ್‌ ಉಡುಗೆಗಳಲ್ಲಿ ಸುಂದರವಾಗಿ ಕಾಣಿಸುತ್ತಾರೆ.

ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟನೆ

ಇನ್ನು ಮಿಸ್‌ ಕಾನ್ಫಿಡೆನ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡ ಲಾಸ್ಯ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ಅಸತೋಮ ಸದ್ಗಮಯ', 'ಹೆಲೆನ್', 'ಆಪರೇಷನ್ ಯು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ಮಿಡ್ ನೈಟ್ ಚಿಲ್ಡ್ರನ್' ವೆಬ್ ಸಿರೀಸ್‌ನಲ್ಲೂ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೇ, ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಲಾಸ್ಯ ಇದೀಗ ಭರ್ಜರಿ ಬ್ಯಾಚ್ಯುಲರ್ಸ್‌ನಲ್ಲಿ ಜಗ್ಗಪ್ಪ ಜೋಡಿಯಾಗಿದ್ದಾರೆ. ಆಕೆ ಶೋನಲ್ಲಿ ಸೆಂಟರ್‌ ಆಫ್‌ ದಿ ಅಟ್ರ್ಯಾಕ್ಷನ್‌ ಆಗಿದ್ದಾರೆ.

ಬೈಕ್‌ ಕಲಿತದ್ದೇ ದೊಡ್ಡ ಕಥೆ

ಲಾಸ್ಯ ಚಿಕ್ಕ ವಯಸ್ಸಿನಿಂದಲೂ ಬೈಕ್ ಓಡಿಸುವ ಆಸೆ ಇತ್ತಂತೆ. ಹಾಗಾಗಿ ತಾವು ಎಂಟನೇ ತರಗತಿಯಲ್ಲಿರುವಾಗ ಕದ್ದು ಮುಚ್ಚಿ ಬೈಕ್‌ ಕಲಿತರಂತೆ. ಬೆಳಗ್ಗೆ ಐದು ಗಂಟೆಗೆ ಎದ್ದು ಹೋಗಿ FZ ಬೈಕ್‌ನಲ್ಲಿ ರೈಡಿಂಗ್ ಕಲಿತರಂತೆ. ಹೀಗಾಗಿ ಲಾಸ್ಯ ಅವರು ಕೊಯಂಬತ್ತೂರ್‌ನಲ್ಲಿ ಟ್ರಾಕ್ ರೇಸಿಂಗ್ ಕಲಿತರಂತೆ. ಒಂದು ದಿನ ಸಿಗ್ನಲ್‌ನಲ್ಲಿ ಬೈಕ್‌ ಓಡಿಸುವಾಗ ಅವರ ತಂದೆ ಪಕ್ಕದಲ್ಲೇ ಇದ್ದರಂತೆ. ಆಗ ಅವರ ತಂದೆಗೆ ಮಗಳು ಬೈಕ್‌ ಓಡಿಸುತ್ತಿರುವುದು ಗೊತ್ತಾಯಿತಂತೆ. ಇನ್ನು ಹಲವು ಬೈಕ್‌ಗಳನ್ನು ಓಡಿಸಿರುವ ಲಾಸ್ಯ ಅವರಿಗೆ ಹಿಮಾಚಲಕ್ಕೆ ಬೈಕ್‌ ರೈಡ್‌ ಮಾಡುವ ಕನಸಿದೆಯಂತೆ.

Actress Lasya Nagaraj fitness, beauty and diet secrets

ಫಿಟ್‌ನೆಸ್‌ ಜೊತೆಗೆ ನಾನ್‌ವೆಜ್ ಪ್ರಿಯೆ

ಫಿಟ್‌ನೆಸ್‌ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್ ಆಗಿರುವ ಲಾಸ್ಯ ತಾವು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆಯೂ ಕಾಳಜಿ ವಹಿಸುತ್ತಾರಂತೆ. ಹದಿನೈದು ದಿನಕ್ಕೊಮ್ಮೆ ಡಯಟ್‌ ಬ್ರೇಕ್‌ ಮಾಡುವ ಲಾಸ್ಯ ಅವರು ತಮ್ಮಿಷ್ಟದ ಸ್ವೀಟ್ಸ್‌ ಹಾಗೂ ಚಾಟ್ಸ್‌ ತಿನ್ನುತ್ತಾರೆ. ಅಮ್ಮನ ಕೈ ರುಚಿ ಬಹಳ ಇಷ್ಟ ಪಡುವ ಜೊತೆಗೆ ತಾಯಿ ಕೂಡ ಬೆಸ್ಟ್‌ ಕುಕ್‌ ಎಂದು ಹೇಳಿದ್ದಾರೆ. ಇನ್ನು ಮನೆಯಲ್ಲಿ ಪಕ್ಕಾ ಸಸ್ಯಹಾರಿ ಆಗಿರುವ ಲಾಸ್ಯ ಅವರು ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಪಕ್ಕಾ ನಾನ್‌ ವೆಜಿಟೇರಿಯನ್‌ ಆಗುತ್ತಾರಂತೆ. ಚಿಕನ್‌, ಫಿಶ್ ಬಹಳ ಇಷ್ಟಪಟ್ಟು ಸೇವಿಸುತ್ತಾರಂತೆ. ಫಿಟ್‌ನೆಸ್‌ಗಾಗಿ ಯೋಗ ಸಹ ಮಾಡುತ್ತಾರೆ.

More from Filmibeat

English summary
Lasya Nagaraj fitness and diet secrets. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X