'ಬ್ರೋ' ಎಂದು ಕರೆದು ಆ ನಟನನ್ನೇ ಮದುವೆಯಾಗಿ ಪೋಷಕರಾಗಲು ಎರಡು ಕಂಡೀಷನ್ ಹಾಕಿದ ನಟಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮ ವೀಕ್ಷಕರ ಮನ ಗೆದ್ದಿದೆ. ಇದೀಗ ಈ ಶೋನಲ್ಲಿ ನಟಿ ಲಾವಣ್ಯ ತಮ್ಮ ಕಂಡೀಷನ್ ಬಗ್ಗೆ ಹೇಳಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ನಟಿಯರಲ್ಲಿ ಪ್ರೀತಿಸಿ ಮದುವೆಯಾದ ನಟಿ ಲಾವಣ್ಯ ಭಾರದ್ವಾಜ್ ಹಾಗೂ ನಟ ಶಶಿ ಹೆಗಡೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಇಬ್ಬರೂ ಕೂಡ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಲಾವಣ್ಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪೂರ್ಣಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಟ ಶಶಿ ಹೆಗಡೆ 'ಅಮೃತಧಾರೆ' ಸೀರಿಯಲ್‌ನಲ್ಲಿ ಜೀವನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎರಡು ಕಂಡೀಷನ್ ಹಾಕಿದ ನಟಿ
ಇಬ್ಬರೂ ಜೋಡಿಗಳು ಮದುವೆಯಾಗಿ ಅದಾಗಲೇ ಎರಡು ವರ್ಷಗಳು ಕಳೆದಿವೆ. ಆದರೂ ಕೂಡ ಇಬ್ಬರೂ ಇನ್ನು ಪೋಷಕರಾಗಿ ಬಡ್ತಿ ಪಡೆದಿಲ್ಲ. ಯಾಕೆ ಎಂದು ಸ್ಟಾರ್ ಸುವರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಲಾವಣ್ಯಎರಡು ಕಂಡೀಷನ್ ಅನ್ನು ಹಾಕಿದ್ದಾರಂತೆ. ಅದೆರಡೂ ಕಂಡೀಷನ್ ಅನ್ನು ಶಶಿ ಕಂಪ್ಲೀಟ್ ಮಾಡುವವರೆಗೂ ಮಗು ಮಾಡಿಕೊಳ್ಳಲು ಒಪ್ಪಿಗೆ ಕೊಡುವುದಿಲ್ಲವಂತೆ. ಅದೆರಡೂ ಕಂಡೀಷನ್ ಏನು ಗೊತ್ತಾ...?
ಹನಿಮೂನ್ ಗೆ ಹೋಗದೇ ಪೋಷಕರಾಗಲ್ವಂತೆ
ಲಾವಣ್ಯ ಮತ್ತು ಶಶಿ ಅವರು ಇನ್ನೂ ಹನಿಮೂನ್ ಗೆ ಹೋಗಿಲ್ವಂತೆ. ಎರಡು ಬಾರಿ ಹನಿಮೂನ್ ಗೆಂದು ಪ್ಲಾನ್ ಮಾಡಿದಾಗಲೂ ಸಂಬಂಧಿಕರು ತೀರಿಕೊಂಡರಂತೆ. ಹಾಗಾಗಿ ಇಬ್ಬರೂ ಹನಿಮೂನ್ ಗೆ ಹೋಗಲು ಸಾಧ್ಯವಾಗಲಿಲ್ಲ. ಈಗ ಹನಿಮೂನ್‌ಗೆ ಹೋಗಲು ಈಗ ಪ್ಲಾನ್ ಮಾಡಿದ್ದಾರೆ. ಅದೂ ಕೂಡ ಜೂನ್‌ನಲ್ಲಿ ಹನಿಮೂನ್‌ಗೆ ಕರೆದುಕೊಂಡು ಹೋಗುವುದಾಗಿ ಶಶಿ, ಲಾವಣ್ಯಾಗೆ ಹೇಳಿದ್ದಾರಂತೆ. ಮನಾಲಿ ಮತ್ತು ವಿದೇಶಕ್ಕೆ ಹನಿಮೂನ್ ಕರೆದುಕೊಂಡು ಹೋದ ಬಳಿಕವಷ್ಟೇ ಪೋಷಕರಾಗಿ ಬಡ್ತಿ ಪಡೆಯಲು ಸಾಧ್ಯ ಎಂದು ಲಾವಣ್ಯ ಕಂಡಿಷನ್ ಹಾಕಿದ್ದರು.

ಕೆಲ ಧಾರಾವಾಹಿಗಳಲ್ಲಿ ಲಾವಣ್ಯ ನಟನೆ
ನಟಿ ಲಾವಣ್ಯ ಬಾಲ್ಯದಿಂದಲೂ ನೃತ್ಯದ ಮೇಲೆ ಹೆಚ್ಚು ಒಲವು. ಅಕಸ್ಮಾತ್ ಆಗಿ ಕಿರುತೆರೆಗೆ ಬಂದರು. ಇಲ್ಲೇ ಬದುಕನ್ನು ಕಂಡುಕೊಂಡ ಲಾವಣ್ಯ ಜೀವನ ಸಂಗಾತಿಯನ್ನೂ ಇಲ್ಲೇ ಹುಡುಕಿಕೊಂಡಿದ್ದಾರೆ. 'ರಾಧಾ ರಮಣ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಲಾವಣ್ಯ ಬಣ್ಣ ಹಚ್ಚಿದರು. ಬಳಿಕ ರಾಜಾ ರಾಣಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಅವಕಾಶವನ್ನು ಕೈ ಬಿಡಲಾಗದೇ, 'ರಾಜಾ ರಾಣಿ' ಧಾರಾವಾಹಿಗೆ ಬಂದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸಂಘರ್ಷ ಎಂಬ ಧಾರಾವಾಹಿಯಲ್ಲಿ ನಟಿಸಿದರು. ಹೀಗೆ ನಟನೆಯನ್ನು ಮುಂದುವರಿಸಿ, ದಾಸ ಪುರಂದರ ಎಂಬ ಧಾರಾವಾಹಿಯಲ್ಲೂ ನಟಿಸಿದರು. ಸದ್ಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ.
ಕಿರುತೆರೆ ಮೂಲಕವೇ ಬಾಳ ಸಂಗಾತಿ ಆಯ್ಕೆ
ಇನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾಗಿರುವ ಶಶಿ ಹಲವು ಸಮಯದಿಂದ ಕಿರುತೆರೆಯಲ್ಲಿ ಇದ್ದಾರೆ. ಶಶಿ ಅವರ ಕುಟುಂಬ ಶಿರಸಿಯಲ್ಲೇ ನೆಲೆಸಿದ್ದಾರೆ. ಶಶಿಧರ್ ಹೆಗ್ಡೆ ಮತ್ತು ಲಾವಣ್ಯ ಇಬ್ಬರೂ 'ರಾಜಾ-ರಾಣಿ' ಧಾರಾವಾಹಿಯಲ್ಲಿ ಪರಿಚಯವಾಗಿ ನಂತರ ಪ್ರೀತಿಸಲು ಶುರು ಮಾಡಿದರು. 'ರಾಜ-ರಾಣಿ' ಧಾರಾವಾಹಿಯಲ್ಲಿ ಪ್ರಮುಖ ಅಣ್ಣ-ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ, ಸಹವಾಸ ದೋಷ ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು. ರಾಜಾ-ರಾಣಿ ಧಾರಾವಾಹಿಯಲ್ಲಿ ಶಶಿ ಅವರನ್ನು ಲಾವಣ್ಯ ಬ್ರೋ ಎಂದು ಕರೆಯುತ್ತಿದ್ದರಂತೆ. ಬೋ ಈಗ ಹಬ್ಬಿ ಆಗಿ ಬದಲಾಗಿದ್ದಾರೆ.


Click it and Unblock the Notifications











